ಎಲ್ಗಾರ್ ಪರಿಷತ್ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

ಮುಂಬೈ:ಎಲ್ಗಾರ್ ಪರಿಷತ್ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.ಕಬೀರ್ ಕಲಾ ಮಂಚ್‌ಗೆ ಸೇರಿದ ಮೂವರು ಆರೋಪಿಗಳಾದ ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಮತ್ತು ಜ್ಯೋತಿ ಜಗತಾಪ್ ಅವರಿಗೆ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಡಿ.ಇ.ಕೊತಾಲಿಕರ್ ಸೋಮವಾರ ಜಾಮೀನು ನಿರಾಕರಿಸಿದರು. ವಿವರವಾದ ಆದೇಶ ಗುರುವಾರ ಹೊರಬಿದ್ದಿದೆ.ಈ ಮೂವರು ನಿಷೇಧಿತ ಸಂಘಟನೆ ಸಿಪಿಐನ (ಮಾವೋವಾದಿ) ಇತರ ಸದಸ್ಯರೊಡಗೂಡಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಮೋದಿ ಸರ್ಕಾರ ಉರುಳಿಸಲು ಗಂಭೀರ ಸಂಚು ರೂಪಿಸಿರುವುದನ್ನು ಸ್ಥಳದಲ್ಲಿ ದೊರೆತ ದಾಖಲೆಯಲ್ಲಿರುವ ವಿಷಯವು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.’ಸಿಪಿಐ (ಮಾವೋವಾದಿ) ‘ಮೋದಿ ರಾಜ್’ ಅನ್ನು ಕೊನೆಗೊಳಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗಳನ್ನು ಗುರಿಯಾಗಿಸಿಕೊಂಡು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಾವಿನಂತಹ ಇನ್ನೊಂದು ಘಟನೆಯ ಬಗ್ಗೆಯೂ ನಕ್ಸಲರು ಯೋಚಿಸುತ್ತಿದ್ದಾರೆ ಎಂಬುದು ಸ್ಥಳದಲ್ಲಿ ದೊರೆತ ಪ್ರಾಥಮಿಕ ದಾಖಲೆಯಾದ ಆ ಪತ್ರದಲ್ಲಿದೆ’ ಎಂದು ಕೋರ್ಟ್ ಹೇಳಿದೆ.’ಆರೋಪಿಗಳು ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ಸದಸ್ಯರಷ್ಟೇ ಅಲ್ಲ, ಅವರು ಸಂಘಟನೆಯ ಉದ್ದೇಶಕ್ಕಾಗಿ ಮತ್ತಷ್ಟು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬುದು ಪ್ರಾಥಮಿಕ ದಾಖಲೆಯಲ್ಲಿದೆ. ಇದು ದೇಶದ ಪ್ರಜಾಪ್ರಭುತ್ವವನ್ನು ಉರುಳಿಸುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ’ ಎಂದು ನ್ಯಾಯಾಲಯ ಹೇಳಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 
Please follow and like us:

Leave a Reply

Your email address will not be published. Required fields are marked *

Next Post

ಚಿತ್ರದುರ್ಗ: ಹಿಜಾಬ್‌ ವಿವಾದ ಶುಕ್ರವಾರ ನಗರದಲ್ಲಿ ತೀವ್ರ ಸ್ವರೂಪ ಪಡೆಯಿತು.

Sat Feb 19 , 2022
ಚಿತ್ರದುರ್ಗ: ಹಿಜಾಬ್‌ ವಿವಾದ ಶುಕ್ರವಾರ ನಗರದಲ್ಲಿ ತೀವ್ರ ಸ್ವರೂಪ ಪಡೆಯಿತು. ನಗರದ ಎಸ್‌ಆರ್‌ಎಸ್‌ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ವಾಗ್ವಾದಗಳಿಗೆ ವೇದಿಕೆಯಾಯಿತು.ಗುರುವಾರ ಸಂಜೆವರೆಗೂ ಕಾಲೇಜಿನ ಪ್ರವೇಶ ದ್ವಾರದಲ್ಲಿ ಪಟ್ಟುಸಡಿಲಿಸದೆ ಪ್ರತಿಭಟನೆ ನಡೆಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶುಕ್ರವಾರ ಬೆಳಿಗ್ಗೆ ಹಿಜಾಬ್‌ ಧರಿಸಿ ಕಾಲೇಜಿಗೆ ಬಂದರು.’ನಿಮ್ಮ ವರ್ತನೆಯಿಂದ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ತರಗತಿಗೆ ತೆರಳಲು ಅವಕಾಶ ನೀಡಿ’ ಎಂದು […]

Advertisement

Wordpress Social Share Plugin powered by Ultimatelysocial