ಮ್ಯಾಂಡೊಲಿನ್ ಶ್ರೀನಿವಾಸ್ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ.

 

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಸರ್ವರಿಗೂ ಆಪ್ತವಾಗುವಂತೆ ಜನಪ್ರಿಯಗೊಳಿಸಿದವರಲ್ಲಿ ಮ್ಯಾಂಡೋಲಿನ್ ಶ್ರೀನಿವಾಸ್ ಪ್ರಮುಖರು. ಕಛೇರಿಗಳಲ್ಲಿ ಹಾಗೂ ಕಿರುತೆರೆಯಲ್ಲಿ ನಾವು ಆಗಾಗ ಕಾಣುತ್ತಿದ್ದ ಸಂಗೀತ ಕಾರ್ಯಕ್ರಮಗಳಲ್ಲಿ ತನ್ನ ನಸುನಗೆಯ ಮಂದಹಾಸಕ್ಕೆ ಪೂರಕವಾಗಿ, ಕೈಯಲ್ಲಿನ ಮ್ಯಾಂಡೋಲಿನ್ನಿನಿಂದ ಅಂತಹದ್ದೇ ಮುದಭಾವ ನೀಡುವಂತಹ ಸುಶ್ರಾವ್ಯತೆಯನ್ನು, ಪುಟ್ಟ ವಯಸ್ಸಿನಿಂದಲೇ ಹಲವೊಮ್ಮೆ ಒಂಟಿಯಾಗಿ ಹಾಗೂ ಬಹಳಷ್ಟು ವೇಳೆ ತಮ್ಮ ಸಹೋದರ ರಾಜೇಶರೊಡಗೂಡಿ ಶ್ರೋತೃಗಳಿಗೆ ಹಂಚಿದ ಅಸಾಮಾನ್ಯ ಪ್ರತಿಭೆ ಶ್ರೀನಿವಾಸ್. ಮ್ಯಾಂಡೊಲಿನ್ ಅಂದರೆ ವಿದೇಶಿ ವಾದ್ಯ, ಅದು ಸಿನಿಮಾ ಹಾಡುಗಳಿಗೆ ಸರಿ ಇತ್ಯಾದಿ ಎಲ್ಲ ಗೋಡೆಗಳನ್ನೂ ಮುರಿದು ಭಾರತೀಯ ಸಂಗೀತ ಸುನಾದದಲ್ಲಿ ಅದನ್ನು ಒಂದಾಗಿಸಿದ ಕೀರ್ತಿ ಮ್ಯಾಂಡೊಲಿನ್ ಶ್ರೀನಿವಾಸ್ ಅವರದ್ದು.ಉಪ್ಪಲವು ಶ್ರೀನಿವಾಸ್ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಪ್ರಾಂತ್ಯದ ಪಲಕೊಲ್ ಎಂಬ ಗ್ರಾಮದಲ್ಲಿ 1969ರ ಫೆಬ್ರುವರಿ 28ರಂದು ಜನಿಸಿದರು. ತಮ್ಮ ತಂದೆ ಸತ್ಯನಾರಾಯಣ ಅವರು ಬಳಸುತ್ತಿದ್ದ ಮ್ಯಾಂಡೋಲಿನ್ ವಾದ್ಯವನ್ನು ಶ್ರೀನಿವಾಸ್ ಕೇವಲ ಆರು ವರ್ಷ ಬಾಲಕನಾಗಿದ್ದಾಗಲೇ ಮೃದುವಾಗಿ ಮೀಟತೊಡಗಿದ್ದ. ತಮ್ಮ ಮಗನಲ್ಲಿ ಸಂಗೀತ ಅಂತರ್ಗತವಾಗಿದ್ದನ್ನು ಮನಗಂಡ ಸಂಗೀತ ಪ್ರಿಯ ತಂದೆ ಮಗನಿಗಾಗಿ ಒಂದು ಮ್ಯಾಂಡೋಲಿನ್ ಖರೀದಿಸಿ ಆತನಿಗೆ ಸಂಗೀತ ಪಾಠಗಳನ್ನು ನೀಡಲು ಪ್ರಾರಂಭಿಸಿದರು. ಗಿಟಾರ್ ವಾದಕರಾದ ವಾಸು ರಾವ್ ಅವರು ಏಳು ವರ್ಷದ ಬಾಲಕ ಶ್ರೀನಿವಾಸನಿಗೆ ಪಾಶ್ಚಿಮಾತ್ಯ ಸಂಗೀತವನ್ನು ಪರಿಚಯಿಸಿದರು. ಶ್ರೀನಿವಾಸನ ತಂದೆ ಸತ್ಯನಾರಾಯಣರ ಸಂಗೀತ ಗುರುಗಳಾಗಿದ್ದ ರುದ್ರರಾಜು ಸುಬ್ಬರಾಯರಿಗೆ ಮ್ಯಾಂಡೋಲಿನ್ ತಿಳಿದಿರಲಿಲ್ಲ. ಅವರು ಸಂಗೀತವನ್ನು ಹಾಡಿ ತೋರಿದರೆ ಅದನ್ನು ಬಾಲಕ ಶ್ರೀನಿವಾಸ ಮ್ಯಾಂಡೊಲಿನ್ನಿನಲ್ಲಿ ಪ್ರತಿಧ್ವನಿಸುತ್ತಿದ್ದ.