ರಾಜ್ಯದಲ್ಲಿ ಮತ್ತೆ ʼನೈಟ್‌ ಕರ್ಫ್ಯೂʼ ಜಾರಿ?

ರಾಜ್ಯದಲ್ಲಿ ಮತ್ತೆ ʼನೈಟ್‌ ಕರ್ಫ್ಯೂʼ ಜಾರಿ? :  ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಪತ್ರ, ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ

ಬೆಂಗಳೂರು : ದೇಶದಲ್ಲಿ ಒಮಿಕ್ರಾನ್‌ ಪ್ರಕರಣಗಳು ಹೆಚ್ಚುತ್ತಿದ್ದಂತೆ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಎಲ್ಲ ರಾಜ್ಯಗಳು ಸೇರಿ ಕೇಂದ್ರಾಡಳಿತ ಪ್ರದೇಶಗಳಿಗೆ ಒಮಿಕ್ರಾನ್‌ ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದೆ.

ಈ ಕುರಿತು ಪತ್ರ ಬರೆದಿರುವ ಕೇಂದ್ರ ಸರ್ಕಾರ, ರಾಜ್ಯದಲ್ಲಿ ನೈಟ್‌ ಕರ್ಫ್ಯೂ ಬಗ್ಗೆ ಚಿಂತನೆ ನಡೆಸಿ ಮತ್ತು ಸಭೆ ಸಮಾರಂಭಗಳಲ್ಲಿ ಹೆಚ್ಚಿನ ಜನ ಸೇರದಂತೆ ಎಚ್ಚರ ವಹಿಸಿ ಎಂದಿದೆ. ಇನ್ನು ಜನರನ್ನ ರಕ್ಷಿಸಲು ಕೊರೊನಾ ಲಸಿಕೆ ಹಾಕುವುದನ್ನ ವೇಗಗೊಳಿಸಿ. ವಿಶೇಷವಾಗಿ ಕಡಿಮೆ ವ್ಯಾಪ್ತಿಯ ಜಿಲ್ಲೆಗಳಲ್ಲಿ, ಮುಂದಿನ ದಿನಗಳಲ್ಲಿ ಚುನಾವಣೆಗೆ ಹೋಗುವ ರಾಜ್ಯಗಳಲ್ಲಿ ಲಸಿಕೆ ವೇಗಗೊಳಿಸಿ ಎಂದು ಕೇಂದ್ರ ಸರ್ಕಾರ ಸಲಹೆ ನೀಡಿದೆ.

‘ಎಲ್ಲಾ ಮುನ್ನೆಚ್ಚರಿಕೆಗಳನ್ನ ಗಮನಿಸಿ ಎಂದಿರುವ ಕೇಂದ್ರ, ರಾಜ್ಯಗಳು ಜಾಗರೂಕರಾಗಿರಬೇಕು ಮತ್ತು ಪ್ರಕರಣ ಸಕಾರಾತ್ಮಕತೆ, ದುಪ್ಪಟ್ಟು ದರ, ಜಿಲ್ಲೆಗಳಾದ್ಯಂತ ಹೊಸ ಪ್ರಕರಣಗಳ ಗುಚ್ಛಗಳನ್ನ ಮೇಲ್ವಿಚಾರಣೆ ಮಾಡಬೇಕೆಂದು’ ಸಲಹೆ ನೀಡಿದೆ.

ಇನ್ನು ಲಸಿಕೆಗೆ ಸಂಬಂಧಿಸಿದಂತೆ, ಮೊದಲ ಮತ್ತು ಎರಡನೇ ಡೋಸ್ ಅರ್ಹ ಫಲಾನುಭವಿಗಳ 100% ವ್ಯಾಪ್ತಿಯನ್ನ ತ್ವರಿತ ರೀತಿಯಲ್ಲಿ ಖಚಿತಪಡಿಸಿಕೊಳ್ಳಲು ಮತ್ತು ಲಸಿಕೆ ವ್ಯಾಪ್ತಿ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಇರುವ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮನೆಮನೆಗೆ ಲಸಿಕೆ ಅಭಿಯಾನವನ್ನ ಬಲಪಡಿಸುವಂತೆ ಕೇಂದ್ರವು ರಾಜ್ಯಗಳಿಗೆ ಸಲಹೆ ನೀಡಿದೆ.‌

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೂದಲಿನ ಆರೈಕೆ ಮುನ್ನ ತಿಳಿದುಕೊಳ್ಳಲೇಬೇಕು ಈ ವಿಷಯ

Thu Dec 23 , 2021
ಕೆಲವೊಮ್ಮೆ ಪೋಷಕಾಂಶಗಳ ಕೊರತೆಯು ಕೂಡ ಹೇರ್ ಲಾಸ್ ಗೆ ಕಾರಣವಾಗಬಹುದು. ಕೂದಲಿಗೆ ಅಗತ್ಯವಿರುವ ಉತ್ತಮವಾದ ಜೀವಸತ್ವಗಳನ್ನು ನಾವು ಸೇವಿಸುವ ಆಹಾರದಿಂದಲೇ ಪಡೆದುಕೊಳ್ಳಬಹುದು. ಕೂದಲಿನ ಬೆಳವಣಿಗೆಯನ್ನು ಹೆಚ್ಚು ಮಾಡಿಕೊಳ್ಳಲು ಮಾರುಕಟ್ಟೆಯಲ್ಲಿ ದೊರೆಯುವ ಹೇರ್ ಆಯಿಲ್, ಹೇರ್ ಕ್ರೀಮ್ಸ್, ವಿವಿಧ ಬಗೆಯ ಶ್ಯಾಂಪೂಗಳು, ಕಂಡೀಶನರ್ ಗಳು ಹೀಗೆ ಹಲವು ಉತ್ಪನ್ನಗಳ ಮೊರೆ ಹೋಗುತ್ತೇವೆ. ಇತ್ತೀಚಿನ ದಿನಗಳಲ್ಲಿ ಈ ಉತ್ಪನ್ನಗಳನ್ನು ಬಳಸಿ ಹೇಗಾದರೂ ತಮ್ಮ ಕೂದಲನ್ನು ಆರೈಕೆ ಮಾಡಿಕೊಳ್ಳಬೇಕು ಅನ್ನೋ ಧಾವಂತ ಎಲ್ಲರಲ್ಲೂ ಇದೆ. […]

Advertisement

Wordpress Social Share Plugin powered by Ultimatelysocial