ಯಶ್​-ರಾಧಿಕಾ ಸರ್ಪ್ರೈಸ್​ ವಿಸಿಟ್.

ಸ್ಯಾಂಡಲ್​ವುಡ್​​ನ ಕ್ಯೂಟೆಸ್ಟ್​​​ ಕಪಲ್​​ ಎಂದು ಕರೆಸಿಕೊಳ್ಳೋ ರಾಕಿಂಗ್​ ಸ್ಟಾರ್​ ಯಶ್​ ಹಾಗೂ ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಪ್ರೇಮಿಗಳ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್ ಇಬ್ಬರು ರಾಜಸ್ಥಾನದ ಜೈಪುರದಲ್ಲಿ ವ್ಯಾಲೆಂಟೈನ್ಸ್​​ ಡೇ ವಿಶ್​​ ಮಾಡಿಕೊಂಡಿದ್ದಾರೆ.

ಈ ವಿಶೇಷವಾದ ಕ್ಷಣದ ಫೋಟೋವನ್ನು ರಾಧಿಕಾ ಪಂಡಿತ್​​​​​ ತಮ್ಮ ಇನ್​​​​​ಸ್ಟಾಗ್ರಾಮ್​ನಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಸ್ಯಾಟಂಡಲ್​ವುಡ್​​​ನಲ್ಲಿ ಸೂಪರ್​​ ಜೋಡಿಗಳಲ್ಲಿ ಯಶ್ ಮತ್ತು ರಾಧಿಕಾ ಪಂಡಿತ್ ಕೂಡ ಒಬ್ಬರು. ಈ ಇಬ್ಬರೂ ಕೂಡ ಪ್ರೀತಿಸಿ ಮದುವೆಯಾದವರು. ಹೀಗಾಗಿ ಈ ವಿಶೇಷವಾದ ದಿನದಂದು ಇಬ್ಬರು ಜೈಪುರದಲ್ಲಿ ವ್ಯಾಲೆಂಟೈನ್ ಡೇ ಸೆಲೆಬ್ರೇಷನ್ ಮಾಡಿದ್ದಾರೆ.

ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ರಾಕಿಂಗ್​ ಸ್ಟಾರ್​ ಯಶ್ ಹಾಗೂ ರಾಧಿಕಾ ಪಂಡಿತ್​​​ ಅವರ ಫೋಟೋವನ್ನು ನೋಡಿದ ಅಭಿಮಾನಿಗಳು ಅಣ್ಣ-ಅತ್ತಿಗೆ ಕ್ಯೂಟ್ ಕ್ಯೂಟ್ ಎಂದು ಕಾಮೆಂಟ್​​ ಮಾಡಿದ್ದಾರೆ.

ಮತ್ತೊಂದು ಕಡೆ ಈ ಜೋಡಿ ಫೆಬ್ರವರಿ 14 ರಂದು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಮದುವೆ ಕೂಡ ನಡೆದಿತ್ತು. ಈ ಮದುವೆಗೆ ಯಶ್ ದಂಪತಿ ಹೋಗಿತ್ತು ಎಂದು ಹೇಳಲಾಗಿತ್ತು. ಆದರೆ ಎಲ್ಲಿಯೂ ಯಶ್​​ ದಂಪತಿ ಈ ಬಗ್ಗೆ ಹೇಳಿಕೊಂಡಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿರಿಯ ರಂಗಭೂಮಿ ಮತ್ತು ಬಾಲಿವುಡ್ ನಟ ಜಾವೇದ್ ಖಾನ್ ಅಮ್ರೋಹಿ ನಿಧನರಾಗಿದ್ದಾರೆ.

Thu Feb 16 , 2023
ಹಿರಿಯ ರಂಗಭೂಮಿ ಮತ್ತು ಬಾಲಿವುಡ್ ನಟ ಜಾವೇದ್ ಖಾನ್ ಅಮ್ರೋಹಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಜನಪ್ರಿಯ ಡಿಡಿ ಧಾರಾವಾಹಿ ನುಕ್ಕಡ್, ಲಗಾನ್ ಮತ್ತು ಚಕ್ ದೇ ಮತ್ತಿತರ ಚಿತ್ರಗಳಲ್ಲಿನ ಅಮೋಘ ಅಭಿನಯದಿಂದ ಅವರು ಪ್ರಸಿದ್ದರಾಗಿದ್ದರು. ಮುಂಬೈ: ಹಿರಿಯ ರಂಗಭೂಮಿ ಮತ್ತು ಬಾಲಿವುಡ್ ನಟ ಜಾವೇದ್ ಖಾನ್ ಅಮ್ರೋಹಿ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಜನಪ್ರಿಯ ಡಿಡಿ ಧಾರಾವಾಹಿ ನುಕ್ಕಡ್, ಲಗಾನ್ ಮತ್ತು ಚಕ್ ದೇ ಮತ್ತಿತರ […]

Advertisement

Wordpress Social Share Plugin powered by Ultimatelysocial