ನೋಂದಂತ ಪತ್ರಕರ್ತರ ಧ್ವನಿಯಾಗಿ ನಿಂತ ಬಂಗ್ಲೆ ಮಲ್ಲಿಕಾರ್ಜುನ!

ಬೆಳಗಾವಿ ಅಧಿವೇಶನ ಕಾನಿಪ ಧ್ವನಿ ಸಂಘಟನೆಯಿಂದ ಧರಣಿ:ಧರಣಿಗೆ ಬಂದ ಪತ್ರಕರ್ತರಿಗೆ ಉಟೋಪಚಾರ ವ್ಯವಸ್ಥೆ ಮಾಡಿದ ಸಮಾಜ ಸೇವಕ ಚಿಕ್ಕರೇವಣ್ಣರವರು.ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ 16000 ನೋಂದಂತ ಪತ್ರಕರ್ತರ ಧ್ವನಿಯಾಗಿ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿವಿಧ ಬೇಡಿಕೆಗಳಿಗಾಗಿ ಕಕಾನಿಪ ಧ್ವನಿ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ರವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ರಾಜ್ಯದ ಪತ್ರಕರ್ತರು ಭಾಗವಹಿಸಿ ಸರ್ಕಾರಕ್ಕೆ ಧ್ವನಿ ಮುಟ್ಟಿಸುವ ನಿಟ್ಟಿನಲ್ಲಿ ರಾಜ್ಯದ 16,000 ನೊಂದಂತ ಪತ್ರಕರ್ತರ ಜಲ್ವಂತ ಸಮಸ್ಯಗಳು ಹಾಗೂ ಮೂಲಭೂತ ಸೌಕರ್ಯದ ದಿಟ್ಟ ಹೋರಾಟವನ್ನು ನಡಿಸಿ ಸುವರ್ಣ ಸೌಧದ ಎದುರು ಧರಣಿ ನಡೆಸಲಾಯಿತು.ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಹಲವಾರು ಪತ್ರಕರ್ತರು ಬೆಳಗಾವಿಗೆ ಧರಣಿಗೆ ಆಗಮಿಸಿದ್ದರು .ರಾಜ್ಯದ ಮೂಲೆ ಮೂರಿಗಳಿಂದ ಬಂದಂತ ಪತ್ರಕರ್ತರಿಗೆ ಮಧ್ಯಾಹ್ನ ಉಪಚಾರದ ವ್ಯವಸ್ಥೆಯನ್ನು ರಾಮದುರ್ಗದ ಖ್ಯಾತ ಉದ್ಯಮಿ, ಶಿಕ್ಷಣ ಪ್ರೇಮಿ, ಸಮಾಜಸೇವಕರಾದ ಸನ್ಮಾನ್ಯ ಶ್ರೀ ಚಿಕ್ಕರವಣ್ಣನವರು ಸ್ವಂತ ಖರ್ಚಿನಲ್ಲಿ ವ್ಯವಸ್ಥೆಯನ್ನು ಮಾಡಿಸಿದರು.ಅಲ್ಲಿ ಆಗಮಿಸುವ ಎಲ್ಲಾ ಪತ್ರಕರ್ತೆಗೆ ಸ್ವಾಗತ ಕೋರಿ ಮಾತನಾಡಿದ ಕಾನಿಪ ದ್ವನಿ ಸಂಘಟನೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಕಾಮಣ್ಣನವರರು ಅದಿವೇಶನದ ವೇಳೆಯಲ್ಲಿ ಪತ್ರಕರ್ತರ ಧ್ವನಿ ಎತ್ತಿದ ಹೆಮ್ಮೆ ಬಂಗ್ಲೆ ಸರ್ ಅವರಿಗೆ ಸಲ್ಲುತ್ತದೆ. ಇದು ನಮ್ಮ ಮೊದಲನೆಯ ಹೆಜ್ಜೆಯಾಗಿದ್ದು ಸರ್ಕಾರ ಎಚ್ಚೆತ್ತು ಪತ್ರಕರ್ತರ ಜಲ್ವಂತ ಸಮಸ್ಯೆಗಳಿಗೆ ಪರಿಹಾರ ನೀಡಿದೆ ಇದ್ದಲ್ಲಿ ಮುಂಬರುವ ದಿನಮಾನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂಬುದಾಗಿ ಹಾಗೂ ಜನರ ಸಮಸ್ಯೆಗಳನ್ನು ಸರ್ಕಾರ ಗಮನಕ್ಕೆ ತರುವಂತ ಕಾರ್ಯವನ್ನು ಮಾಡುವ ಪತ್ರಕರ್ತರಿಗೆ ನ್ಯಾಯ ಸಿಗುತ್ತಿಲ್ಲ ಮತ್ತು ಸರ್ಕಾರ ಕಣ್ಮುಚ್ಚಿ ಕುಳಿತ ಹಾಗೆ ಕಾಣುತ್ತಿದೆ ಎಂದು ಆಕ್ರೋಶ ಹೋರಹಾಕಿದರು.ಮತ್ತು ನಮ್ಮ ಮಾತೆಗೆ ಮನಗೊಂಡು ಬೆಳಗಾವಿ ಚಳಿಗಾಲ ಅಧಿವೇಶನ ಪತ್ರಕರ್ತರ ಜಲ್ವಂತ ಸಮಸ್ಯಗಳ ಪರಿಹಾರಕ್ಕಾಗಿ ಧಣಿಗೆ ಆಗಮಿಸುವ ಎಲ್ಲಾ ಪತ್ರಕರ್ತರಿಗೆ ಉಟೋಪಚಾರದ ವ್ಯವಸ್ಥೆಯನ್ನು ರಾಮದುರ್ಗದ ಖ್ಯಾತ ಉದ್ಯಮಿ, ಸಮಾಜ ಸೇವಕರು, ಅನ್ನದಾಸೋಹ ಮೂರ್ತಿ ಎಂದೆ ಪ್ರಖ್ಯಾತಿಯಾದ ಶ್ರೀ ಚಿಕ್ಕ ರೇವಣ್ಣರವರು ಮಾಡಿಕೊಟ್ಟದಕ್ಕಾಗಿ ಒಪ್ಪಿದ್ದಕ್ಕಾಗಿ ಸನ್ಮಾನ್ಯ ಶ್ರೀ ಚಿಕ್ಕರೇವಣ್ಣ ಮತ್ತು ಅವರ ಆಪ್ತ ಸಹಾಯಕ ಮಹಾಲಿಂಗರಾಯ ರವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸರ್ವ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ.

Thu Dec 29 , 2022
ಹನೂರು : ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಕುವೆಂಪು ರವರ ಜಯಂತಿಗೆ ಹಿರಿಯ ಅಧಿಕಾರಿಗಳು ಗೈರಾಗುವ ಮೂಲಕ ಕಿರಿಯ ಅಧಿಕಾರಿಗಳು ಕಾಟಾಚಾರಕ್ಕೆ ಆಚರಿಸಿದ್ದಾರೆ.ಗುರುವಾರ ರಾಷ್ಟ್ರಕವಿ ಕುವೆಂಪುರವರ 119ನೇ ಜನ್ಮ ಜಯಂತಿ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ತಹಸಿಲ್ದಾರ್ ಆನಂದಯ್ಯ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಬೇಕಿತ್ತು. ಆದರೆ ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಕಾರಣ ಗ್ರೇಡ್ 2 ತಹಸಿಲ್ದಾರ್ ಧನಂಜಯ್ ರವರಿಗೆ ಉಸ್ತುವಾರಿ ನೀಡಲಾಗಿತ್ತು. ಈ […]

Advertisement

Wordpress Social Share Plugin powered by Ultimatelysocial