ದೇಶದಲ್ಲಿ ಕೋವಿಡ್ -೧೯ ವೈರಸ್ ಹಾಟ್ ಸ್ಪಾಟ್ ದೇಶಗಳಲ್ಲಿ ಭಾರತ ೯ನೇ ಸ್ಥಾನಕ್ಕೇರಿದೆ. ಹಾಗೆಯೇ ೧.೬ ಲಕ್ಷಕ್ಕೇರಿದ ಸೊಂಕಿತರ ಸಂಖ್ಯೆ, ಮಾತ್ರವಲ್ಲದೆ ಮೃತರ ಸಂಖ್ಯೆ ಕೂಡ ಚೀನಾದ ಅಂಕಿ ಅಂಶಗಳನ್ನು ಹಿಂದಕ್ಕೆ ಹಾಕಿದೆ ಎಂದು ವರದಿ ಮಾಡಲಾಗಿದೆ. ಭಾರತದಲ್ಲಿ ೧.೬೫,೩೮೬ಕ್ಕೆ ಏರಿದ ಸೋಂಕಿತರ ಸಂಖ್ಯೆ, ಚೀನಾದಲ್ಲಿನ ವೈರಸ್ ಸೋಂಕಿತರ ಸಂಖ್ಯೆಗಿAತ (೮೪,೧೦೬) ದುಪ್ಪಟ್ಟಾಗಿದೆ. ಅಲ್ಲದೆ ಮೃತರ ಪ್ರಮಾಣದಲ್ಲೂ ಭಾರತ (೪,೭೧೧) ಚೀನಾವನ್ನು (೪,೬೩೪) ಹಿಂದಿಕ್ಕಿದೆ. ಚೀನಾದಲ್ಲಿ ೨೦೧೯ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಕೋವಿಡ್ -೧೯ ವೈರಸ್ ಕಾಣಿಸಿಕೊಂಡು, ಜಗತ್ತಿನಾದ್ಯಂತ ಹರಡಲು ಆರಂಭಿಸಿತು. ಇಲ್ಲಿಯವರೆಗೂ ಸುಮಾರು ೫೭ ಲಕ್ಷಕ್ಕಿಂತ ಹೆಚ್ಚು ಜನರು ವೈರಾಣುವಿನಿಂದ ನೋವು ಅನುಬವಿಸಿದ್ದು, ಸುಮಾರು ೩.೫ ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೇ ಚೀನಾದಲ್ಲಿ ವೈರಸ್ ಪೀಡಿತರ ಪ್ರಕರಣಗಳು ಕಡಿಮೆಯಾಗಿದ್ದು, ಅಮೆರಿಕಾ, ಬ್ರೆಜಿಲ್, ಸ್ಪೇನ್, ಇಟಲಿ ಮುಂತಾದ ರಾಷ್ಟ್ರಗಳಲ್ಲಿ ವೈರಸ್ ಮಾರಾಣಾಂತಿಕವಾಗಿ ಪರಿಣಮಿಸಿದೆ.
ಚೀನಾವನ್ನು ಹಿಂದಿಕ್ಕಿದ ಭಾರತ
Please follow and like us: