ಹುಬ್ಬಳ್ಳಿ ಗಲಭೆ ; 154 ಮಂದಿ ಆರೋಪಿಗಳಿಗೆ ಮೇ.13ರವರೆಗೆ ನ್ಯಾಯಾಂಗ ಬಂಧನ!

 

ಹುಬ್ಬಳ್ಳಿ,ಮೇ1- ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ 154 ಮಂದಿ ಆರೋಪಿತರಿಗೆ ಮೇ 13ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಇಲ್ಲಿನ ಒಂದನೇ ಸೇಷನ್ ಕೋರ್ಟ್‍ನಲ್ಲಿ ವಿಡಿಯೊ ಕಾನರೆನ್ಸ್ ಮೂಲಕ ಆರೋಪಿಗಳನ್ನು ನ್ಯಾಯಾೀಧಿಶರ ಎದುರು ಹಾಜರು ಪಡಿಸಲಾಯಿತು.

20 ಆರೋಪಿಗಳ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ. ಪರೀಕ್ಷೆ ಕಾರಣಕ್ಕೆ ಒಬ್ಬ ಆರೋಪಿ ಪರ ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಇನ್ನುಳಿದ ಆರೋಪಿ ಪರ ಜಾಮೀನು ಅರ್ಜಿಗಳು ಸಲ್ಲಿಕೆಯಾಗಿವೆ.

ಆರೋಪಿಗಳಿಗೆ ಜಾಮೀನು ದೊರೆತರೆ ಸಾಕ್ಷಿ ನಾಶಪಡಿಸುವ ಹಾಗೂ ಸಮಾಜದಲ್ಲಿ ಶಾಂತಿ ಕದಡುವ ಸಾಧ್ಯತೆಯಿದೆ ಎಂದು ಪೊಲೀಸರು ಆಕ್ಷೇಪಣೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಏ. 16ರ ಗಲಭೆ ನಂತರ ಬಂಧಿತರಾದ ಎಲ್ಲಾ ಆರೋಪಿಗಳನ್ನು ಏ. 30ರವರೆಗೆ ನ್ಯಾಯಾಂಗ ವಶದಲ್ಲಿಡಲಾಗಿತ್ತು.

ಅಭಿಷೇಕ ಹಿರೇಮಠ ಆಕ್ಷೇಪಾರ್ಹ ವಾಟ್ಸಪ್ ಸ್ಟೇಟಸ್ ಹಾಕಿದ್ದಾನೆ ಎಂದು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ ದೂರುದಾರ ಹಾಗೂ ಗಲಭೆಯಲ್ಲಿ ಪಾಲ್ಗೊಂಡ ಆರೋಪದ ಮೇಲೆ ಬಂಧಿತನಾಗಿ ನ್ಯಾಯಾಂಗ ವಶದಲ್ಲಿದ್ದ ಮಹ್ಮದ್‍ಅಜರುದ್ದೀನ್ ಜಿಲ್ಲೇರಿ ಅವನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆಗಾಗಿ ನ್ಯಾಯಾಲಯ ಅವನನ್ನು ಮೇ 2ರವರೆಗೆ ಪೊಲೀಸ್ ಕಸ್ಟಡಿ ಒಪ್ಪಿಸಿದೆ.

ದೂರುದಾರ ಮಹ್ಮದ್‍ಅಜರುದ್ದೀನ್ ಕೆಲವರಿಗೆ ಪ್ರಚೋದನೆ ನೀಡಿ ಗಲಭೆಗೆ ಕಾರಣವಾಗಿರಬಹುದು ಎನ್ನುವ ಕುರಿತು ಹಾಗೂ ಸ್ಟೇಟಸ್ ಸಂಬಂಧಿಸಿ ಕೆಲವಷ್ಟು ಮಾಹಿತಿ ಸಂಗ್ರಹಿಸಲು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಎಕೆಕ್ಟ್ರಿಕ್ ಸ್ಕೂಟರ್​ಗೆ ಬೆಂಕಿ!

Sun May 1 , 2022
  ತಮಿಳುನಾಡಿನ (Tamil nadu) ಕೃಷ್ಣಗಿರಿ ಜಿಲ್ಲೆಯ ಕೈಗಾರಿಕಾ ಕೇಂದ್ರವಾದ ಹೊಸೂರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗೆ (Electric Scooter) ಬೆಂಕಿ ಹೊತ್ತಿಕೊಂಡಿದ್ದು, ಶನಿವಾರ ಆ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಬೆಂಗಳೂರಿನ ಸಂಸ್ಥೆಯೊಂದರಲ್ಲಿ ಮೇಲ್ವಿಚಾರಕರಾಗಿದ್ದ ಮಾಲೀಕ ಸತೀಶ್ ಕುಮಾರ್ (Satish Kumar) ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ಸ್ಕೂಟರ್‌ನಿಂದ ಕೆಳಗೆ ಹಾರಿ ಪರಾರಿಯಾಗಿದ್ದಾರೆ. ಕುಮಾರ್ ಕಳೆದ ವರ್ಷ ವಾಹನ ಖರೀದಿಸಿದ್ದರು. ಇತ್ತೀಚೆಗೆ, ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೆಂಕಿ ಹಚ್ಚುವ ಅನೇಕ ವರದಿಗಳು ಹೊರಬಿದ್ದಿವೆ. ಹೊಸೂರು (Hosur) […]

Advertisement

Wordpress Social Share Plugin powered by Ultimatelysocial