“ಒಂದೇ ಒಂದು ಫೋಟೋಶೂಟ್‍ ನಿಂದ ಬದಲಾದ ಕಾರ್ಮಿಕನ ಜೀವನ”

 

ರಾತ್ರಿ, ಬೆಳಗಾಗೋದ್ರೊಳಗೆ ದಿನಗೂಲಿ ಕಾರ್ಮಿಕನಾಗಿದ್ದ ಕೇರಳದ ಮಮ್ಮಿಕ್ಕ ಮನೆ ಮಾತಾದ ಕಥೆ ನಿಮಗೆಲ್ಲರಿಗೂ ತಿಳಿದಿದೆ. ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದ 60ರ ಹರೆಯದ ಈತನಿಗೆ ಒಮ್ಮೆಲೇ ಅದೃಷ್ಟ ಲಕ್ಷ್ಮೀ ಒಲಿದಿರುವುದು ನಿಜಕ್ಕೂ ಸಂತೋಷದ ವಿಷಯ.

ನೀವು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದರೆ, ಮಮ್ಮಿಕ್ಕ ಅವರ ಲೇಟೆಸ್ಟ್ ಫೋಟೋಗಳ್ನು ಬಹುಶಃ ನೋಡಿರುತ್ತೀರಿ.

ಅಂತರ್ಜಾಲದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ ಈ ಮಮ್ಮಿಕ್ಕ. ಛಾಯಾಗ್ರಾಹಕ ಅದ್ಯಾವ ಸಮಯದಲ್ಲಿ ಫೋಟೋ ಕ್ಲಿಕ್ಕಿಸಿದ್ರೋ ಗೊತ್ತಿಲ್ಲ, ಚಂಡಮಾರುತದಂತೆ ಫೋಟೋ ವೈರಲ್ ಆಗಿದ್ದು, ಮಮ್ಮಿಕ್ಕರ ಗೆಟಪ್ ಬದಲಾಗಿದೆ. ಒಂದೇ ಒಂದು ಫೋಟೋಶೂಟ್ ಈತನ ಜೀವನವನ್ನೇ ಬದಲಾಯಿಸಿದೆ. ಸದ್ಯ, ಇವರ ಮೇಕ್ ಓವರ್ ಎಲ್ಲರಿಗೂ ಅಚ್ಚರಿ ಸೃಷ್ಟಿಸಿದ್ದಂತೂ ಸುಳ್ಳಲ್ಲ.

ಇನ್ನು ಫೋಟೋಗ್ರಾಫರ್ ಶರೀಕ್ ಹಾಗೂ ಮಮ್ಮಿಕ್ಕ ಅವರ ಪರಿಚಯ ಇಂದು ನಿನ್ನೆಯದಲ್ಲ. ಇವರ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಚಾರವನ್ನು ಶರೀಕ್ ಹಂಚಿಕೊಂಡಿದ್ದಾರೆ. ಮಮ್ಮಿಕ್ಕ ಅವರ ಬಾಲ್ಯದಿಂದಲೂ ಶರೀಕ್ ಅವರ ಜೊತೆ ಉತ್ತಮ ಒಡನಾಟವಿತ್ತಂತೆ. ಇವರಿಬ್ಬರೂ ನೆರೆಹೊರೆಯವರಾಗಿದ್ದರು. ಬಾಲ್ಯದಿಂದಲೂ ಇಬ್ಬರೂ ಆತ್ಮೀಯ ಗೆಳೆಯರಾಗಿದ್ದರು. ಒಮ್ಮೆ ಫೋಟೋಗ್ರಾಫರ್ ಶರೀಕ್ ಒಂಭತ್ತು ವರ್ಷದವರಿದ್ದಾಗ, ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಅಂದು ಮಮ್ಮಿಕ್ಕ ಇವರನ್ನು ರಕ್ಷಿಸಿದ್ದರಂತೆ. ಅಂದಿನಿಂದ ತಾವು ಉತ್ತಮ ಬಾಂಧವ್ಯ ಹೊಂದಿದ್ದಾಗಿ ಶರೀಕ್ ಹೇಳಿದ್ದಾರೆ.

ಇದೀಗ ಛಾಯಾಗ್ರಾಹಕ, ಸ್ನೇಹಿತ ಶರೀಕ್ ರಿಂದಾಗಿ ಮಮ್ಮಿಕ್ಕ ಅಪಾರ ಖ್ಯಾತಿಯನ್ನು ಗಳಿಸಿದ್ದಾರೆ. ಇಷ್ಟು ಸರಳವಾದ ಫೋಟೋಶೂಟ್ ತನಗೆ ಇಷ್ಟೊಂದು ಖ್ಯಾತಿಯನ್ನು ತಂದುಕೊಡುತ್ತದೆ ಎಂದು ಕನಸಲ್ಲೂ ಊಹಿಸಿರಲಿಲ್ಲ ಎಂಬುದಾಗಿ ಮಮ್ಮಿಕ್ಕ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಲ್ಗಾರ್ ಪರಿಷತ್ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

Sat Feb 19 , 2022
ಮುಂಬೈ:ಎಲ್ಗಾರ್ ಪರಿಷತ್ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.ಕಬೀರ್ ಕಲಾ ಮಂಚ್‌ಗೆ ಸೇರಿದ ಮೂವರು ಆರೋಪಿಗಳಾದ ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಮತ್ತು ಜ್ಯೋತಿ ಜಗತಾಪ್ ಅವರಿಗೆ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಡಿ.ಇ.ಕೊತಾಲಿಕರ್ ಸೋಮವಾರ ಜಾಮೀನು ನಿರಾಕರಿಸಿದರು. ವಿವರವಾದ ಆದೇಶ ಗುರುವಾರ ಹೊರಬಿದ್ದಿದೆ.ಈ ಮೂವರು ನಿಷೇಧಿತ ಸಂಘಟನೆ ಸಿಪಿಐನ (ಮಾವೋವಾದಿ) ಇತರ ಸದಸ್ಯರೊಡಗೂಡಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಮೋದಿ ಸರ್ಕಾರ ಉರುಳಿಸಲು ಗಂಭೀರ […]

Advertisement

Wordpress Social Share Plugin powered by Ultimatelysocial