ರೈಲ್ವೆ ನೇಮಕಾತಿಗೆ ಮುಂದಾಗಿ: ಸೂಕ್ತ ಬೇಡಿಕೆ ಈಡೇರಿಸುವಂತೆ ಡಿಕ್ರೂಜ್ ಆಗ್ರಹ.

ಸರ್ಕಾರ ನೈಋತ್ಯ ರೈಲ್ವೆ ವಲಯದಲ್ಲಿನ ಹಾಗೂ ಭಾರತೀಯ ರೈಲ್ವೆ ವಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಶೀಘ್ರವಾಗಿ ನೇಮಕ ಮಾಡಬೇಕು. ಅಲ್ಲದೇ ನೈಋತ್ಯ ರೈಲ್ವೆ ಮಜ್ದೂರ್ ಯುನಿಯನ್ ಸದಸ್ಯರ ಹಾಗೂ ಎಸ್.ಡಬ್ಲೂ.ಆರ್ ಸಿಬ್ಬಂದಿಗಳ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು ಎಂದು ಎನ್.ಆರ್.ಎಂ.ಎಸ್ ಮುಖ್ಯಸ್ಥ ಡಾ.ಎ.ಎಂ.ಡಿಕ್ರೂಜ್ ಆಗ್ರಹಿಸಿದ್ದಾರೆ.ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದ ನಾವು ಹೋರಾಟ ಮಾಡುತ್ತಲೇ ನಮ್ಮ ಹಕ್ಕುಗಳನ್ನು ಪಡೆಯುತ್ತಾ ಬಂದಿದ್ದೇವೆ. ಆದರೆ ಸರ್ಕಾರ ಮಾತ್ರ ಸೌಲಭ್ಯಗಳನ್ನು ಒದಗಿಸಲು ಮೀನಾಮೇಷ ಎಣಿಸುತ್ತಿದೆ ಎಂದರು.ಈಗಾಗಲೇ ಡಿಎ ನೀಡುವಲ್ಲಿ ಎಸ್.ಡಬ್ಲೂ.ಆರ್ ಸಾಕಷ್ಟು ವಿಳಂಬ ಮಾಡುವ ಮೂಲಕ ಸಿಬ್ಬಂದಿಗಳಿಗೆ ಸಮಸ್ಯೆ ತಂದೊಡ್ಡಿದೆ. ಈ ಬಗ್ಗೆ ಹೋರಾಟ ಮಾಡಿದ ಬಳಿಕವೇ ಬಿಡುಗಡೆ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಡಿಎ ನೀಡಲು ಲಾಕ್ ಡೌನ್ ಸಂದರ್ಭದಲ್ಲಿ ಪ್ರಯಾಣಿಕರ ರೈಲು ಸ್ಥಗಿತ ಮಾಡಿರುವ ಉದಾಹರಣೆ ಹೇಳಿದ್ದಾರೆ. ಆದರೆ ಸರಕು ಸಾಗಣೆ ರೈಲುಗಳನ್ನು ಓಡಿಸುವ ಮೂಲಕ ಆದಾಯವನ್ನು ತಂದುಕೊಟ್ಟಿದೆ. ಆದರೆ ಇದನ್ನು ನೈಋತ್ಯ ರೈಲ್ವೆ ಇಲಾಖೆ ಮರೆತಿದೆ. ಈ ನಿಟ್ಟಿನಲ್ಲಿ ಕೂಡಲೇ ಸಿಬ್ಬಂದಿಗಳ ಬೇಡಿಕೆಗಳನ್ನು ಈಡೇರಿಸುವ ಕಾರ್ಯವನ್ನು ಮಾಡಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಂಕಿ ಆಕಸ್ಮಿಕ: ಬಿಡಿ ಘಟಕಕ್ಕೆ ಅಪಾರ ಹಾನಿ.

Fri Dec 16 , 2022
  ಬಾಲಾಜಿ ಬಿಡಿ ತಯಾರಿಕ ಕಂಪನಿಯ ಲಕ್ಷ್ಮೇಶ್ವರ ಪಟ್ಟಣದ ಬೈಯಾರ ಓಣಿಯಲ್ಲಿನ ಬಿಡಿ ತಯಾರಿಕ ಘಟಕಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಅವಘಡದಿಂದ ಘಟಕದಲ್ಲಿ ತಯಾರಿಸಿದ ಬಿಡಿಗಳು, ಬಿಡಿ ತಯಾರಿಕ ಕಚ್ಚಾ ಸಾಮಗ್ರಿಗಳಾದ ಎಲೆ, ತಂಬಾಕು ಹಾಗೂ ಇತರೆ ವಸ್ತುಗಳು ಭಸ್ಮಗೊಂಡಿದ್ದು, ಘಟಕದ ತಗಡುಗಳು ಬೆಂಕಿಗಾಹುತಿಯಾಗಿದೆ. ಮಹಮ್ಮದ್ ಗೌಸ್ ಜಮಖಂಡಿ ಎಂಬುವವರಿಗೆ ಸೇರಿದ ಬಿಡಿ ತಯಾರಿಕ ಘಟಕ ಭಸ್ಮಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮಹಮ್ಮದ್ ಗೌಸ್ ಮತ್ತು ಬಿಡಿ ಕಾರ್ಮಿಕರು […]

Advertisement

Wordpress Social Share Plugin powered by Ultimatelysocial