ರಾಜ್ಯ ಬಿಜೆಪಿ ನಾಯಕರನ್ನ ಬೆಚ್ಚಿ ಬೀಳಿಸಿದ B.L.Santhosh ಹೇಳಿಕೆ;

 

ನಾಯಕತ್ವ ಬದಲಾವಣೆಯೇ ಬಿಜೆಪಿಗೆ ಶಕ್ತಿ.

ಪಂಜಾಬ್, ಗುಜರಾತ್ ನಲ್ಲಿ ಈ ಪ್ರಯೋಗ ಯಶಸ್ವಿಯಾಗಿದೆ. ಹಾಲಿ‌ ಶಾಸಕರು, ಕುಟುಂಬಸ್ಥರನ್ನ ಹೊರಗಿಟ್ಟು ಚುನಾವಣೆ ಎದುರಿಸಲಾಗಿತ್ತು. ಹೊಸ ಮುಖಗಳ ಪರಿಚಯವೇ ಬಿಜೆಪಿ ಅಧಿಕಾರಕ್ಕೇರಲು ಕಾರಣ ಎಂದು ಹೇಳಿದ್ದಾರೆ.

ದೆಹಲಿ ಪಾಲಿಕೆ ಚುನಾವಣೆಯಲ್ಲಿ ಹಾಲಿ ಸದಸ್ಯರಿಗೆ ಟಿಕೇಟ್ ನೀಡಲಿಲ್ಲ. ಗುಜರಾತ್ ಪಾಲಿಕೆ ಚುನಾವಣೆಗಳಲ್ಲಿ ಎರಡು ಬಾರಿ ಗೆದ್ದಿರುವವರನ್ನು ನಿವೃತ್ತಿ ಮಾಡಿದ್ದೇವೆ. ಹೊಸ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟು ಅಧಿಕಾರಕ್ಕೇರಿದ್ದೇವೆ ಎಂಬ ಮಾತುಗಳನ್ನಾಡಿದ್ದಾರೆ.

ಬಿಜೆಪಿಯಲ್ಲಿ ಮಾತ್ರ ಇಂತಹ ಪ್ರಯೋಗಗಳು ನಡೆಯುತ್ತವೆ ಎಂದು ಮೈಸೂರಿನ ಬಿಜೆಪಿ ಪ್ರಮುಖರ ಸಭೆಯಲ್ಲಿ ಸಂತೋಷ್ ಮಾರ್ಮಿಕ ನುಡಿಗಳನ್ನಾಡಿದ್ದಾರೆ.

ಬಿ.ಎಲ್.ಸಂತೋಷ್ ಹೇಳಿಕೆ ಬೆನ್ನಲ್ಲೆ ಕಮಲ ಪಾಳಯದಲ್ಲಿ ಸಂಚಲ ಸೃಷ್ಟಿಯಾಗಿದ್ದು, ಹಲವು ಪ್ರಶ್ನೆಗಳು ಉತ್ತರಕ್ಕಾಗಿ ಹುಡುಕಾಟ ನಡೆಸುತ್ತಿವೆ.

ರಾಜ್ಯಕ್ಕೂ ಅನ್ವಯ ಆಗುತ್ತಾ ನಾಯಕತ್ವ ಬದಲಾವಣೆ ಸೂತ್ರ? ರಾಜ್ಯದ 2023ರ ವಿಧಾನಸಭಾ ಚುನಾವಣೆಗೂ ಇದೇ ರೀತಿ ಮಾಸ್ಟರ್ ಪ್ಲಾನ್ ಮಾಡ್ತಾರಾ? ಹಾಲಿ‌ ಶಾಸಕರಿಗೆ ಟಿಕೇಟ್ ಕೈತಪ್ಪುವ ಬಗ್ಗೆ ಬಿ.ಎಲ್.ಸಂತೋಷ್ ಮುನ್ಸೂಚನೆ ನೀಡಿದ್ರಾ ಅನ್ನೋ ಚರ್ಚೆಗಳು ಪ್ರಾರಂಭಗೊಂಡಿವೆ.

ಇನ್ನೂ ಬಿ.ಎಲ್.ಸಂತೋಷ್ ಹೇಳಿಕೆಗೆ ಶಾಸಕ ಸಿ.ಟಿ.ರವಿ ಮಂಡ್ಯದ ಮದ್ದೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಎಲ್‌.ಸಂತೋಷ್ ಯಾವ ಉದ್ದೇಶದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.

ಗೆಲ್ಲುವ ಸಾಧ್ಯತೆ ಇರುವರಿಗೆ ಪಕ್ಷ ಬೆಂಬಲ‌ ಕೊಡುತ್ತದೆ. ದುರ್ಬಲ ಇರೋ ಕಡೆ ಬದಲಾವಣೆ ಮಾಡಲಾಗುತ್ತದೆ. ಇದು ಹಿಂದಿನಿಂದ ಬಂದಿರುವ ಪದ್ಧತಿ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ

ಗೆಲ್ಲುವ ಸಾಮರ್ಥ್ಯ ಇರುವವರಿಗೆ ನಮ್ಮ ಪಾರ್ಟಿ ಬೆಂಬಲ ಕೊಡುತ್ತಲೆ ಬಂದಿದೆ. ಸಾಮರ್ಥ್ಯ ಇದ್ದವರು ಎಲ್ಲಿದ್ರು ಸಕ್ಸಸ್ ಆಗುತ್ತಾರೆ. ದುರ್ಬಲರಿಗೆ ಮಣೆ ಹಾಕುವುದಿಲ್ಲ. ಕರ್ನಾಟಕ್ಕೆ ಕರ್ನಾಟಕವೇ ಮಾದರಿ. ಇಲ್ಲಿ ಗುಜರಾತ್ ಪಂಜಾಬ್ ಮಾದರಿ ಅನ್ನುವುದು ಇಲ್ಲ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿ ಗಲಭೆ ; 154 ಮಂದಿ ಆರೋಪಿಗಳಿಗೆ ಮೇ.13ರವರೆಗೆ ನ್ಯಾಯಾಂಗ ಬಂಧನ!

Sun May 1 , 2022
  ಹುಬ್ಬಳ್ಳಿ,ಮೇ1- ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ 154 ಮಂದಿ ಆರೋಪಿತರಿಗೆ ಮೇ 13ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಇಲ್ಲಿನ ಒಂದನೇ ಸೇಷನ್ ಕೋರ್ಟ್‍ನಲ್ಲಿ ವಿಡಿಯೊ ಕಾನರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾೀಧಿಶರ ಎದುರು ಹಾಜರು ಪಡಿಸಲಾಯಿತು. 20 ಆರೋಪಿಗಳ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಪರೀಕ್ಷೆ ಕಾರಣಕ್ಕೆ ಒಬ್ಬ ಆರೋಪಿ ಪರ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇನ್ನುಳಿದ ಆರೋಪಿ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಆರೋಪಿಗಳಿಗೆ ಜಾಮೀನು […]

Advertisement

Wordpress Social Share Plugin powered by Ultimatelysocial