ಅಭಿಮಾನಿಯ ಮೇಲೆ ಹಲ್ಲೆ ಆರೋಪ : ಸ್ಯಾಂಡಲ್ ವುಡ್ ನಟ ಧನ್ವೀರ್ ವಿರುದ್ಧ ಆರೋಪ ದಾಖಲು…..

 

ಬೆಂಗಳೂರು: ನಟ-ನಟಿಯರನ್ನು ಕಂಡ್ರೆ ಸಾಕು ಯಾರಿಗಾದರೂ ಅವರೊಂದಿಗೆ ಪೋಟೋ ತೆಗೆಸಿಕೊಳ್ಳೋ ಇಷ್ಟ ಬಂದೇ ಬರುತ್ತದೆ. ಇದು ತನ್ನ ನೆಚ್ಚಿನ ನಟನನ್ನು ಕಂಡಾಗ ಮಾತ್ರ ಸ್ವಲ್ಪ ಹೆಚ್ಚೇ ಸರಿ. ಹೀಗೆ ನೆಚ್ಚಿನ ನಟನೊಂದಿಗೆ ಸೆಲ್ಫಿ ತೆಗೆಸಿಕೊಳ್ಳೋದಕ್ಕೆ ಹೋದಂತ ಅಭಿಮಾನಿಯೊಬ್ಬರ ಮೇಲೆ ನಟ ಧನ್ವೀರ್  ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ.

ಅಲ್ಲದೇ ಈ ಕಾರಣದಿಂದಾಗಿಯೇ, ನಟನ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ಕಳೆದ ಫೆ.17ರಂದು ತಡ ರಾತ್ರಿ ನಟ ಧನ್ವೀರ್, ಬೆಂಗಳೂರಿನ ಎಸ್ ಸಿ ರಸ್ತೆಯಲ್ಲಿನ ಅನುಪಮಾ ಥಿಯೇಟರ್ ಗೆ ಬೈ ಟೂ ಲವ್ ಸಿನಿಮಾ ರಿಲೀಸ್ ಸಂಬಂಧ ತೆರಳಿದ್ದರು. ಈ ಬಳಿಕ ತೆರಳುವ ವೇಳೆಯಲ್ಲಿ, ಅದೇ ಸಂದರ್ಭದಲ್ಲಿ ಅಭಿಮಾನಿ ಚಂದ್ರಶೇಖರ್ ಎಂಬುವರು ನಟ ಧನ್ವೀರ್ ನೋಡಿದ್ದಾರೆ. ಕೂಡಲೇ ಅವರ ಬಳಿಗೆ ತೆರಳಿ ಒಂದು ಸೆಲ್ಫಿ ತೆಗೆಸಿಕೊಳ್ಳೋದಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದ್ರೇ ಧನ್ವೀರ್ ಮಾತ್ರ ಇದಕ್ಕೆ ಒಪ್ಪಿಲ್ಲ.

ಬೇಸರಗೊಂಡಂತ ಅಭಿಮಾನಿ ಚಂದ್ರಶೇಖರ್ ಅಸಮಾಧಾನ ಹೊರಹಾಕಿದ್ದಾರೆ. ಈ ವೇಳೆ ನಟ ಧನ್ವೀರ್ ಹಾಗೂ ಆತನ ಜೊತೆಗಿದ್ದಂತ ಬೌನ್ಸರ್ ಗಳು ಸೇರಿ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ. ಈ ಕಾರಣದಿಂದಾಗಿ ಹಲ್ಲೆಗೊಳಗಾದಂತ ಚಂದ್ರಶೇಖರ್ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ದೂರು ಆಧರಿಸಿ, ಈಗ ನಟ ಧನ್ವೀರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಸಿಡಿಸುವ ಮೂಲಕ ಬಿಹಾರದ ಯುವ ಆಟಗಾರ ಶಕೀಬುಲ್ ಗನಿ

Sat Feb 19 , 2022
ಕೊಲ್ಕತ್ತಾ: ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಸಿಡಿಸುವ ಮೂಲಕ ಬಿಹಾರದ ಯುವ ಆಟಗಾರ ಶಕೀಬುಲ್ ಗನಿ ವಿಶ್ವ ದಾಖಲೆ ಬರೆದಿದ್ದಾರೆ.ಬಿಹಾರದ 22 ವರ್ಷದ ಬ್ಯಾಟರ್ ಶಕೀಬುಲ್ ಗನಿ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ 341 ರನ್ ಬಾರಿಸಿದ್ದಾರೆ.405 ಎಸೆತಗಳನ್ನು ಎದುರಿಸಿದ ಗನಿ 341 ರನ್ ಸಿಡಿಸಿದ್ದು, ಪ್ರಥಮ ದರ್ಜೆ ಪಾದರ್ಪಣೆ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿ ಅತಿ […]

Advertisement

Wordpress Social Share Plugin powered by Ultimatelysocial