ಯುದ್ಧವಾದರೆ ಪಾಕಿಸ್ತಾನ-ಚೀನಾ ಎರಡರ ವಿರುದ್ಧವೂ ನಡೆಯುತ್ತದೆ

ಭಾರತ್ ಜೋಡೋ ಯಾತ್ರೆ ವೇಳೆ ರಾಹುಲ್ ಗಾಂಧಿ ಅವರು ಸಶಸ್ತ್ರ ಪಡೆಗಳ ನಿವೃತ್ತ ಯೋಧರ ಜತೆ ಸಂವಾದ ನಡೆಸಿರುವುದು ಯೂಟ್ಯೂಬ್ ವಿಡಿಯೋದಲ್ಲಿ ದಾಖಲಾಗಿದೆ. “ಚೀನಾ ಮತ್ತು ಪಾಕಿಸ್ತಾನಗಳು ಜತೆಯಾಗಿ ಬಂದಿವೆ. ಯಾವುದಾದರೂ ಯುದ್ಧ ನಡೆಯುವುದೇ ಆದರೆ ಈ ಎರಡೂ ದೇಶಗಳ ಜತೆ ನಡೆಯಲಿದೆ. ಇದರಿಂದ ದೇಶಕ್ಕೆ ಭಾರಿ ನಷ್ಟ ಉಂಟಾಗಲಿದೆ. ಭಾರತ ಈಗಲೇ ಅತೀವ ಸಂಕಷ್ಟದಲ್ಲಿದೆ. ನನಗೆ ನಿಮ್ಮ (ಸೇನೆ) ಮೇಲೆ ಗೌರವ ಇರುವುದು ಮಾತ್ರವಲ್ಲ, ನಿಮ್ಮ ಬಗ್ಗೆ ಪ್ರೀತಿ ಹಾಗೂ ಕಾಳಜಿಯೂ ಇದೆ. ನೀವು ಈ ದೇಶವನ್ನು ರಕ್ಷಿಸುತ್ತೀರಿ. ನಿಮ್ಮ ಹೊರತು ಈ ದೇಶ ಇರಲಾರದು” ಎಂದು ರಾಹುಲ್ ಹೇಳಿದ್ದಾರೆ.”ಈ ಹಿಂದೆ ನಮಗೆ ಇಬ್ರು ಶತ್ರುಗಳಿದ್ದರು- ಚೀನಾ ಮತ್ತು ಪಾಕಿಸ್ತಾನ. ಅವರನ್ನು ಪ್ರತ್ಯೇಕವಾಗಿ ಇರಿಸುವುದು ನಮ್ಮ ನೀತಿಯಾಗಿತ್ತು. ಮೊದಲಿಗೆ, ಎರಡು ಶಕ್ತಿಗಳ ಯುದ್ಧ ನಡೆಯಬಾರದು. ಜನರು ಇದನ್ನು ಎರಡೂವರೆ ಪಡೆಯ ಯುದ್ಧ ಎಂದು ಕರೆಯುತ್ತಾರೆ. ಪಾಕಿಸ್ತಾನ, ಚೀನಾ ಮತ್ತು ಭಯೋತ್ಪಾದನೆ. ಯುದ್ಧ ನಡೆದರೆ ಈ ಎರಡರ ಜತೆಗೂ ನಡೆಯಲಿದೆ. ಅವರು ಸೇನಾ ವಿಭಾಗದಲ್ಲಿ ಮಾತ್ರ ಜತೆಯಾಗಿ ಕೆಲಸ ಮಾಡುತ್ತಿಲ್ಲ, ಆರ್ಥಿಕವಾಗಿಯೂ ಕೆಲಸ ಮಾಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿರುವ ಅವರು, “ನಮ್ಮ ಆರ್ಥಿಕ ವ್ಯವಸ್ಥೆಯು 2014ರ ಬಳಿಕ ಕುಂಠಿತಗೊಂಡಿದೆ. ನಮ್ಮ ದೇಶದಲ್ಲಿ ಗೊಂದಲ, ಕಲಹ, ಅಡೆತಡೆ ಮತ್ತು ದ್ವೇಷ ಇದೆ. ನಮ್ಮ ಮನಸ್ಥಿತಿಯು ಈಗಲೂ ಎರಡೂವರೆ ಪಡೆಗಳ ಯುದ್ಧದಲ್ಲಿದೆ. ನಮ್ಮ ಮನಸ್ಥಿತಿಯು ಜಂಟಿ ಚಲನಶೀಲತೆ ಹಾಗೂ ಸೈಬರ್ ಯುದ್ಧದಲ್ಲಿ ಇಲ್ಲ. ಭಾರತ ಈಗ ಅತೀವ ತೊಂದರೆಯಲ್ಲಿದೆ” ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

Please follow and like us:

Leave a Reply

Your email address will not be published. Required fields are marked *

Next Post

ನೋಂದಂತ ಪತ್ರಕರ್ತರ ಧ್ವನಿಯಾಗಿ ನಿಂತ ಬಂಗ್ಲೆ ಮಲ್ಲಿಕಾರ್ಜುನ!

Thu Dec 29 , 2022
ಬೆಳಗಾವಿ ಅಧಿವೇಶನ ಕಾನಿಪ ಧ್ವನಿ ಸಂಘಟನೆಯಿಂದ ಧರಣಿ:ಧರಣಿಗೆ ಬಂದ ಪತ್ರಕರ್ತರಿಗೆ ಉಟೋಪಚಾರ ವ್ಯವಸ್ಥೆ ಮಾಡಿದ ಸಮಾಜ ಸೇವಕ ಚಿಕ್ಕರೇವಣ್ಣರವರು.ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ 16000 ನೋಂದಂತ ಪತ್ರಕರ್ತರ ಧ್ವನಿಯಾಗಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿವಿಧ ಬೇಡಿಕೆಗಳಿಗಾಗಿ ಕಕಾನಿಪ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ರವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ರಾಜ್ಯದ ಪತ್ರಕರ್ತರು ಭಾಗವಹಿಸಿ ಸರ್ಕಾರಕ್ಕೆ ಧ್ವನಿ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯದ 16,000 ನೊಂದಂತ ಪತ್ರಕರ್ತರ […]

Advertisement

Wordpress Social Share Plugin powered by Ultimatelysocial