ಶುಗರ್ ಸಮಸ್ಯೆ ಇರುವವರು ಈ ಪಾನೀಯಗಳನ್ನು ಸೇವಿಸಿ ನಿಶ್ಚಿಂತೆಯಾಗಿರಬಹುದು !

ಬೆಂಗಳೂರು : ಮಧುಮೇಹ ಮತ್ತು ಪ್ರಿಡಯಾಬಿಟಿಸ್‌ಗಳು ಹೈಪರ್ಗ್ಲೈಸೆಮಿಯಾ ಸಂಬಂಧಿಸಿವೆ. ಇದನ್ನು ಅಧಿಕ ರಕ್ತದ ಸಕ್ಕರೆ ಎಂದು ಕೂಡಾ ಕರೆಯಲಾಗುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆಯು ನಾರ್ಮಲ್ ಗಿಂತ ಅಧಿಕವಾಗಿದ್ದು, ಟೈಪ್ 2 ಮಟ್ಟವನ್ನುಇನ್ನೂ ತಲುಪಿಲ್ಲದಿದ್ದರೆ, ಅದನ್ನು ಪ್ರಿಡಿಯಾಬಿಟಿಸ್ ಎಂದು ಕರೆಯುತ್ತೇವೆ.

ಮೇದೋಜ್ಜೀರಕ ಗ್ರಂಥಿಯಿಂದ ಉತ್ಪತ್ತಿಯಾಗುವ ಇನ್ಸುಲಿನ್ ಎಂಬ ಹಾರ್ಮೋನ್ ಗ್ಲುಕೋಸನ್ನು ಹೀರಿಕೊಳ್ಳಲು ಜೀವಕೋಶಗಳಿಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ದೇಹದಲ್ಲಿನ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನ ಮೆಟಬಾಲಿಸಮನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಇನ್ಸುಲಿನ್ ಪ್ರಮುಖವಾಗಿದೆ.

ರಕ್ತದಲ್ಲಿನ ಸಕ್ಕರೆಯ ನಿಯಂತ್ರಣ ಏರುಪೇರಾಗಲು ಅನೇಕ ಅಂಶಗಳು ಕಾರಣವಾಗಬಹುದು. ನಿಮ್ಮ ಯಕೃತ್ತು ಹೆಚ್ಚು ಗ್ಲೂಕೋಸ್ ಅನ್ನು ಬಿಡುಗಡೆ ಮಾಡಿದಾಗ, ನಿಮ್ಮ ದೇಹವು ತುಂಬಾ ಕಡಿಮೆ ಇನ್ಸುಲಿನ್ಅನ್ನು ಉತ್ಪಾದಿಸಿದಾಗ ಅಥವಾ ನಿಮ್ಮ ದೇಹವು ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ರಕ್ತದಲ್ಲಿನ ಸಕ್ಕರೆ ಪ್ರಮಾಣ ಏರಿಕೆಯಾಗಲು ಕಾರಣವಾಗಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಕೆಲವು ಪಾನೀಯಗಳಿವೆ.

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಲು ಈ ಪಾನೀಯಗಳು ಸಹಕಾರಿ :
1. ಕ್ಯಾಮೊಮೈಲ್ ಚಹಾ :
ಕ್ಯಾಮೊಮೈಲ್ ಚಹಾವನ್ನು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕ ಮತ್ತು ಕ್ಯಾನ್ಸರ್-ತಡೆಗಟ್ಟುವ ಗುಣಗಳನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಊಟದ ನಂತರ ಒಂದು ಕಪ್ ಕ್ಯಾಮೊಮೈಲ್ ಚಹಾವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಬರುತ್ತದೆ. ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2 .ನಿಂಬೆ ಮತ್ತು ಶುಂಠಿ ಪಾನೀಯ:
ನಿಂಬೆ ಮತ್ತು ಶುಂಠಿ ಪಾನೀಯವು ದೀರ್ಘಾವಧಿಯ ರಕ್ತದ ಸಕ್ಕರೆಯ ನಿಯಂತ್ರಣವನ್ನುನಿರ್ವಹಿಸಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಉಂಟಾಗುವ ದೃಷ್ಟಿ ಹಾನಿಯನ್ನು ಇದು ಕಡಿಮೆ ಮಾಡುತ್ತದೆ. ತುರಿದ ಅಥವಾ ಕತ್ತರಿಸಿದ ಶುಂಠಿಯನ್ನು ನಿಂಬೆ ರಸದೊಂದಿಗೆ ಬೆರೆಸಿ ಕುಡಿಯಬಹುದು.

