ನಾಡ ಹಬ್ಬ ದಸರಾಗೆ ರಾಜ್ಯ ಸರ್ಕಾರ ಇಂದು ಗೈಡ್​ಲೈನ್ಸ್​​ ಬಿಡುಗಡೆ ಮಾಡಿದೆ.

ನಾಡ ಹಬ್ಬ ದಸರಾಗೆ ರಾಜ್ಯ ಸರ್ಕಾರ ಇಂದು ಗೈಡ್​ಲೈನ್ಸ್​​ ಬಿಡುಗಡೆ ಮಾಡಿದೆ.

 

ಬೆಂಗಳೂರು; ವಿಶ್ವವಿಖ್ಯಾತ ದಸರಾ ಆಚರಣೆಗೆ ರಾಜ್ಯ ಸರ್ಕಾರ ಇಂದು ಗೈಡ್ಲೈನ್ಸ್​​ ಬಿಡುಗಡೆ ಮಾಡಿದೆ. ಕಳೆದ ಭಾರಿಯಂತೆ ಈ ಭಾರಿಯು ಸಹ ಸರಳವಾಗಿ ದಸರಾ ಆಚರಣೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಮೈಸೂರು ದಸರಾ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ದಸರಾ ಹಬ್ಬ ಆಚರಣೆಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಜನರು ಸೇರುವಂತಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ದೈಹಿಕ ಅಂತರ ಇಲ್ಲದ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗುವುದು. ಮಾರ್ಗಸೂಚಿಗಳನ್ನು ಪೊಲೀಸ್ ಆಯುಕ್ತರು, ಜಿಲ್ಲೆಗಳ ಜಿಲ್ಲಾಧಿಕಾರಿಗಳು ,ಮಹಾನಗರ ಪಾಲಿಕೆಗಳ ಆಯುಕ್ತರು,  ಮತ್ತು ಇತರೆ ಇಲಾಖೆ ಮುಖ್ಯಸ್ಥರುಗಳು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಅಂತ ಸರ್ಕಾರ ತಿಳಿಸಿದೆ.

ನಾಡ ಹಬ್ಬ ದಸರಾ ಆಚರಣೆಗೆ ಸರ್ಕದಿಂದ ಪ್ರತ್ಯೇಕ ಮಾರ್ಗಸೂಚಿ
ಮೈಸೂರು ದಸರಾ ಆಚರಣೆಗೆ ರಾಜ್ಯ ಸರ್ಕಾರ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅರಮನೆ ಆವರಣದಲ್ಲಿ  ಮಾತ್ರ ದಸರಾ ಆಚರಣೆ ನಡೆಸಬೇಕು. ಜನರು ಮಾಸ್ಕ್, ಸ್ಯಾನಿಟೈಸ್​ನ ಕಡ್ಡಾಯವಾಗಿ ಬಳಸಬೇಕು. ವರ್ಚುವಲ್ ಮೂಲಕ ಜಂಬೂಸವಾರಿ ವೀಕ್ಷಣೆ ಮಾಡಬೇಕು ಎಂದು ಸರ್ಕಾರ ತಿಳಿಸಿದೆ, ಅ.7ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಕೆವಲ 100 ಜನರಿಗೆ ಮಾತ್ರ ಅನುಮತಿ ನೀಡಿದೆ.

ಇನ್ನು 8 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ 500 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಜಂಬೂಸವಾರಿ, ಪಂಜಿನ ಕವಾಯತಿಗೆ 500 ಜನರಿಗೆ ಮಾತ್ರ ರಾಜ್ಯ ಸರ್ಕಾರ ಅವಕಾಶ ನೀಡಿ ಮಾರ್ಗಸೂಚಿ ಹೊರಡಿಸಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್​ ಮಾರ್ಗಸೂಚಿಯನ್ನ ಬಿಡುಗಡೆ ಮಾಡಿದ್ದಾರೆ.

ಕೊರೊನಾ ಹಿನ್ನಲೆ ಸರಳ ಮತ್ತು ಭಕ್ತಿ ಪೂರ್ವಕ ದಸರಾ ಆಚರಣೆಗೆ ಆದ್ಯತೆ ನೀಡಿದ ಸರ್ಕಾರ, ಮೈಸೂರು ಜಿಲ್ಲೆ ಹೊರತಾಗಿ ಬೇರೆ ದಸರಾಗೆ 400 ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಸಾಮಾಜಿಕ ಅಂತರ ಉಲ್ಲಂಘನೆ ‌ಮಾಡಿದರೆ ಕಾರ್ಯಕ್ರಮ ರದ್ದುಗೊಳಿಸಲಾಗುತ್ತದೆ. ಅರಮನೆ ಆವರಣದಲ್ಲಿ ನಡೆಯವ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆಯೂ ಕೊರೊನಾ ನಿಯಮ ಪಾಲನೆ ಕಡ್ಡಾಯವಾಗಿ ಪಾಲಿಸಬೇಕು. ಜನರು ದಸರಾಗೆ ಬರಬೇಡಿ. ಅನ್​ಲೈನ್​ ಮೂಲಕ ವೀಕ್ಷಿಸಿ ಅಂತ ತಿಳಿಸಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

ಎಣ್ಣೆಯುಕ್ತ ತ್ವಚೆಯುಳ್ಳವರಿಗೆ ಈ ಸಮಸ್ಯೆ ಕಾಡತ್ತಿದ್ದಯಾ? ಇಲ್ಲಿದೆ ಪರಿಹಾರ

Tue Oct 5 , 2021
ಎಣ್ಣೆಯುಕ್ತ ತ್ವಚೆಯುಳ್ಳವರ ಸಮಸ್ಯೆ ಒಂದೆರಡಲ್ಲ. ಜಿಡ್ಡು ಮುಖ, ಮೊಡವೆ ಜೊತೆಗೆ ಡಲ್ ನೆಸ್ ಹೀಗೆ ನಾನಾ ಸಮಸ್ಯೆಗಳಿಂದ ರೋಸಿಹೋಗಿರುತ್ತಾರೆ. ಇದಲ್ಲದೆ, ಆ ರಾಸಾಯನಿಕಯುಕ್ತ ಫೇಸ್ ವಾಶ್‌ಗಳಿಂದ ನಿಮ್ಮ ಮುಖವನ್ನು ತೊಳೆಯುವುದರಿಂದ ನಿಮ್ಮ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.ಮಾರ್ಕೆಟ್ ನಲ್ಲಿ ಸಾಕಷ್ಟು ಫೇಸ್ ವಾಶ್ ಲಭ್ಯವಿದ್ದರೂ,ಅವು ನಿಜವಾಗಿಯೂ ಕೆಲಸ ಮಾಡದಿರಬಹುದು ಅಥವಾ ಕೆಲವು ಅಡ್ಡ ಪರಿಣಾಮಗಳನ್ನು ಸಹ ನೀಡಬಹುದ. ನೈಸರ್ಗಿಕ ಪದಾರ್ಥಗಳನ್ನು ಬಳಸಿ ಮನೆಯಲ್ಲಿಯೇ ನಿಮ್ಮ ಸ್ವಂತ ಫೇಸ್ ವಾಶ್ ಅನ್ನು ನೀವು […]

Advertisement

Wordpress Social Share Plugin powered by Ultimatelysocial