ಜಂಬೂಸವಾರಿ ಆರಂಭಕ್ಕೆ ಕ್ಷಣಗಣನೆ

ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಆರಂಭಕ್ಕೆ ಕ್ಷಣಗಣನೆ. ಜಂಬೂಸವಾರಿಯಲ್ಲಿ ಆನೆಗಳಷ್ಟೇ ಅಲ್ಲದೆ ಸ್ತಬ್ಧ ಚಿತ್ರಗಳು ಆಕರ್ಷಣೆಯಾಗಿದೆ. ಈ ಬಾರಿ ಮೆರವಣಿಗೆಯಲ್ಲಿ 6 ಸ್ತಬ್ಧ ಚಿತ್ರಗಳ ಜೊತೆಗೆ ನೂರಾರು ಜಾನಪದ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಶುಕ್ರವಾರ ಅರಮನೆ ಮುಂಭಾಗದಲ್ಲಿ ಮಾತ್ರ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿದೆ.‌ ಅಂಬಾವಿಲಾಸ ಅರಮನೆ ಒಳಗಷ್ಟೇ ದಸರಾ ಸೀಮಿತಗೊಂಡಿದೆ. ಈಗಾಗಲೇ ಆನೆಗಳಿಗೆ ತಾಲೀಮು ನೀಡಿ ಜಂಬೂಸವಾರಿಗೆ ಸಿದ್ಧಗೊಳಿಸಲಾಗಿದ್ದು,ಈ ಬಾರಿ ಜಂಬೂಸವಾರಿಯಲ್ಲಿ ಅಭಿಮನ್ಯು ಆನೆ ಅಂಬಾರಿ ಹೊತ್ತು ಮೆರವಣಿಗೆಯಲ್ಲಿ ಸಾಗಲಿದ್ದಾನೆ. ಕುಮ್ಕಿ ಆನೆಯಾಗಿ ಕಾವೇರಿ ಹಾಗೂ ಚೈತ್ರಾ ಇರಲಿವೆ. ನಿಶಾನೆ ಆನೆಯಾಗಿ ಧನಂಜಯ ಇದ್ದರೆ, ನೌಕತ್ ಸಾಲು ಆನೆಗಳಾಗಿ ಅಶ್ವತ್ಥಾಮ ಹಾಗೂ ಧನಂಜಯ ಹೆಜ್ಜೆ ಹಾಕಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು; ಜಂಬೂಸವಾರಿಯಲ್ಲಿ 6 ಸ್ತಬ್ಧ ಚಿತ್ರಗಳ ಮೆರವಣಿಗೆ

Thu Oct 14 , 2021
ಮೈಸೂರು, ಅಕ್ಟೋಬರ್ 14; ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಅರಮನೆ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡಿದೆ. ಜಂಬೂಸವಾರಿಯಲ್ಲಿ ಆನೆಗಳಷ್ಟೇ ಮತ್ತೊಂದು ಆಕರ್ಷಣೆ ಎಂದರೆ ಅದು ಸ್ತಬ್ಧ ಚಿತ್ರಗಳು. ಈ ಬಾರಿ ಮೆರವಣಿಗೆಯಲ್ಲಿ 6 ಸ್ತಬ್ಧ ಚಿತ್ರಗಳ ಜೊತೆಗೆ ನೂರಾರು ಜಾನಪದ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಸರಕಾರ ಈ ಬಾರಿ ಸರಳ ದಸರಾ ಆಚರಿಸುತ್ತಿದೆ. ಶುಕ್ರವಾರ ಅರಮನೆ ಮುಂಭಾಗದಲ್ಲಿ ಮಾತ್ರ ಅಭಿಮನ್ಯು ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿದೆ.‌ ಅಂಬಾವಿಲಾಸ ಅರಮನೆ […]

Advertisement

Wordpress Social Share Plugin powered by Ultimatelysocial