ಅಧಿಕಾರಿಗಳಿಗೆ ದೂರು ನೀಡಿದ್ರೂ ಕ್ಯಾರೇ ಅಂದಿಲ್ಲ..!

ಕೊರೊನ ಸೊಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು ಅನೇಕ ಕಡೆ ಕ್ವಾರಂಟೈನ್ ಸ್ಥಳಗಳನ್ನು ಸಿದ್ದಪಡಿಸಿದೆ. ಅದೇ ರೀತಿ ಬೀದರನಲ್ಲಿ ಮಾಡಿದೆ. ಆದರೆ ಅನೇಕ ಕಡೆ ಸರಿಯಾದ ವ್ಯವಸ್ಥೆ ಇಲ್ಲವೆಂದು ದೂರುಗಳು ಕೇಳಿ ಬರುತ್ತಿವೆ. ಇಂತಹದೇ ಒಂದು ದೂರು  ಗುರುಮಠಕಲ್ ತಾಲೂಕಿನ ಚಪೆಟ್ಲಾ ಗ್ರಾಮದಿಂದ ಬಂದಿದೆ. ಗುರುಮಠಕಲ್ ತಾಲೂಕಿನ ಚಪೆಟ್ಲಾ ಗ್ರಾಮದಲ್ಲಿ   ಬರುವ ಶಾಂತಿನಿಕೇತನ ಪ್ರಾಥಮಿಕ ಶಾಲೆಯಲ್ಲಿ ಸುಮಾರು 40 ಜನ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಇಲ್ಲಿ ಜನರಿಗೆ ಬಾತ್ರೂಮ್ ಟಾಯ್ಲೆಟ್ ಸಮಸ್ಯೆ ತುಂಬಾ ಹೆಚ್ಚಾಗಿದೆ.  ಟಾಯ್ಲೆಟ್ ಗಳು  ಹದಗೆಟ್ಟಿದ್ದು, ತುಂಬಾ ದುರ್ವಾಸನೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.ಇಲ್ಲಿ ಸುಮಾರು 7, 8 ಮಹಿಳೆಯರು ಇದ್ದಾರೆ ಅವರಿಗೆ ಸ್ನಾನ ಮಾಡುವ ಸರಿಯಾದ ವ್ಯವಸ್ಥೆ ಇಲ್ಲ.ಈ ಸಂಬಂದ್ಧವಾಗಿ ಕ್ವಾರಂಟೈನಲ್ಲಿ ಇರುವ ಜನರು PDO ಅವರಿವೆ ತಿಳಿಸಿದಾಗ ಇದು ನನ್ನ ಕೆಲಸವಲ್ಲ ನೀವು  ವಿಲೇಜ್ ಅಕೌಂಟೆಂಟ್ ಗೆ ಕೇಳಿ ಎಂದು ಹೇಳಿದರು.ಅದೆ ರೀತಿಯಾಗಿ ಜನರು ವಿಲೇಜ್ ಅಕೌಂಟೆಂಟ್ ಗೆ ಕೇಳಿದಾಗ ನೀವು ಸಂಬಂಧಪಟ್ಟ ತಹಸೀಲ್ದಾರರಿಗೆ ತಿಳಿಸಿ ಎಂದ್ದು ಹೇಳಿದರು.ಮಾನ್ಯ ತಹಸೀಲ್ದಾರರಿಗೆ ಸಂಪರ್ಕಿಸಿದರೆ ಇದು ನನ್ನ ಕೆಲಸವಲ್ಲ ನಿಮಗೆ ಟೆಸ್ಟ್ ಮಾಡಿಸಿ ನಿಮ್ಮ ಕ್ವಾರಂಟೈನ್ ಸ್ಥಳಗಳಿಗೆ ಕಳುಹಿಸುವ ಕೆಲಸ ಮಾತ್ರ ನನ್ನದು, ನಿಮಗೆ ಊಟವಿಲ್ಲವಾ, ಬೆಳಗಿನ ಉಪಹಾರವಿಲ್ಲವಾ ಹೇಳಿ ಅಷ್ಟು ಮಾತ್ರ ನಾನು ರಿಪೋರ್ಟ್ ಮಾಡುತ್ತೇನೆಂದು ತಿಳಿಸಿದರು.ಈ ವಿಷಯವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದರೂ ಕೂಡ ಇಲ್ಲಿವರೆಗೂ ಸಮಸ್ಯೆ ಬಗೆಹರಿದಿಲ್ಲವೆಂದು ಕ್ವಾರಂಟೈನಲ್ಲಿದ್ದ ಜನರು ತಮ್ಮ ಅಳಿಲನ್ನು ತೋಡಿಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಶೌರ್ಯ ಮೆರೆದ ಯುವಕರಿಗೆ ಎಸ್.ಡಿ ಪಿ.ಐ ನಿಂದ  ಸನ್ಮಾನ

Tue May 26 , 2020
ಪಾಣೆ ಮಂಗಳೂರು ನೇತ್ರಾವತಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.ಮೃತ ಯುವಕ ಕಲ್ಲಡ್ಕದ ನಿಶಾಂತ್ ಎಂದು ತಿಳಿದು ಬಂದಿದೆ. ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ನಿಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಆತನನ್ನು ನೋಡಿದ ಕೂಡಲೇ ಈದ್ ಹಬ್ಬದ ಸಂಭ್ರಮದಲ್ಲಿದ್ದರೂ ಗೂಡಿನಂಗಡಿಯ ಶಮೀರ್ ಮುಹಮದ್, ತೌಸೀಫ್ ಝಾಹಿದ್,ಮುಕ್ತಾರ್ ಆರೀಫ್ ರಕ್ಷಣೆ ಮಾಡಿದ್ದಾರೆ. ನಿಶಾಂತ್ ನನ್ನು ಆಸ್ಪತ್ರೆಗೆ ಕರೆದೊಯ್ದರು […]

Advertisement

Wordpress Social Share Plugin powered by Ultimatelysocial