ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯ ವಿವರಿಸಲು ಅಸಾಧ್ಯ. ವಿಪರೀತ ನಿಷ್ಠೆಗೆ ಹೆಸರಾದ ನಾಯಿ ಬೇಷರತ್ತಾಗಿ ತನಗೆ ಅನ್ನ ಹಾಕಿದವರನ್ನು ನೆನಪಿಡುತ್ತದಂತೆ. ಇಂಥದ್ದೇ ಒಂದು ಅತ್ಯಾಪ್ತ ಸುದ್ದಿ ಇಲ್ಲಿದೆ. ಗಾಲಿ ಕುರ್ಚಿಯಲ್ಲಿ ಕುಳಿತ ವಿಶೇಷ ಚೇತನ ಹೊಂದಿದ ಹುಡುಗನನ್ನು ನಾಯಿಯೊಂದು ತನ್ನ ಮುಂಗಾಲುಗಳಿಂದ ದಬ್ಬಿಕೊಂಡು ಹೋಗುವ ವಿಡಿಯೋ ವೈರಲ್ ಆಗಿದೆ. ನ್ಯೂಜಿಲೆಂಡ್ ನ ತಾನಿಯಾ ಬಟ್ಲರ್ ತನ್ನ ಬಾಕ್ಸರ್ ಗೆ ತುರ್ತು ಸಂದರ್ಭದಲ್ಲಿ ಯಾವ ರೀತಿ ಸ್ಪಂದಿಸಬೇಕೆಂದು ತರಬೇತಿ ಕೊಟ್ಟಿದ್ದ ವಿಡಿಯೋ ನೆಟ್ಟಿಗರ ಗಮನ ಸೆಳೆದಿತ್ತು. ನಾಯಿ ತನ್ನ ಮಾಲೀಕನನ್ನು ವೀಲ್ಚೇರ್ ನಲ್ಲಿ ಕರೆದೊಯ್ಯುವ ಹಳೆಯ ವಿಡಿಯೋ ಈಗ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಸಾಂತ ನಂದ ಅವರು ವಿಡಿಯೋವನ್ನು ಶೇರ್ ಮಾಡಿದ್ದಾರೆ.
ಅನ್ನ ಹಾಕಿದ್ದದವರ ನೆನಪಿಡುತ್ತೇ ಈ ಪ್ರಾಣಿ

Please follow and like us: