ಭಾರತದಲ್ಲಿ ಬಹುನೀರಿಕ್ಷಿತ ಸಿಟ್ರಸ್ eC3 ಎಲೆಕ್ಟ್ರಿಕ್ ಕಾರು ಬಿಡುಗಡೆ

ಫ್ರೆಂಚ್ ವಾಹನ ತಯಾರಕ ಕಂಪನಿ ಸಿಟ್ರಸ್, ತನ್ನ ಮೊದಲ ಎಲೆಕ್ಟ್ರಿಕ್ ಕಾರು ಇಸಿ3ಯನ್ನು (Citroen eC3) ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದು ICE ಚಾಲಿತ ಸಿಟ್ರಸ್ C3 ಹ್ಯಾಚ್‌ಬ್ಯಾಕ್‌ನ ಎಲೆಕ್ಟ್ರಿಕ್ ಆವೃತ್ತಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಹೆಚ್ಚಿನ ಮಾಹಿತಿ ತಿಳಿಯೋಣ.

ಸಿಟ್ರಸ್ eC3 ಎರಡು ಲೈವ್ ಹಾಗೂ ಫೀಲ್ ಎಂಬ ಎರಡು ರೂಪಾಂತರಗಳಲ್ಲಿ ಸಿಗಲಿದ್ದು, ಲೈವ್ ವೇರಿಯಂಟ್‌ ಬೆಲೆ ರೂ.11.50 ಲಕ್ಷವಿದ್ದು, ಫೀಲ್ ವೇರಿಯಂಟ್‌ ರೂ.12.43 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ ಬುಕಿಂಗ್ ಈಗಾಗಲೇ ಆರಂಭವಾಗಿದ್ದು, ಆಸಕ್ತ ಗ್ರಾಹಕರು ರೂ.25,000 ಮುಂಗಡ ಹಣವನ್ನು ಪಾವತಿಸುವ ಮೂಲಕ ಬುಕ್ ಮಾಡಬಹುದು. ದೇಶಾದ್ಯಂತ 25 ನಗರಗಳಲ್ಲಿ eC3 ಹ್ಯಾಚ್‌ಬ್ಯಾಕ್‌ನ್ನು ಮಾರಾಟ ಮಾಡಲಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಸಿಟ್ರಸ್ eC3 ಪವರ್‌ಟ್ರೇನ್ ಹಾಗೂ ರೇಂಜ್ ಬಗ್ಗೆ ಹೇಳುವುದಾದರೆ, ಇದು 29.2kWh ಬ್ಯಾಟರಿ ಪ್ಯಾಕ್ ಹೊಂದಿದ್ದು, ಫ್ರಂಟ್ ಆಕ್ಸಲ್-ಮೌಂಟೆಡ್ ಎಲೆಕ್ಟ್ರಿಕ್ ಮೋಟಾರ್ ನಿಂದ ಚಾಲಿತವಾಗಲಿದ್ದು, 57 hp ಗರಿಷ್ಠ ಪವರ್ ಹಾಗೂ 143 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಇದು 107kph ಟಾಪ್ ಸ್ವೀಡ್ ಹೊಂದಿದ್ದು, ಕೇವಲ 6.8 ಸೆಕೆಂಡುಗಳಲ್ಲಿ 0-60 kph ವೇಗವನ್ನು ಪಡೆದುಕೊಳ್ಳಲಿದೆ.

ಈ ನೂತನ ಕಾರು, ಎರಡು ಡ್ರೇವಿಂಗ್ ಮೋ320kmಡ್ ಆಯ್ಕೆಗಳನ್ನು ಹೊಂದಿದೆ. ಅವುಗಳೆಂದರೆ, ಏಕೋ ಹಾಗೂ ಸ್ಟ್ಯಾಂಡರ್ಡ್, ಸಿಟ್ರಸ್ eC3 ಸಂಪೂರ್ಣ ಚಾರ್ಜಿನಲ್ಲಿ ಬರೋಬ್ಬರಿ 320 km ರೇಂಜ್ ನೀಡಲಿದ್ದು, ಚಾರ್ಜಿಂಗ್ ಬಗ್ಗೆ ಮಾತನಾಡುವುದಾದರೆ, ಈ ಕಾರಿನ ಬ್ಯಾಟರಿ ಡಿಸಿ ಫಾಸ್ಟ್ ಚಾರ್ಜಿಂಗ್ ಆಯ್ಕೆಯಲ್ಲಿ ಶೇಕಡ 10-80% ಚಾರ್ಜ್ ಆಗಲು 57 ನಿಮಿಷ ತೆಗೆದುಕೊಳ್ಳುತ್ತದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಇದರ ಬ್ಯಾಟರಿ ಶೇಕಡ 10-100% ಚಾರ್ಜ್ ಆಗಲು 10.5 ಗಂಟೆ ತೆಗೆದುಕೊಳುತ್ತದೆ.

