ಅಗಷ್ಟ್ ೩೧ರೊಳಗೆ ತೀರ್ಪು ಬರಲಿ: ಕೆಳ ನ್ಯಾಯಾಲಯಕ್ಕೆ ಗಡುವು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಆಗಸ್ಟ್ ೩೧ರೊಳಗೆ ತನ್ನ ತೀರ್ಪು ನೀಡಬೇಕು ಎಂದು ಸುಪ್ರೀಂ ಕೋರ್ಟ್ ಲಖನೌನಲ್ಲಿನ ವಿಶೇಷ ಸಿಬಿಐ ನ್ಯಾಯಾಲಯವಕ್ಕೆ ನಿರ್ದೇಶನ ನೀಡಿದೆ. ಪ್ರಕರಣವು ೧೯೯೨ ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸ ಮಾಡಿದ್ದರ ಸಂಬಂಧವಾಗಿದ್ದು ಇದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯ ನಂಟು ಹೊಂದಿದೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಿದ ಕೋರ್ಟ್ ವಿಚಾರಣಾ ನ್ಯಾಯಾಲಯದಲ್ಲಿ ಇದೇ ಮಾದರಿ ಅನುಸರಿಸಲು ಹೇಳಿದೆ. ಈ ಮುನ್ನ ೨೦೧೯ ರ ಜುಲೈನಲ್ಲಿ ನ್ಯಾಯಾಲಯವು ಒಂಬತ್ತು ತಿಂಗಳಲ್ಲಿ ತೀರ್ಪು ನೀಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.
ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಉಮಾ ಭಾರತಿ ಮತ್ತಿತರರು ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರಿದ್ದಾರೆ. ೧೯೯೨ ರ ಡಿಸೆಂಬರ್‌ನಲ್ಲಿ ಬಾಬರಿ ಮಸೀದಿ ಧ್ವಂಸದ ಹಿಂದೆ ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಈ ಎಲ್ಲರೂ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. ರಾಮಜನ್ಮಭೂಮಿ – ಬಾಬರಿ ಮಸೀದಿ ಭೂ ವಿವಾದದ ಕುರಿತು ಸುಪ್ರೀಂ ಕೋರ್ಟ್ ಈಗಾಗಲೇ ನವೆಂಬರ್ ೯, ೨೦೧೯ ರಂದು ಸರ್ವಾನುಮತದ ತೀರ್ಪು ನೀಡಿದೆ. ೨.೭೭ ಎಕರೆ ವಿವಾದಿತ ಭೂಮಿಯನ್ನು ರಾಮಲಲ್ಲಾ ಗೆ ನೀಡಿದ್ದ ಕೋರ್ಟ್ ನೂತನ ಮಸೀದಿಗಾಗಿ ಪರ್ಯಾಯ ಭೂಮಿ ಕೊಡುವಂತೆ ಆದೇಶಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಸರ್ಕಾರದ ನೀತಿಗಳೇ ಕೊರೊನಾ ಹೆಚ್ಚಾಗಲು ಕಾರಣ

Sat May 9 , 2020
ಕೊರೊನಾಗೆ ಲಸಿಕೆಯಿಲ್ಲ. ಸಾಮಾಜಿಕ ಅಂತರ ಇದಕ್ಕೆ ಮದ್ದು ಎಂದು ಮಾಜಿ ಸಿಎಂ  ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ನೀತಿಗಳೇ ಕೊರೊನಾ ಹೆಚ್ಚಾಗಲು ಕಾರಣ. ಲಾಕ್ ಡೌನ್ ಸಡಿಲಿಕೆ ಇದಕ್ಕೆ ಕಾರಣ. ಜನರು ಇದ್ರ ಬಗ್ಗೆ ಜಾಗೃತರಾಗಿಲ್ಲ. ವಿದ್ಯಾವಂತರು ಕೂಡ ಮಾಸ್ಕ್ ಹಾಕಿಕೊಳ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಲಾಕ್ ಡೌನ್ ಸಡಿಲಿಕೆ ನಂತ್ರ ಪ್ರಕರಣ ಹೆಚ್ಚಾಗಿ ಕಂಡು […]

Advertisement

Wordpress Social Share Plugin powered by Ultimatelysocial