ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಸಿಡಿಸುವ ಮೂಲಕ ಬಿಹಾರದ ಯುವ ಆಟಗಾರ ಶಕೀಬುಲ್ ಗನಿ

ಕೊಲ್ಕತ್ತಾ: ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ ತ್ರಿಶತಕ ಸಿಡಿಸುವ ಮೂಲಕ ಬಿಹಾರದ ಯುವ ಆಟಗಾರ ಶಕೀಬುಲ್ ಗನಿ ವಿಶ್ವ ದಾಖಲೆ ಬರೆದಿದ್ದಾರೆ.ಬಿಹಾರದ 22 ವರ್ಷದ ಬ್ಯಾಟರ್ ಶಕೀಬುಲ್ ಗನಿ ಚೊಚ್ಚಲ ಪ್ರಥಮ ದರ್ಜೆ ಪಂದ್ಯದಲ್ಲೇ 341 ರನ್ ಬಾರಿಸಿದ್ದಾರೆ.405 ಎಸೆತಗಳನ್ನು ಎದುರಿಸಿದ ಗನಿ 341 ರನ್ ಸಿಡಿಸಿದ್ದು, ಪ್ರಥಮ ದರ್ಜೆ ಪಾದರ್ಪಣೆ ಪಂದ್ಯದಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಮೊದಲ ಪ್ರಥಮ ದರ್ಜೆ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಮಧ್ಯಪ್ರದೇಶದ ಅಜಯ್ ರೊಹೆರಾ ಅವರ ಹೆಸರಲ್ಲಿತ್ತು. ಅಜಯ್ 2018 -19 ರಲ್ಲಿ ಹೈದರಾಬಾದ್ ವಿರುದ್ಧ 267 ರನ್ ಸಿಡಿಸಿ ದಾಖಲೆ ಬರೆದಿದ್ದರು. ಅವರ ದಾಖಲೆ ಹಿಂದಿಕ್ಕಿದ ಬಿಹಾರದ ಗನಿ ಮಿಜೊರಾಂ ವಿರುದ್ಧ ನಡೆದ ರಣಜಿ ಟ್ರೋಫಿ ಪ್ಲೇಟ್ ಗುಂಪಿನ ಪಂದ್ಯದಲ್ಲಿ 341 ರನ್ ಗಳಿಸಿ ವಿಶ್ವದಾಖಲೆ ಬರೆದಿದ್ದಾರೆ. ಬಾಬುಲ್ ಕುಮಾರ್(229 ರನ್) ಅವರೊಂದಿಗೆ ಗನಿ 4 ನೇ ವಿಕೆಟ್ ಜೊತೆಯಾಟದಲ್ಲಿ 538 ರನ್ ಗಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಒಂದೇ ಒಂದು ಫೋಟೋಶೂಟ್‍ ನಿಂದ ಬದಲಾದ ಕಾರ್ಮಿಕನ ಜೀವನ"

Sat Feb 19 , 2022
  ರಾತ್ರಿ, ಬೆಳಗಾಗೋದ್ರೊಳಗೆ ದಿನಗೂಲಿ ಕಾರ್ಮಿಕನಾಗಿದ್ದ ಕೇರಳದ ಮಮ್ಮಿಕ್ಕ ಮನೆ ಮಾತಾದ ಕಥೆ ನಿಮಗೆಲ್ಲರಿಗೂ ತಿಳಿದಿದೆ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ 60ರ ಹರೆಯದ ಈತನಿಗೆ ಒಮ್ಮೆಲೇ ಅದೃಷ್ಟ ಲಕ್ಷ್ಮೀ ಒಲಿದಿರುವುದು ನಿಜಕ್ಕೂ ಸಂತೋಷದ ವಿಷಯ. ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಮಮ್ಮಿಕ್ಕ ಅವರ ಲೇಟೆಸ್ಟ್ ಫೋಟೋಗಳ್ನು ಬಹುಶಃ ನೋಡಿರುತ್ತೀರಿ. ಅಂತರ್ಜಾಲದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ ಈ ಮಮ್ಮಿಕ್ಕ. ಛಾಯಾಗ್ರಾಹಕ ಅದ್ಯಾವ ಸಮಯದಲ್ಲಿ ಫೋಟೋ ಕ್ಲಿಕ್ಕಿಸಿದ್ರೋ ಗೊತ್ತಿಲ್ಲ, ಚಂಡಮಾರುತದಂತೆ ಫೋಟೋ […]

Advertisement

Wordpress Social Share Plugin powered by Ultimatelysocial