ಒನ್ ನೇಷನ್ ಒನ್ ಮಾರ್ಕೆಟ್ ಯೋಜನೆ ಜಾರಿ

ನವದೆಹಲಿ: ದೇಶದ ರೈತರಿಗೆ ಅನುಕೂಲವಾಗುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತೊಂದು ಯೋಜನೆ ರೂಪಿಸಿದೆ. ಮೋದಿ ನೇತೃತ್ವದಲ್ಲಿ ಇಂದು ನಡೆದ ಸಂಪುಟ ಸಭೆಯಲ್ಲಿ ‘ಒನ್ ನೇಷನ್ ಒನ್ ಒನ್ ಮಾರ್ಕೆಟ್’ ಯೋಜನೆಯನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ರೈತರಿಗಾಗಿ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ‘ಒನ್ ನೇಷನ್ ಒನ್  ಮಾರ್ಕೆಟ್’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ದೇಶದಲ್ಲಿ ಎಲ್ಲಿ ಬೇಕಾದರೂ ಬೆಳೆ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗಿದೆ. ರೈತರೇ ಬೆಳೆಗಳಿಗೆ ದರ ನಿಗದಿ ಮಾಡಲು ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹಿಂದೂ ಯುವತಿಯ ಮದುವೆ ಮಾಡಿದ ಮುಸ್ಲಿಂ ದಂಪತಿ

Wed Jun 3 , 2020
ಮಚ್ಚಿವರ: ಕೊರೊನಾವ ವೈರಸ್ ಲಾಕ್‌ಡೌನ್ ನಿಯಮಗಳು ಜಾರಿಯಲ್ಲಿರುವುದರ ಹಿನ್ನೆಲೆಯಲ್ಲಿ ನವ ಜೀವನಕ್ಕೆ ಕಾಲಿಡುತ್ತಿರುವ ಹಿಂದೂ ಯುವತಿಯ ವಿವಾಹ ನೆರವೇರಿಸುವ ಮೂಲಕ ಮುಸ್ಲಿಂ ದಂಪತಿಗಳು ಎಲ್ಲೆಡೆಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.ಲೂಧಿಯಾನಾ ಜಿಲ್ಲೆಯ ಭಾಟಿಯಾನ್‌ನಲ್ಲಿರುವ ಹಿಂದೂ ದಂಪತಿಗಳ ವಿವಾಹವನ್ನು ನೆರವೇರಿಸಲಾಗಿದೆ. ಸುದೇಶ್ ಕುಮಾರ್ ಅವರೊಂದಿಗೆ 22 ವರ್ಷದ ಪೂಜಾ ಎಂಬವರ ವಿವಾಹವು ನಿಗದಿಯಾಗಿತ್ತು. ಆದರೆ ಕೊರೊನಾ ವೈರಸ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೋಷಕರಿಗೆ ಆಗಮಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಮುಸ್ಲಿಂ ದಂಪತಿಗಳಾದ ಅಬ್ದುಲ್ ಸಾಜೀದ್ ಹಾಗೂ ಸೋನಿ […]

Advertisement

Wordpress Social Share Plugin powered by Ultimatelysocial