ಅಮೇರಿಕಾ: ಶ್ವೇತ ಭವನದ ಹೊರಗೆ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಂಕ್ಷಿಪ್ತವಾಗಿ ಗೌಪ್ಯ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಯಿತು. ಜಾರ್ಜ್ ಫ್ಲಾಯ್ಡ್ ಸಾವಿನ ಕುರಿತಾದ ಪ್ರತಿಭಟನೆಗಳು ಶುಕ್ರವಾರ ರಾತ್ರಿ ರಾಷ್ಟ್ರದ ರಾಜಧಾನಿಯನ್ನು ಅಪ್ಪಳಿಸಿದಾಗ ಕೋಪಗೊಂಡ ಪ್ರತಿಭಟನಾಕಾರರು ಪೆನ್ಸಿಲ್ವೇನಿಯಾ ಅವೆನ್ಯೂಗೆ ಆಗಮಿಸಿದರು. ಇದು ಶ್ವೇತಭವನದಲ್ಲಿ ಲಾಕ್ಡೌನ್ ಮಾಡಲು ಕಾರಣವಾಯಿತು. ಶುಕ್ರವಾರ ಶ್ವೇತಭವನದ ಹೊರಗೆ, ಸಂಜೆ 7 ಗಂಟೆಯ ನಂತರ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಕನಿಷ್ಠ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ . ಕೆಲವು ದೊಡ್ಡ ಧ್ವಜಗಳು ಮತ್ತು ಬ್ಯಾರಿಕೇಡ್‌ಗಳನ್ನು ಬಡಿದು ಪ್ರತಿಭಟನಾಕಾರರ ದೊಡ್ಡ ಗುಂಪೊಂದು ಶ್ವೇತ ಭವನದ ಕಡೆ ಧಾವಿಸಿದೆ ಜೊತೆಗೆ ಕೆಲವು ಹಿಂಸಾತ್ಮಕ ಮುಖಾಮುಖಿ ಗಲಾಟೆ ನಡೆದಿದೆ . ರಾಷ್ಟ್ರಾಧ್ಯಕ್ಷ ಟ್ರಂಪ್ ಅಪಾಯವಿಲ್ಲದಿದ್ದರು ಅಧಿಕಾರಿಗಳು ಉದ್ವಿಗ್ನತೆ ಹೆಚ್ಚಾಗುತ್ತಿದ್ದಂತೆ ಸಮಯಕ್ಕೆ ಸರಿಯಾಗಿ ಬಂಕರ್‌ಗೆ ಸ್ಥಳಾಂತರಿಸುವ ಮುನ್ನೆಚ್ಚರಿಕೆ ವಹಿಸಿದರು. ಪ್ರತಿಭಟನೆಯಿಂದ ಟ್ರಂಪ್ ಮತ್ತು ಅವರ ಕುಟುಂಬ ತುಂಬಾ ಬೆಚ್ಚಿಬಿದ್ದಿದೆ ಎಂದು ವರದಿಗಳು ತಿಳಿಸವೆ. ಜಾರ್ಜ್ ಫ್ಲಾಯ್ಡ್ ಎಂಬ ನಿರಾಯುಧ (unarmed) ಕಪ್ಪು ಅಲ್ಪಸಂಖ್ಯಾತ ವ್ಯಕ್ತಿಯೋರ್ವ ಈ ವಾರ ಮಿನ್ನಿಯಾಪೋಲಿಸ್ ಪೊಲೀಸ್ ಕಸ್ಟಡಿಯಲ್ಲಿ, ಡೆರೆಕ್ ಚೌವಿನ್ ಎಂಬ ಬಿಳಿ ಅಧಿಕಾರಿಯೊಬ್ಬರು ಫ್ಲಾಯ್ಡ್ ನ ಕುತಿಗೆಗೆ ಮೊಣಕಾಲನೂರಿ ನೆಲಕ್ಕೆ ಹಾಕಿ ತುಳಿದ ನಂತರ ಮೃತಪಟ್ಟರು . ಅವರ ಸಾವು ಯುನೈಟೆಡ್ ಸ್ಟೇಟ್ಸ್ನ ನಗರಗಳಲ್ಲಿ ಪೊಲೀಸ್ ಕ್ರೌರ್ಯ ಮತ್ತು ಜನಾಂಗೀಯ ತಾರತಮ್ಯದ ವಿರುದ್ಧ ಪ್ರದರ್ಶನಗಳನ್ನು ಹುಟ್ಟುಹಾಕಿದೆ.
ಅಮೇರಿಕಾ ಅಧ್ಯಕ್ಷ ಗೌಪ್ಯ ಬಂಕೆರ್ ಗೆ ರವಾನೆ

Please follow and like us: