ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ₹ 301ರಷ್ಟು ಇಳಿಕೆಯಾಗಿದ್ದು, ₹ 46,415ರಂತೆ ಮಾರಾಟವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆಗಿರುವ ಕಾರಣ, ದೇಶಿ ಮಾರುಕಟ್ಟೆಯಲ್ಲಿಯೂ ಅದರ ಪರಿಣಾಮ ಕಂಡುಬಂದಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ತಿಳಿಸಿದೆ. ಬೆಳ್ಳಿಯ ಬೆಲೆಯು ಕೆ.ಜಿ.ಗೆ ₹ 402ರಷ್ಟು ಇಳಿಕೆಯಾಗಿ ₹ 59,044ರಂತೆ ಮಾರಾಟವಾಗಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಭಕ್ತರ ನೂಕುನುಗ್ಗಲು,ಅಧಿಕಾರಿಗಳ ದುರಾಡಳಿತ ವೈಷ್ಣೋದೇವಿ ದೇಗುಲದಲ್ಲಿ ನಡೆದ ಭೀಕರತೆಯನ್ನು ಮೆಲುಕು ಹಾಕಿದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಪ್ರಕಾರ,ಶನಿವಾರ ಮುಂಜಾನೆ ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ವೈಷ್ಣೋದೇವಿ ದೇಗುಲದಲ್ಲಿ ನೂಕುನುಗ್ಗಲು ಉಂಟಾದ ಭಕ್ತ ಸಮೂಹ ಮತ್ತು ಅಧಿಕಾರಿಗಳ ಮೇಲ್ವಿಚಾರಣೆಯ ಕೊರತೆಯಿಂದಾಗಿ ಕಾಲ್ತುಳಿತ ಉಂಟಾಗಿದೆ.ಭೀಕರ ಅಪಘಾತ ಸಂಭವಿಸಿದಾಗ ದೇವಸ್ಥಾನದ ಆವರಣದಲ್ಲಿದ್ದ ಹರಿಯಾಣದ ಪ್ರತ್ಯಕ್ಷದರ್ಶಿಯೊಬ್ಬರು ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲದ ಸುತ್ತಲೂ ಗಿರಣಿ ಇಡುತ್ತಿದ್ದರಿಂದ ಹೊರಹೋಗಲು ಯಾವುದೇ ಮಾರ್ಗವಿಲ್ಲ ಎಂದು ಹೇಳಿದರು. ಜನರು ತಳ್ಳಲು ಮತ್ತು […]

ಪ್ರವಾಸದಲ್ಲಿ ವಿದ್ಯೆಯೇ ಮಿತ್ರನು,ಮನೆಯಲ್ಲಿ ಹೆಂಡತಿಯೇ ಗೆಳತಿ,ವ್ಯಾಧಿಗ್ರಸ್ತನಿಗೆ  ಔಷದಿಯೇ ಮಿತ್ರನು,ಸತ್ತವನಿಗೆ ಅವನ ಧರ್ಮವೇ ಮಿತ್ರನು ಎನ್ನುವ ಆಗೇ ಇಲ್ಲೊಂದು ಅಪರೂಪದ ಜೋಡಿಯೊಂದು ದೇಶ-ವಿದೇಶವನ್ನ ಸುತ್ತುತ್ತಾ ಅಲ್ಲಿನ ಆಚಾರ-ವಿಚಾರಗಳು, ವೇಶ-ಭೂಷಣಗಳು ಮತ್ತು ಸಂಸ್ಕೃತಿಯನ್ನ ನೋಡಿತ್ತಾ ಫುಲ್‌ ಎಂಜಾಯ್‌ ಮಾಡ್ತಿದಾರೆ.ನಾವು ಇಗಾಗಲೇ ಅದೇಷ್ಟೊ ಜೋಡಿಗಳು ದೇಶ-ವಿದೇಶಗಳನ್ನು ಸುತ್ತಿರೊದ್ದನ್ನ ನೋಡಿದ್ದೀವಿ.ಆದರೆ ಅದೇನ್ನಪ್ಪ ಈ ಜೋಡಿಯಾ ಸ್ಪೆಶಾಲಿಟಿ ಅಂತೀರಾ , ಹೌದು ಕಣ್ರಿ ಈ ಸ್ಪೆಶಲ್‌ ಜೋಡಿ ದೇಶ-ವಿದೇಶಗಳನ್ನು ಸುತ್ತೋದರ ಮೂಲಕ ಕನ್ನಡದಲ್ಲಿ ವ್ಲಾಗ್‌ ಮಾಡುತ್ತಾ ಕರ್ನಾಟಕದ […]

ಮದುವೆಯಾಗಿರುವಂತಹ ಹೆಂಗಸರು ಕಾಲುಂಗುರವನ್ನು ಧರಿಸಿಕೊಂಡಿರುತ್ತಾರೆ, ಇದು ಮದುವೆಯಾಗಿರುವುದನ್ನು ತೊರಿಸುತ್ತದೆ,ಅಷ್ಟೆ ಅಲ್ಲದೆ ಇದರ ಹಿಂದೆ ಒಂದು ವೈಙ್ಙಾನಿಕ ತತ್ವವಿದೆ.ಕಾಲುಂಗುರವನ್ನು ಸಮಾನ್ಯವಾಗಿ ಕಾಲಿನ ಎರಡನೇ ಬೆರಳಿಗೆ ಹಾಕಿಕೊಳ್ಳುತ್ತಾರೆ. ಈ ಬೆರಳಿನಿಂದ ಒಂದು ನರ ಗರ್ಭಕೋಶವನ್ನು ಹಾದು ಹೃದಯದವರೆಗೂ ಹೋಗುತ್ತದೆ.ಆ ಬೆರಳಿಗೆ ಉಂಗುರವನ್ನು ಹಾಕಿಕೊಳ್ಳುವುದರಿಂದ ಗರ್ಭಕೋಶಕ್ಕೆ ರಕ್ತಸಂಚಾರ ಸುಗಮವಾಗಿ ಆಗುತ್ತದೆ.ಇದರಿಂದ ಸರಿಯಾದ ಸಮಯಕ್ಕೆ ಮುಟ್ಟಾಗ ಬಹುದು.ಅದಕ್ಕಾಗಿಯೇ ಮದುವೆಯಾದವರು ಕಾಲುಂಗುರವನ್ನು ತೊಡುತ್ತಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada  

  ರಶ್ಮಿಕಾ ಮಂದಣ್ಣ ಯಾವುದೇ ಚಿತ್ರರಂಗದತ್ತ ನೋಡಿದರೂ ಅಲ್ಲಿ ರಶ್ಮಿಕಾ ಮಂದಣ್ಣ ಇರುತ್ತಾರೆ. ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಕಿರಿಕ್​ ಪಾರ್ಟಿ  ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಈ ಬ್ಯೂಟಿ, ಕರ್ನಾಟಕ ಕ್ರಶ್​  ಎನಿಸಿಕೊಂಡಿದ್ದರು. ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿ ಇದೀಗ ನ್ಯಾಷನಲ್​ ಕ್ರಶ್ ​ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಏನ್​ ಮಾಡಿದರು ಸುದ್ದಿಯಾಗುತ್ತೆ. ಅದರಲ್ಲೂ ಕನ್ನಡ ಬಗ್ಗೆ ನಟಿ ತೋರಿಸಿರುವ ನಿರ್ಲಕ್ಷ್ಯ ಮಾತ್ರ ಕನ್ನಡಿಗರ […]

ಮೈಸೂರು, ನವೆಂಬರ್ 1: 2021ರ ಮೈಸೂರು ದಸರಾ ಮಹೋತ್ಸವಕ್ಕೆ ಸರ್ಕಾರ 6 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಇದರಲ್ಲಿ 5,42,07,679 ರೂ. ಖರ್ಚಾಗಿದ್ದು, 57 ಲಕ್ಷ ರೂಪಾಯಿಗೂ ಹೆಚ್ಚು ಹಣ ಉಳಿತಾಯವಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಖರ್ಚು- ವೆಚ್ಚಗಳ ಮಾಹಿತಿ ಬಿಡುಗಡೆ ಮಾಡಿದರು.ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಇತಿಹಾಸದಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದ ಖರ್ಚು- ವೆಚ್ಚಗಳ ಸಂಪೂರ್ಣ ಮಾಹಿತಿಯನ್ನು […]

ಮೈಸೂರು: ಮೈಸೂರಿನಲ್ಲಿ ಸುರಿದ ಧಾರಾಕಾರ ಮಳೆಯ ಪರಿಣಾಮ ಚಾಮುಂಡಿ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿದೆ. ಚಾಮುಂಡಿ ಬೆಟ್ಟದಿಂದ ನಂದಿ ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಭೂಕುಸಿತವಾಗಿದೆ. ದಸರಾ ದೀಪಾಲಂಕಾರ “ಸುಸ್ವಾಗತ”ವಿದ್ಯುತ್ ಬೋರ್ಡ್ ಸಮೀಪದಲ್ಲಿ ಘಟನೆ ನಡೆದಿದ್ದು, ಪ್ರವಾಸಿಗರು ಹಾಗೂ ಭಕ್ತರು ಆ ರಸ್ತೆಯಲ್ಲಿ ಸಂಚರಿಸದಂತೆ ಸೂಚನೆ ನೀಡಲಾಗಿದೆ. ರಾತ್ರಿ ಸುರಿದ ಬಾರಿ ಮಳೆಯಿಂದ ನಗರದ ಹಲವು ಕಡೆಗಳಲ್ಲಿ ರಸ್ತೆಗಳು ತುಂಬಿ ತುಳುಕಿದೆ. ಅಶೋಕ ರಸ್ತೆ, ದೊಡ್ಡ ಗಡಿಯಾದ ವೃತ್ತದಲ್ಲಿ ಮಳೆ ನೀರಿಗೆ ದ್ವಿಚಕ್ರ […]