ಒಂಬತ್ತು ವಯಸ್ಸಿನ ಶ್ರೀನಿವಾಸ್ 1978ರ ವರ್ಷದಲ್ಲಿ ಗುಡಿವಾಡದಲ್ಲಿ ಜರುಗಿದ ತ್ಯಾಗರಾಜ ಆರಾಧನೆಯ ಸಂದರ್ಭದಲ್ಲಿ ತನ್ನ ಪ್ರಥಮ ಸಂಗೀತ ಸೇವೆಯನ್ನು ಸಲ್ಲಿಸಿದ್ದ. 1981ರ ವರ್ಷದಲ್ಲಿ ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಚೆನ್ನೈ ನಗರದ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯಲ್ಲಿ ಸಾರ್ವಜನಿಕವಾಗಿ ತನ್ನ ಪ್ರಪ್ರಥಮ ಸಂಗೀತ ಕಛೇರಿಯನ್ನು ನಡೆಸಿಕೊಟ್ಟ. ಅಲ್ಲಿಂದ ಆತ ಹಿಂದಿರುಗಿ ನೋಡಿದ್ದೇ ಇಲ್ಲ. ನಾಡಿನೆಲ್ಲೆಡೆಯಲ್ಲಿ ಮ್ಯಾಂಡೊಲಿನ್ ಎಂಬ ವಿದೇಶಿ ವಾದ್ಯ ಶ್ರೀನಿವಾಸರ ಕೈಚಳಕದಲ್ಲಿ ಸುಮಧುರವಾದ ಕರ್ನಾಟಕ ಶಾಸ್ರೀಯ ಸಂಗೀತವನ್ನು ಝೇಂಕರಿಸತೊಡಗಿತ್ತು. ಇದರ ಪ್ರತಿಧ್ವನಿ ವಿಶ್ವದೆಲ್ಲೆಡೆಯಲ್ಲೂ ಆತನ ಕಾರ್ಯಕ್ರಮಗಳ ಮೂಲಕ ಹಾಗೂ ಧ್ವನಿಸುರುಳಿಗಳ ಮೂಲಕ ನಿರಂತರವಾಗಿ ಮಾರ್ದನಿಸಲು ತೊಡಗಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಬಹುನೀರಿಕ್ಷಿತ ಸಿಟ್ರಸ್ eC3 ಎಲೆಕ್ಟ್ರಿಕ್ ಕಾರು ಬಿಡುಗಡೆ

Tue Feb 28 , 2023
ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರಸ್, ತನ್ನ ಮೊದಲ ಎಲೆಕ್ಟ್ರಿಕ್ ಕಾರು ಇಸಿ3ಯನ್ನು (Citroen eC3) ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ICE ಚಾಲಿತ ಸಿಟ್ರಸ್ C3 ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಹೆಚ್ಚಿನ ಮಾಹಿತಿ ತಿಳಿಯೋಣ. ಸಿಟ್ರಸ್ eC3 ಎರಡು ಲೈವ್ ಹಾಗೂ ಫೀಲ್ ಎಂಬ ಎರಡು ರೂಪಾಂತರಗಳಲ್ಲಿ ಸಿಗಲಿದ್ದು, ಲೈವ್ ವೇರಿಯಂಟ್‌ ಬೆಲೆ ರೂ.11.50 ಲಕ್ಷವಿದ್ದು, ಫೀಲ್ ವೇರಿಯಂಟ್‌ ರೂ.12.43 ಲಕ್ಷ […]

Advertisement

Wordpress Social Share Plugin powered by Ultimatelysocial