ಸರ್ಕಾರಿ ನೌಕರರ ಸಾಂದರ್ಭಿಕ ರಜೆಗೆ ಸರ್ಕಾರದ ಒಪ್ಪಿಗೆ

ಕೊರೊನಾ ನಿರ್ಬಂಧಿತ ವಲಯಗಳಲ್ಲಿ ವಾಸವಿದ್ದು, ಕಚೇರಿಗೆ ಬರಲು ಸಾಧ್ಯವಾಗದ ಮತ್ತು ಸೋಂಕಿಗೆ ಒಳಗಾಗಿ ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿರುವ ರಾಜ್ಯ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈ ಸಂಬAಧ ಸರ್ಕಾರಕ್ಕೆ ಮನವಿ ಮಾಡಿ ವಿಶೇಷ ಸಾಂದರ್ಭಿಕ ರಜೆ ನೀಡುವಂತೆ ಕೋರಿಕೆ ಸಲ್ಲಿಸಿತ್ತು. ಈ ಕೋರಿಕೆಗೆ ಮನ್ನಣೆ ನೀಡಿರುವ ಸರ್ಕಾರ, ಕರ್ನಾಟಕ ಸಿವಿಲ್ ಸೇವೆಗಳ ನಿಯಮಾವಳಿಗೆ ತಿದ್ದುಪಡಿ ಮಾಡಿದೆ. ರಾಜ್ಯ ಸರ್ಕಾರಿ ನೌಕರರು ಕಂಟೈನ್‌ಮೆAಟ್ ವಲಯದಲ್ಲಿ ವಾಸವಿದ್ದು, ಕಚೇರಿಗೆ ಬರಲು ಸಾಧ್ಯವಾಗದೇ ಇದ್ದರೆ ಅಂತಹವರಿಗೆ ಏಳು ದಿನಗಳವರೆಗೆ ವಿಶೇಷ ಸಾಂದರ್ಭಿಕ ರಜೆ ನೀಡಬಹುದು. ಒಂದು ವೇಳೆ ಸೋಂಕಿನಿAದ ಕ್ವಾರಂಟೈನ್‌ಗೆ ಒಳಗಾದರೆ, ೧೪ ದಿನಗಳ ಸಾಂದರ್ಭಿಕ ರಜೆ ಪಡೆಯಬಹುದು ಎಂದು ನಿಯಮಾವಳಿಯಲ್ಲಿ ಸೂಚಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಇಎಂಐ ಮರುಪಾವತಿ ವಿಸ್ತರಣೆ ಬೇಡ

Tue Jul 28 , 2020
ಕೊರೊನಾ ವಹಾಮಾರಿ ತಂದಿದ್ದ ಸಂಕಟ ಅಪಾರ ಹಲವಾರು ಜನರು ಕೆಲಸ ಕಳೆದುಕೊಂಡು ತೀವ್ರ ಆರ್ಥಿಕ ಹಿಂಚರಿತಕ್ಕೆ ಕಾರಣ ವಾಗಿತ್ತು. ಜನರಿಗೆ ಇಂತಹ ಪರಿಸ್ಥಿಯಲ್ಲಿ ಕೇಂದ್ರ ಸರ್ಕಾರ ಸಾಲಗಳ ಮರುಪಾವತಿಗೆ ಮೂದಲು ೩ ತಿಂಗಳು ನಂತರ ೩ ತಿಂಗಳ ಮರುಪಾವತಿಯ ಅವಧಿಯನ್ನು ವಿಸ್ತರಣೆಯ ಅವಕಾಶ ನೀಡಿತ್ತು ಈ ಕಾಲವಕಾಶ ಆಗಸ್ಟ್ಗೆ ಕೊನೆಯಾಗಲಿದೆ. ಈಗ ಆ ವಿಸ್ತರಣೆಯನ್ನು ಇನ್ನೂ ಮುಂದುವರೆಸಬಾರದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪರೇಖ್ ರಿಸರ್ವ ಬ್ಯಾಂಕ್ ಆಫ್ […]

Advertisement

Wordpress Social Share Plugin powered by Ultimatelysocial