ಚೀನಾವನ್ನು ಹಿಂದಿಕ್ಕಿದ ಭಾರತ

ದೇಶದಲ್ಲಿ  ಕೋವಿಡ್ -೧೯ ವೈರಸ್ ಹಾಟ್ ಸ್ಪಾಟ್ ದೇಶಗಳಲ್ಲಿ ಭಾರತ ೯ನೇ ಸ್ಥಾನಕ್ಕೇರಿದೆ. ಹಾಗೆಯೇ ೧.೬ ಲಕ್ಷಕ್ಕೇರಿದ ಸೊಂಕಿತರ ಸಂಖ್ಯೆ, ಮಾತ್ರವಲ್ಲದೆ ಮೃತರ ಸಂಖ್ಯೆ ಕೂಡ ಚೀನಾದ ಅಂಕಿ ಅಂಶಗಳನ್ನು ಹಿಂದಕ್ಕೆ ಹಾಕಿದೆ ಎಂದು ವರದಿ ಮಾಡಲಾಗಿದೆ. ಭಾರತದಲ್ಲಿ ೧.೬೫,೩೮೬ಕ್ಕೆ ಏರಿದ ಸೋಂಕಿತರ ಸಂಖ್ಯೆ, ಚೀನಾದಲ್ಲಿನ ವೈರಸ್ ಸೋಂಕಿತರ ಸಂಖ್ಯೆಗಿAತ (೮೪,೧೦೬) ದುಪ್ಪಟ್ಟಾಗಿದೆ. ಅಲ್ಲದೆ ಮೃತರ ಪ್ರಮಾಣದಲ್ಲೂ ಭಾರತ (೪,೭೧೧) ಚೀನಾವನ್ನು (೪,೬೩೪) ಹಿಂದಿಕ್ಕಿದೆ. ಚೀನಾದಲ್ಲಿ ೨೦೧೯ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಕೋವಿಡ್ -೧೯ ವೈರಸ್ ಕಾಣಿಸಿಕೊಂಡು, ಜಗತ್ತಿನಾದ್ಯಂತ ಹರಡಲು ಆರಂಭಿಸಿತು. ಇಲ್ಲಿಯವರೆಗೂ ಸುಮಾರು ೫೭ ಲಕ್ಷಕ್ಕಿಂತ ಹೆಚ್ಚು ಜನರು ವೈರಾಣುವಿನಿಂದ ನೋವು ಅನುಬವಿಸಿದ್ದು, ಸುಮಾರು ೩.೫ ಲಕ್ಷಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೇ ಚೀನಾದಲ್ಲಿ ವೈರಸ್ ಪೀಡಿತರ ಪ್ರಕರಣಗಳು ಕಡಿಮೆಯಾಗಿದ್ದು, ಅಮೆರಿಕಾ, ಬ್ರೆಜಿಲ್, ಸ್ಪೇನ್, ಇಟಲಿ ಮುಂತಾದ ರಾಷ್ಟ್ರಗಳಲ್ಲಿ ವೈರಸ್ ಮಾರಾಣಾಂತಿಕವಾಗಿ ಪರಿಣಮಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಆತ್ಮಹತ್ಯೆಗೆ ಶರಣಾದ ಎಆರ್ ಎಸ್ಐ

Fri May 29 , 2020
56 ವರ್ಷದ ಪ್ರಾಯದ ಮಲ್ಲಿಕಾರ್ಜುನ ಗುಬ್ಬಿ ಇಂಡಿಯನ್ ರಿಸರ್ವ್ ಬಾಟಲಿಯನ್ ಮುನಿರಾಬಾದ್ ಕೊಪ್ಪಳದಲ್ಲಿ ಕಾರ್ಯ ಮಿರ್ವಹಿಒಸುತ್ತಿದ್ದ ಇವರು ಕಳೆದ ಆರು ತಿಂಗಳ ಹಿಂದೆ ಎಎರ್ ಎಸ್ ಐ ಆಗಿ ಪದೋನ್ನತಿ ಪಡೆದಿದ್ದರು. ಕೊಪ್ಪಳದಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು, ಮೇ 16ರಂದು ಉಡುಪಿ ಜಿಲ್ಲೆಯ ಅಮಾಸೆಬೈಲು ಪೊಲೀಸ್ ಠಾಣೆಗೆ ವರ್ಗವಾಗಿ ಕರ್ತವ್ಯ ಆರಂಭಿಸಿದ್ದರು. ಇಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ಠಾಣೆಯ ಹತ್ತಿರವಿರುವ ಮರವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುದ್ದಾರೆ, ಕೆಲಸದೊತ್ತಡವೇ […]

Advertisement

Wordpress Social Share Plugin powered by Ultimatelysocial