3. ಬಾರ್ಲಿ ನೀರು :
ಬಾರ್ಲಿ ನೀರಿನಲ್ಲಿ ಕರಗದ ನಾರಿನಂಶ ಅಧಿಕವಾಗಿದೆ. ಇದು ಮಧುಮೇಹಿಗಳಿಗೆ ಉತ್ತಮ ಮತ್ತು ಆರೋಗ್ಯಕರ ಪಾನೀಯವಾಗಿದೆ. ಏಕೆಂದರೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

5. ಮೆಂತ್ಯ ನೀರು :
ಮಧುಮೇಹಿಗಳು ಮೆಂತ್ಯೆ ನೀರನ್ನು ತಪ್ಪದೇ ಕುಡಿಯಬೇಕು. ಮೆಂತ್ಯೆ ನೀರು ಉತ್ತಮ ಡಿಟಾಕ್ಸ್ ಪಾನೀಯವಾಗಿದೆ. ಮೆಂತ್ಯೆ ಇನ್ಸುಲಿನ್ ಉತ್ಪತ್ತಿ ಮಾಡಲು ಸಹಾಯ ಮಾಡುತ್ತದೆ. ಆದ್ದರಿಂದ ಮಧುಮೇಹ ಇರುವವರು ಮೆಂತ್ಯೆಯನ್ನು ರಾತ್ರಿ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಈ ನೀರನ್ನು ಕುಡಿಯಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಕ್ಕರೆ ಕಾಯಿಲೆ ಇರುವವರಿಗೆ ಈ ಸಿಹಿ ಹಣ್ಣು ಒಂದು ವರದಾನವಿದ್ದಂತೆ!

Wed Mar 1 , 2023
ಸೀತಾಫಲದಂತೆಯೇ ರಾಮಫಲ ಕೂಡ ಹಲವಾರು ಆರೋಗ್ಯಕರ ಲಾಭಗಳನ್ನು ಹೊಂದಿದೆ, ಇದು ಒಂದು ರೀತಿಯ ಋತುಮಾನದ ಹಣ್ಣಾಗಿದೆ, ಇದು ಹೆಚ್ಚಾಗಿ ಅಸ್ಸಾಂ, ಮಹಾರಾಷ್ಟ್ರದಲ್ಲಿ ಸಿಗುತ್ತದೆ. ರಾಮಫಲ ಸಕ್ಕರೆ ರೋಗಿಗಳಿಗೆ ತುಂಬಾ ಉಪಯುಕ್ತ ಹಣ್ಣಾಗಿದೆ, ಸಾಮಾನ್ಯವಾಗಿ ಮಧುಮೇಹ ರೋಗಿಗಳಿಗೆ ಹಣ್ಣುಗಳನ್ನು ಎಚ್ಚರಿಕೆಯಿಂದ ತಿನ್ನಲು ಸಲಹೆ ನೀಡಲಾಗುತ್ತದೆ, ಆದರೆ, ರಾಮಫಲ ಸೇವನೆಯಿಂದ ಕೇವಲ ಸಕ್ಕರೆ ನಿಯಂತ್ರಣ ಅಷ್ಟೇ ಅಲ್ಲ, ಇದರಿಂದ ನೀವು ನಿಮ್ಮ ತೂಕವನ್ನು ಕೂಡ ಇಳಿಕೆ ಮಾಡಿಕೊಳ್ಳಬಹುದು. ರಕ್ತದಲ್ಲಿನ ಸಕ್ಕರೆಯ ಏರಿಳಿತ ನಿಯಂತ್ರಣ […]

Advertisement

Wordpress Social Share Plugin powered by Ultimatelysocial