ಭಾರತ ಸರ್ಕಾರ, ಪ್ರಧಾನಮಂತ್ರಿಯ ಅಧಿಕೃತ ವೆಬ್ ಸೈಟ್ pmindia.gov.in ನಲ್ಲಿ ಬದಲಾವಣೆ ಮಾಡಲಿದೆ. ಪ್ರಧಾನ ಮಂತ್ರಿ ವೆಬ್ ಸೈಟ್ ಹೊಸ ಬಣ್ಣದಲ್ಲಿ ಕಾಣಿಸಲಿದೆ. ಸರ್ಕಾರ ಹೊರಡಿಸಿದ ಪ್ರಸ್ತಾವನೆಯ ಪ್ರಕಾರ, ಈಗ ವೆಬ್ ಸೈಟ್ ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಲ್ಲಿ ಮತ್ತು 22 ಭಾರತೀಯ ಭಾಷೆಗಳಲ್ಲಿ ವಿಕ್ಷಿಸಬಹುದು. ಪ್ರಸ್ತುತ, ಭಾರತದ ಪ್ರಧಾನ ಮಂತ್ರಿಯ ವೆಬ್ ಸೈಟ್ 12 ಭಾಷೆಗಳಲ್ಲಿ ಲಭ್ಯವಿದ್ದು, ರಾಷ್ಟ್ರೀಯ ಇ-ಆಡಳಿತ ವಿಭಾಗ ನೀಡಿದ ಆರ್ಎಫ್ಪಿ ಪ್ರಕಾರ, ವೆಬ್ಸೈಟ್ಗಳ ವಿನ್ಯಾಸ, ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಅರ್ಹ ಮತ್ತು ಅನುಭವಿ ಏಜೆನ್ಸಿಯನ್ನು ನೇಮಿಸಿಕೊಳ್ಳಲು ಸರ್ಕಾರ ಬಯಸಿದೆ. ವೆಬ್ಸೈಟ್ ಅಭಿವೃದ್ಧಿ ಮತ್ತು ನಿರ್ವಹಣೆ ಜೊತೆಗೆ 22 ಅಧಿಕೃತ ಭಾರತೀಯ ಭಾಷೆಗಳು ಸೇರಿದಂತೆ ವಿಶ್ವಸಂಸ್ಥೆಯ 6 ಅಧಿಕೃತ ಭಾಷೆಗಳಲ್ಲಿ ಪಿಎಂ ಇಂಡಿಯಾ ಪೋರ್ಟಲ್ ಅನ್ನು ರಚಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.
ಹೊಸ ಬಣ್ಣದಲ್ಲಿ ಕಾಣಿಸಲಿದೆ ವೆಬ್ ಸೈಟ್
Please follow and like us: