ಪಣಜಿ: ಗೋವಾದ ಕಲಾಂಗುಟ್ನಲ್ಲಿ ಅಂಗಡಿ ಮಾಲಿಕನೊಬ್ಬ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬೆಂಬಲಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರಿಂದ ಕೆರಳಿದ ಸ್ಥಳೀಯರ ಗುಂಪು ಆತನನ್ನು ಪ್ರಶ್ನಿಸಿದೆ.
ನಂತರ ಆತ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದೇನೆ.
ಜತೆಗೆ “ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುವಂತೆ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ಕ್ರಿಕೆಟ್ ಪಂದ್ಯ ಇತ್ತು.
ಈ ವೇಳೆ ವ್ಲಾಗರ್ ಒಬ್ಬ ಕಲಾಂಗುಟ್ದ ಅಂಗಡಿಗೆ ಬಂದಿದ್ದಾನೆ. “ನೀವು ಯಾರನ್ನು ಬೆಂಬಲಿಸಿ ಹುರಿದುಂಬಿಸುತ್ತೀರಿ?’ ಎಂದು ಕೇಳಿದ್ದಾನೆ. ಇದಕ್ಕೆ ಆತ “ತಾನಿರುವ ಜಾಗ ಮುಸ್ಲಿಂ ಪ್ರದೇಶ ಆಗಿರುವುದರಿಂದ ಪಾಕಿಸ್ತಾನವನ್ನು ಬೆಂಬಲಿಸುತ್ತೇನೆ’ ಎಂದು ಹೇಳಿದ್ದಾನೆ. ಈ ವಿಡಿಯೊ ವೈರಲ್ ಆಗಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada