ಅಭಿಮಾನಿಗಳಿಗೆ ಬಿಗ್ ಆಫರ್ ಪರಿಣಿತಿ ಚೋಪ್ರಾ

ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಹೊಸ ಪ್ರಯತ್ನಕ್ಕೆ ಕೈಹಾಕಿದ್ದು, ಬಡವರಿಗೆ ಸಹಾಯ ಮಾಡಿದವರಿಗೆ ತಮ್ಮ ಜೊತೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯೋ ಚಾನ್ಸ್ ಸಿಗುತ್ತೆ ಎಂದಿದ್ದಾರೆ. ಹೌದು. ಇಡೀ ದೇಶವೇ ಕೊರೊನಾ ವೈರಸ್ ಹಾವಳಿಗೆ ತತ್ತರಿಸಿದೆ. ಇಂತಹ ಸಂಕಷ್ಟದ ಸಮಯದಲ್ಲಿ ನಟಿ ಪರಿಣಿತಿ ಚೋಪ್ರಾ ಅಬಿಮಾನಿಗಳಿಗೆ ಒಂದು ಸ್ಪೆಷಲ್ ಅವಕಾಶ ನೀಡಿದ್ದಾರೆ. ಯಾರು ಬಡವರಿಗೆ, ದಿನಗೂಲಿ ನೌಕರರಿಗೆ ಉಚಿತವಾಗಿ ದಿನಸಿ ಕಿಟ್ ವಿತರಣೆ ಮಾಡತ್ತಾರೋ ಅವರೊಂದಿಗೆ ಪರಿಣಿತಿ ಚೋಪ್ರಾ ಕಾಫಿ ಕುಡಿಯುವುದಾಗಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಪರಿಣಿತಿ, ವೆಬ್‍ಲಿಂಕ್ ಒಂದನ್ನು ನೀಡಿ ಅದಕ್ಕೆ ಲಾಗಿನ್ ಆಗಿ ದಿನಗೂಲಿ ನೌಕರರಿಗೆ ಸಹಾಯ ಮಾಡಿ ನನ್ನೊಂದಿಗೆ ಕಾಫಿ ಡೇಟ್ ನಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಿದ್ದಾರೆ. ಐಡಿಯಾ ಏನೋ ಚೆನ್ನಾಗಿದೆ. ಆದ್ರೆ ಲಾಕ್‍ಡೌನ್‍ನಲ್ಲಿ ಹೇಗಪ್ಪಾ ಪರಿಣಿತಿ ಜೊತೆ ಕಾಫಿ ಕುಡಿಯೋದು? ಹೋಟೆಲ್, ರೆಸ್ಟೋರೆಂಟ್‍ಗಳೆಲ್ಲಾ ತೆರೆದಿಲ್ಲವಲ್ಲಾ ಅಂತ ಪ್ರಶ್ನೆ ಕಾಡೋದು ಸಾಮಾನ್ಯ. ಇದಕ್ಕೆ ಉತ್ತರ ವರ್ಚುಯಲ್ ಡೇಟ್. ಪರಿಣಿತಿ ಜೊತೆ ಕಾಫಿ ಡೇಟ್ ವರ್ಚುಯಲ್ ಆಗಿರಲಿದೆ. ಅಂದರೆ ಪರಿಣಿತಿ, ಸಹಾಯ ಮಾಡಿದ ವ್ಯಕ್ತಿ ಅಂತರ್ಜಾಲದ ಮೂಲಕವೇ ಜೊತೆಯಾಗಿ ಕಾಫಿ ಸವಿಯುತ್ತಾ ಕೆಲ ಸಮಯ ಕಳೆಯಲಿದ್ದಾರೆ. ಪರಿಣಿತಿ ಕೊರೊನಾ ಸಂಕಷ್ಟಕ್ಕೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಅದಕ್ಕೆಂದೇ ಅವರು ಕಾಫಿ ಡೇಟ್ ಐಡಿಯಾ ಮುಂದೆ ತಂದಿದ್ದಾರೆ. ಇದೊಂದು ವಿಭಿನ್ನ ಪ್ರಯತ್ನವಾಗಿದ್ದು, ಸಹಾಯ ಮಾಡಿದವರು ಪರಿಣಿತಿ ಜೊತೆ ವರ್ಚುಯಲ್ ಕಾಫಿ ಕುಡಿಯಬಹುದಾಗಿದೆ.ಪರಿಣಿತಿ ಅಭಿನಯದ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಸಂದೀಪ್-ಪಿಂಕಿ ಫರಾರ್, ಸೈನಾ, ಲೂಡೋ, ಇಂದೂ ಕಿ ಜವಾನಿ, ಶಕುಂತಲಾ ದೇವಿ, ಕೋಡ್ ನೇಮ್ ಅಬ್ದುಲ್ ಸಿನಿಮಾಗಳು ಲಾಕ್‍ಡೌನ್ ಮುಕ್ತಾಯಗೊಂಡ ಬಳಿಕ ತೆರೆಕಾಣಲಿದೆ ಎನ್ನಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

200 ರೂ. ದೇಣಿಗೆ ನೀಡಿ ನನ್ನ ಜೊತೆ ಡ್ಯಾನ್ಸ್ ಮಾಡಿ: ಶ್ರೀಯಾ ಶರಣ್

Thu May 7 , 2020
ಕೊರೊನಾ ವಿರುದ್ಧದ ಹೋರಾಟಕ್ಕೆ 200 ರೂ. ದೇಣಿಗೆ ನೀಡಿ ನನ್ನ ಜೊತೆ ಡ್ಯಾನ್ಸ್ ಮಾಡುವ ಅವಕಾಶ ಪಡೆಯಿರಿ ಎಂದು ನಟಿ ಶ್ರೀಯಾ ಶರಣ್ ಅವರು ಹೇಳಿದ್ದಾರೆ. ಕೊರೊನಾ ವಿರುದ್ಧ ಹೋರಾಟದಲ್ಲಿ ಇಡೀ ದೇಶವೇ ಮಗ್ನವಾಗಿದೆ. ಹೀಗಿರುವಾಗ ಕೆಲ ನಟ-ನಟಿಯರು ಕೊರೊನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಕೈ ಬಲಪಡಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನೂ ಕೆಲವರು ಹಣದ ರೂಪದಲ್ಲಿ ಸಹಾಯ ಮಾಡಿದರೆ, ಮತ್ತೆ ಕೆಲವರು ಬಡವರಿಗೆ ಹಾಗೂ ನಿರ್ಗತಿಕರಿಗೆ ಆಹಾರ ನೀಡುವ ಮೂಲಕ […]

Advertisement

Wordpress Social Share Plugin powered by Ultimatelysocial