ಪುಷ್ಪ ಸಿನಿಮಾದ ವಿರುದ್ಧ ಕನ್ನಡಿಗರ ಆಕ್ರೋಶ:ಮೊದಲ ದಿನವೇ ‘ಪುಷ್ಪ’ ಚಿತ್ರಕ್ಕೆ ಬಹಿಷ್ಕಾರ..?

ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ‘ಪುಷ್ಪ’ ಚಿತ್ರ ಇಂದು ಅದ್ದೂರಿಯಾಗಿ ತೆರೆಕಂಡಿದೆ. ಅದ್ದೂರಿಯಾಗಿ ಬಿಡುಗಡೆ ಆಗುತ್ತಿರುವ ಈ ಸಿನಿಮಾ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಅದಕ್ಕೆ ಬಲವಾದ ಕಾರಣ ಕೂಡ ಇದೆ. ಕರ್ನಾಟಕದಲ್ಲಿ ‘ಪುಷ್ಪ’ ಚಿತ್ರವನ್ನು ಬಹಿಷ್ಕರಿಸುವಂತೆ ಒತ್ತಾಯ ಹೇರಲಾಗುತ್ತಿದೆ. ಹಾಗಾಗಿ ಟ್ವಿಟರ್​ನಲ್ಲಿ #BoycottPushpaInKarnataka ಹ್ಯಾಶ್​ ಟ್ಯಾಗ್​ ಟ್ರೆಂಡ್​ ಆಗುತ್ತಿದೆ. ಇದು ಚಿತ್ರತಂಡಕ್ಕೆ ಮುಳುವಾಗುವ ಸಾಧ್ಯತೆ ಇದೆ.ಈ ಚಿತ್ರಕ್ಕೆ ಸುಕುಮಾರ್​ ನಿರ್ದೇಶನ ಮಾಡಿದ್ದು, ಕನ್ನಡದ ಖ್ಯಾತ ನಟ ಡಾಲಿ ಧನಂಜಯ ಕೂಡ ಅಭಿನಯಿಸಿದ್ದಾರೆ. ‘ಪುಷ್ಪ’ ಚಿತ್ರ ತೆಲುಗಿನಲ್ಲಿ ನಿರ್ಮಾಣವಾಗಿ ಇನ್ನುಳಿದ ಭಾಷೆಗಳಿಗೆ ಡಬ್​ ಆಗಿದೆ. ಕನ್ನಡ, ಹಿಂದಿ, ಮಲಯಾಳಂ, ತಮಿಳು ಭಾಷೆಗಳಿಗೆ ಡಬ್​ ಆಗಿ ತೆರೆಕಂಡಿದೆ. ಆದರೆ ಕರ್ನಾಟಕದ ಹೆಚ್ಚು ಚಿತ್ರಮಂದಿರಗಳಲ್ಲಿ ಕನ್ನಡ ವರ್ಷನ್​ಗಿಂತಲೂ ತೆಲುಗು ವರ್ಷನ್​ ಅನ್ನು ಬಿಡುಗಡೆ ಮಾಡಲಾಗಿದೆ. ಇದು ಕನ್ನಡ ಸಿನಿಪ್ರೇಕ್ಷಕರ ಕೋಪಕ್ಕೆ ಕಾರಣ ಆಗಿದೆ.

ಟ್ವಿಟರ್​ನಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ನಾವು ಇಲ್ಲಿಯವರೆಗೆ ಈ ಚಿತ್ರಕ್ಕೆ ಬೆಂಬಲ ನೀಡಿದ್ದಕ್ಕೆ ಕಾರಣವೇ ಕನ್ನಡ. ನಮ್ಮ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತದೆ ಅಂತ ಸಪೋರ್ಟ್​ ಮಾಡಿದ್ವಿ. ಆದರೆ ಈಗ ತೆಲುಗು ವರ್ಷನ್​ ರಾರಾಜಿಸುತ್ತಿದೆ’ ಎಂದು ಅನೇಕರು ಸೋಶಿಯಲ್​ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ‘ಪುಷ್ಪ’ ಚಿತ್ರತಂಡ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂಬ ಕೌತುಕ ನಿರ್ಮಾಣ ಆಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕನ್ನಡ ಧ್ವಜಕ್ಕೆ ಅವಮಾನ ಮಾಡಿದ ಮಹಾರಾಷ್ಟ್ರದ ಪುಂಡರ ವಿರುದ್ಧ ನಟ ಧ್ರುವ ಸರ್ಜಾ ಆಕ್ರೋಶ

Fri Dec 17 , 2021
ಕನ್ನಡ ಧ್ವಜಕ್ಕೆ ಅವಮಾನ ಮಾಡಿದ ಮಹಾರಾಷ್ಟ್ರದ ಪುಂಡರ ವಿರುದ್ಧ ನಟ ಧ್ರುವ ಸರ್ಜಾ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಭಾಷೆ ಎನ್ನುವುದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ. ಕನ್ನಡ ಧ್ವಜ ನಮ್ಮ ಸಂಸ್ಕೃತಿಯ ತಿಲಕ.ಕನ್ನಡಧ್ವಜವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ.ಸರ್ಕಾರ ಈ ಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕು. ಇದು ನನ್ನಂತಹ ಕೋಟ್ಯಾಂತರ ಕನ್ನಡಿಗರ ಒತ್ತಾಯ […]

Advertisement

Wordpress Social Share Plugin powered by Ultimatelysocial