ಸಿಟ್ರಸ್ C3 ಹ್ಯಾಚ್‌ಬ್ಯಾಕ್‌ನಂತೆಯೇ ಈ ಎಲೆಕ್ಟ್ರಿಕ್ eC3 ಕೂಡ ಭರಪೂರ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. 10.2 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಫೋರ್ ಸ್ಪೀಕರ್ ಆಡಿಯೋ, ಹೈಟ್ ಅಡ್ಜಸ್ಟ್‌ಏಬಲ್ ಡ್ರೈವರ್ ಸೀಟ್ ಪಡೆದಿದೆ. ಅಲ್ಲದೆ, MyCitroen ಕನೆಕ್ಟ್ ಅಪ್ಲಿಕೇಶನ್ ಅನ್ನು ಹೊಂದಿದ್ದು, ಇದು ಕಾರಿನ ಚಾರ್ಜಿಂಗ್ ಸ್ಟೇಟಸ್, ಹತ್ತಿರದ ಚಾರ್ಜಿಂಗ್ ಸ್ಟೇಷನ್‌ ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸುತ್ತದೆ.

ಸಿಟ್ರಸ್ eC3 ಎಲೆಕ್ಟ್ರಿಕ್ ಕಾರು ಸುರಕ್ಷತೆಯ ದೃಷ್ಟಿಯಿಂದಲ್ಲೂ ಅತ್ಯುತ್ತಮವಾಗಿದೆ. ಡುಯೆಲ್ ಏರ್ ಬಾಗ್ಸ್, EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಹೊಂದಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಯು ಆಕರ್ಷಕ ಕೊಡುಗೆಯನ್ನು ನೀಡುತ್ತಿದೆ. ಬ್ಯಾಟರಿ ಪ್ಯಾಕ್‌ಗೆ 7 ವರ್ಷ/1,40,000 ಕಿ.ಮೀ, ಎಲೆಕ್ಟ್ರಿಕ್ ಮೋಟರ್‌ಗೆ 5 ವರ್ಷ/1,00,000 ಕಿ.ಮೀ ಹಾಗೂ ಕಾರಿಗೆ 3 ವರ್ಷ/1,25,000 ಕಿ.ಮೀ ವಾರಂಟಿಯನ್ನು ನೀಡುತ್ತಿದೆ.

ಇದೀಗ, ಸಿಟ್ರಸ್ ಕಂಪನಿ eC3 ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್‌ನ್ನು ಬಿಡುಗಡೆ ಮಾಡಿದೆ. ಜೊತೆಗೆ ಪೆಟ್ರೋಲ್ ಚಾಲಿತ C3 ಏರ್‌ಕ್ರಾಸ್ ಎಸ್‌ಯುವಿಯ ಎಲೆಕ್ಟ್ರಿಕ್ ಆವೃತ್ತಿಯಾದ eC3 ಏರ್‌ಕ್ರಾಸ್ ಎಸ್‌ಯುವಿಯನ್ನು 2025ರಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಲು ಸಿದ್ಧತೆ ನಡೆಸುತ್ತಿದ್ದು, ಇದು ಹಲವು ನವೀನ ವೈಶಿಷ್ಟ್ಯಗಳೊಂದಿಗೆ ಬರುವ ಸಾಧ್ಯತೆ ಇದ್ದು, 5 ಅಥವಾ 7 ಆಸನ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಖರೀದಿಗೆ ಸಿಗಬಹುದು.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಟಾಟಾ ಟಿಯಾಗೊ ಇವಿಗೆ ಸಿಟ್ರಸ್ eC3 ಎಲೆಕ್ಟ್ರಿಕ್ ಕಾರು ಭಾರೀ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗಿದ್ದು, ಬೆಲೆಗೆ ತಕ್ಕಂತೆ ಗ್ರಾಹರನ್ನು ಆಕರ್ಷಿಸುವ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಮುಂಬರುವ ದಿನಗಳಲ್ಲಿ ಭಾರತದಲ್ಲಿ ಹೇಗೆ ಕಮಲ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಟಾಟಾ ಟಿಯಾಗೊ ಇವಿ ರೂ.8.49 ಲಕ್ಷದಿಂದ ರೂ.11.79 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಮತ್ತಷ್ಟು ಅಗ್ಗವಾಗಲಿದೆ ಎಲೆಕ್ಟ್ರಿಕ್ ವಾಹನಗಳ ಬೆಲೆ: ಇಲ್ಲಿದೆ ಕಾರಣ

Tue Feb 28 , 2023
  ಭಾರತವು ಶೂನ್ಯ ಹೊರಸೂಸುವಿಕೆಯತ್ತ ಹೆಜ್ಜೆ ಇಡುತ್ತಿದ್ದು, ವಿವಿಧ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು (ಇವಿ) ತಯಾರಿಸುತ್ತಿವೆ. ಆದರೆ, ಪೆಟ್ರೋಲ್ ಡಿಸೇಲ್ ವಾಹನಗಳಿಗೆ ಹೋಲಿಸಿದರೆ, ಎಲೆಕ್ಟ್ರಿಕ್ ವಾಹನಗಳ ಬೆಲೆ ದುಬಾರಿಯಿದ್ದು, ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಇದೀಗ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ನೆಮ್ಮದಿ ಸುದ್ದಿಯೊಂದನ್ನು ನೀಡಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ ‘ಐಡಿಯಾಸ್ ಆಫ್ ಇಂಡಿಯಾ’ ಶೃಂಗಸಭೆಯಲ್ಲಿ ಭವಿಷ್ಯದ ಇಂಧನ ಬಳಕೆ ಕುರಿತಂತೆ ಸ್ವತಃ ಕೇಂದ್ರ ಸಾರಿಗೆ ಸಚಿವರೇ […]

Advertisement

Wordpress Social Share Plugin powered by Ultimatelysocial