ಭಾರೀ ಸೋಲು ಕಂಡ ಬಾಲಿವುಡ್ ಬಿಗ್ ಬಜೆಟ್ ಚಿತ್ರ..!

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕಂಗನಾ ರಾಣಾವತ್ ತಮ್ಮ ಜೀವಮಾನದಲ್ಲೇ ಇಂಥದ್ದೊಂದು ಅವಮಾನ ಎದುರಿಸಿಲ್ಲ ಎನ್ನುವಷ್ಟ ‘ಧಾಕಡ್’ ಚಿತ್ರ ಅವರನ್ನು ನಿದ್ದೆಗೆಡಿಸಿದೆ. ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ನೂರಾರು ಕೋಟಿ ಬಾಚಲಿದೆ ಎಂಬ ನಿರೀಕ್ಷೆಯಿತ್ತು.

ಹಾಗಾಗಿಯೇ ದೇಶದಾದ್ಯಂತ ಕಂಗನಾ ಸಂಚರಿಸಿ, ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗಿದ್ದರು. ಆದರೆ, ಆಗಿದ್ದು ಬೇರೆ.

ಈ ಚಿತ್ರದಲ್ಲಿ ಕಂಗನಾ ಮಹಿಳಾ ಸೂಪರ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದರು. ಇಡೀ ಕಥೆ ಮಹಿಳಾ ಪ್ರಧಾನ ಪಾತ್ರದ ಸುತ್ತಲೇ ಇರುವುದರಿಂದ, ಅದನ್ನು ಕಂಗನಾ ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಆದರೂ, ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟವಾಗಿಲ್ಲ. ಹಾಗಾಗಿ ಮೊದಲ ದಿನದಿಂದಲೂ ಈ ಚಿತ್ರಕ್ಕೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಧಾಕಡ್ ಸಿನಿಮಾ ರಿಲೀಸ್ ಆಗಿ ಇಂದಿಗೆ ಎಂಟು ದಿನಗಳು ಕಳೆದಿವೆ. ಎಂಟು ದಿನಗಳಲ್ಲಿ ಅದು ಮೂರು ಕೋಟಿ ರೂಪಾಯಿ ಕೂಡ ಗಳಿಸಿಲ್ಲ ಎನ್ನುತ್ತಿವೆ ಬಾಕ್ಸ್ ಆಫೀಸಿ ರಿಪೋರ್ಟ್. ಅದರಲ್ಲೂ ನಿನ್ನೆ ದೇಶದಾದ್ಯಂತ 20 ಟಿಕೆಟ್ ಕೂಡ ಮಾರಾಟವಾಗಿಲ್ಲ ಎಂದು ಬಿಟೌನ್ ಮಾತಾಡಿಕೊಳ್ಳುತ್ತಿದೆ. ನಿನ್ನೆಯ ಗಳಿಕೆಯು ಐದು ಸಾವಿರ ರೂಪಾಯಿ ಕೂಡ ಮುಟ್ಟಿಲ್ಲವಂತೆ. ಹಾಗಾಗಿ ಕಂಗನಾ ಸೋಲುನ್ನಬೇಕಾಗಿದ್ದು ಅನಿವಾರ್ಯ.

ಧಾಕಡ್ ಸಿನಿಮಾ ರಿಲೀಸ್ ದಿನವೇ ಹಿಂದಿಯ ಮತ್ತೊಂದು ಚಿತ್ರ ರಿಲೀಸ್ ಆಗಿದೆ. ಅದು ನೂರು ಕೋಟಿ ಕ್ಲಬ್ ಸೇರಿದೆ. ಆದರೆ, ಕಂಗನಾ ಸಿನಿಮಾ ಮಾತ್ರ ಅಂದುಕೊಂಡಂತೆ ಮ್ಯಾಜಿಕ್ ಮಾಡಲಿಲ್ಲ. ಸಿನಿಮಾದ ಬಗ್ಗೆ ಅಂತಹ ಒಳ್ಳೆಯ ವಿಮರ್ಶೆ ಕೂಡ ಬಂದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

''ಕೆಜಿಎಫ್ 2'' ಮತ್ತೊಂದು ರೆಕಾರ್ಡ್: 'ಬಾಹುಬಲಿ 2' ದಾಖಲೆ ಉಡೀಸ್!

Sun May 29 , 2022
  ಯಶ್ ನಟನೆಯ `ಕೆಜಿಎಫ್ 2′ ಸಿನಿಮಾ ಹೊಸ ದಾಖಲೆ ಬರೆದಿದೆ. ಚಿತ್ರ ರಿಲೀಸ್‌ಗೂ ಮೊದಲೇ ಸಾಕಷ್ಟು ದಾಖಲೆಗಳನ್ನ ಮಾಡಿತ್ತು. ಈಗ ಕೆಜಿಎಫ್ 2 ರಿಲೀಸ್ ಆಗಿ 50 ದಿನ ಕಳೆದರು. ಮತ್ತೆ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಅದರಲ್ಲೂ ಬಾಹುಬಲಿ 2ಗೆ ಸೆಡ್ಡು ಹೊಡೆದು ಕೆಜಿಎಫ್ 2 ಅಗ್ರಸ್ಥಾನದಲ್ಲಿದೆ. ನ್ಯಾಷನಲ್ ಸ್ಟಾರ್ ಯಶ್ ಮತ್ತು ಪ್ರಶಾಂತ್ ನೀಲ್ ನಿರ್ದೇಶನದ `ಕೆಜಿಎಫ್ 2′ ಗೆಲುವಿನ ನಾಗಲೋಟದಲ್ಲಿದೆ. ಸದ್ಯ ಯಶ್ ಸಿನಿಮಾ […]

Advertisement

Wordpress Social Share Plugin powered by Ultimatelysocial