ಮೈಸೂರು, ಅ.17, 2021 :  ದಸರಾ ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿನ ಮಾವುತ ವಸಂತನಿಗೆ ಮೈಸೂರಿನ ಟಿವಿ9 ಪ್ರತಿನಿಧಿ ರಾಮ್, ಟ್ಯಾಬ್ ಒಂದನ್ನು ಉಡುಗೊರೆ ನೀಡಿ ವಿಶೇಷತೆ ಮೆರೆದಿದ್ದಾರೆ. ದಸರೆಯ ಆಚೆಗೂ ಅಭಿಮನ್ಯು ಹಾಗೂ ವಸಂತ ನನ್ನ ನೆಚ್ಚಿನ ಹೀರೋಗಳು. ಕಾಡಾನೆಗಳನ್ನು ಪಳಗಿಸುವುದರಲ್ಲಿ ನಿಷ್ಣಾತ ಅಭಿಮನ್ಯು. ಸಮಯಪ್ರಜ್ಞೆಯ ಸಾರಥಿ ವಸಂತ. ಇವರಿಬ್ಬರದ್ದು ಸಾಹಸಮಯ ಬದುಕು. ದಿನದ 24 ಗಂಟೆಯೂ ಕಾಡಿನಲ್ಲಿ ಕಳೆಯುವ ಇವರದ್ದು ಭಲೇ ಜೋಡಿ. ಇವರಿಬ್ಬರ ಸಾಹಸಮಯ ಕಥೆಗಳನ್ನು ಕೇಳಿದರೆ […]

ಮೈಸೂರು, ಅಕ್ಟೋಬರ್ 14; ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡಿದೆ. ಜಂಬೂಸವಾರಿಯಲ್ಲಿ ಆನೆಗಳಷ್ಟೇ ಮತ್ತೊಂದು ಆಕರ್ಷಣೆ ಎಂದರೆ ಅದು ಸ್ತಬ್ಧ ಚಿತ್ರಗಳು. ಈ ಬಾರಿ ಮೆರವಣಿಗೆಯಲ್ಲಿ 6 ಸ್ತಬ್ಧ ಚಿತ್ರಗಳ ಜೊತೆಗೆ ನೂರಾರು ಜಾನಪದ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರಕಾರ ಈ ಬಾರಿ ಸರಳ ದಸರಾ ಆಚರಿಸುತ್ತಿದೆ. ಶುಕ್ರವಾರ ಅರಮನೆ ಮುಂಭಾಗದಲ್ಲಿ ಮಾತ್ರ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿದೆ.‌ ಅಂಬಾವಿಲಾಸ ಅರಮನೆ […]

ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಆರಂಭಕ್ಕೆ ಕ್ಷಣಗಣನೆ. ಜಂಬೂಸವಾರಿಯಲ್ಲಿ ಆನೆಗಳಷ್ಟೇ ಅಲ್ಲದೆ ಸ್ತಬ್ಧ ಚಿತ್ರಗಳು ಆಕರ್ಷಣೆಯಾಗಿದೆ. ಈ ಬಾರಿ ಮೆರವಣಿಗೆಯಲ್ಲಿ 6 ಸ್ತಬ್ಧ ಚಿತ್ರಗಳ ಜೊತೆಗೆ ನೂರಾರು ಜಾನಪದ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಶುಕ್ರವಾರ ಅರಮನೆ ಮುಂಭಾಗದಲ್ಲಿ ಮಾತ್ರ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿದೆ.‌ ಅಂಬಾವಿಲಾಸ ಅರಮನೆ ಒಳಗಷ್ಟೇ ದಸರಾ ಸೀಮಿತಗೊಂಡಿದೆ. ಈಗಾಗಲೇ ಆನೆಗಳಿಗೆ ತಾಲೀಮು ನೀಡಿ ಜಂಬೂಸವಾರಿಗೆ ಸಿದ್ಧಗೊಳಿಸಲಾಗಿದ್ದು,ಈ ಬಾರಿ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾನೆ. […]

Advertisement

Wordpress Social Share Plugin powered by Ultimatelysocial