ಆಂಬ್ಯುಲೆನ್ಸ್ಗಾಗಿ ರಾಮಕ್ಕನ ಮಾರುವೇಷ ಹಾಕಿದ ತಹಶೀಲ್ದಾರ್!

ಸ್ಕಿಂಗ್ ಆಪರೇಷನ್‌ನಲ್ಲಿ ೧೦೮ಸೇವೆಯ ನಿರ್ವಹಣೆ ವೈಫಲ್ಯ ಬಯಲು.ಆಂಬ್ಯುಲೆನ್ಸ್ ಸಿಬ್ಬಂದಿಯ ನಿರ್ಲಕ್ಷ ಬಯಲು ಮಾಡಿದ ತಹಶೀಲ್ದಾರ್ಸಾಂಗ್ಲಿ ಯಾನ ಸಿನಿಮಾದ ಶಂಕರ್‌ನಾಗ್ ರೀತಿ ತಹಶೀಲ್ದಾರ್ ಮಾರುವೇಷ ೫ಗಂಟೆ ೦೨ನಿಮಿಷಕ್ಕೆ ೧೦೮ಕ್ಕೆ ಕರೆ ಮಾಡಿದ್ರೇ.. ಸಂಜೆ ೫ಗಂಟೆ ೫೮ನಿಮಿಷಕ್ಕೆ ಆಂಬ್ಯುಲೇನ್ಸ್ ಆಗಮನ ೧೦೮ಗ್ರಾಹಕ ಪ್ರತಿನಿಧಿ ಜೊತೆ ೨ನಿಮಿಷ.. ಆಂಬ್ಯುಲೇನ್ಸ್ ಸಿಬ್ಬಂದಿ ಜೊತೆ ೭ನಿಮಿಷ ಸಂಭಾಷಣೆ.ರೋಗಿಗಳಿAದ ಹತ್ತಾರು ದೂರು ಬಂದ ಹಿನ್ನಲೆ ತಹಶೀಲ್ದಾರ್ ಮಾರುವೇಷ.೧೦೮ ಆಂಬ್ಯುಲೆನ್ಸ್ ಸಿಬ್ಬಂದಿಯಿAದ ತಹಶೀಲ್ದಾರ್ ನಾಹೀದಾಗೆ ಹಾರಿಕೆಯ ಉತ್ತರತಹಶೀಲ್ದಾರ್‌ಗೆ ೧ಗಂಟೆ ಆಗುತ್ತೇ ಕಾಯ್ತಿರಾ ಎಂದ ಆಂಬ್ಯುಲೆನ್ಸ್ ಸಿಬ್ಬಂದಿ.ತೋವಿನಕೆರೆಯಿAದ ಕೊರಟಗೆರೆ ಪಟ್ಟಣಕ್ಕೆ ಆಗಮನಿಸಲು ೨೦ನಿಮಿಷ ಸಾಕು ೧೦೮ತುರ್ತುವಾಹನ ಸೇವೆಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಡಿಹೆಚ್‌ಓಗೆ ದೂರುಕೊರಟಗೆರೆ:- ಸಾಂಗ್ಲಿಯಾನ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಶಂಕರ್‌ನಾಗ್ ಮಾರುವೇಷ ಧರಿಸಿ ಪೊಲೀಸ್ ಸಿಬ್ಬಂದಿಗೆ ಪಾಠ ಕಲಿಸುವ ದೃಶ್ಯವನ್ನು ನೀವೆಲ್ಲರೂ ನೋಡಿದ್ದೀರಿ. ತುಮಕೂರು ಜಿಲ್ಲೆ ಕೊರಟಗೆರೆಯ ತಹಶೀಲ್ದಾರ್ ನಾಹೀದಾ ಅದೇ ಮಾದರಿಯಲ್ಲಿ ಸ್ಟಿಂಗ್ ಆಪರೇಷನ್ ನಡೆಸಿ ಆಂಬ್ಯುಲೇನ್ಸ್ನ ಕೃತಕ ಸಮಸ್ಯೆಯನ್ನು ಬಯಲು ಮಾಡಿರುವ ಘಟನೆ ನಡೆದಿದೆ.ಆಂಬ್ಯುಲೇನ್ಸ್ ಸಿಬ್ಬಂದಿಯ ನಿರ್ಲಕ್ಷ ಬಯಲು ಮಾಡಲು ರಾಮಕ್ಕನ ವೇಷಹಾಕಿ ೧೦೮ಗೆ ಕರೆಮಾಡಿದ ಕೊರಟಗೆರೆ ತಹಶೀಲ್ದಾರ್ ನಾಹೀದಾ.. ೧೦೮ಕ್ಕೆ ಕರೆ ಮಾಡಿದ ೫೬ನಿಮಿಷದ ನಂತರ ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ ಆಂಬ್ಯುಲೇನ್ಸ್.. ತಹಶೀಲ್ದಾರ್‌ಗೆ ೧ಗಂಟೆ ತಡ ಆಗುತ್ತೇ ಬರ್ತೀವಿ ಕಾಯ್ತೀರಾ ಅಂದ ಆಂಬ್ಯುಲೇನ್ಸ್ ಸಿಬ್ಬಂದಿ.. ತುರ್ತುವಾಹನ ನಿರ್ವಹಣೆಯ ಅವ್ಯವಸ್ಥೆಯ ಬಗ್ಗೆ ಸಿಂಗ್ ಆಪರೇಷನ್ ನಡೆಸಿ ಸಿಬ್ಬಂದಿ ನಿರ್ಲಕ್ಷವನ್ನು ಬಯಲು ಮಾಡಿದ ತಹಶೀಲ್ದಾರ್.ಚಿರತೆ ದಾಳಿಯಿಂದ ಗಾಯಗೊಂಡು ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತೀರುವ ರೈತರು ಮತ್ತು ಮಕ್ಕಳ ಆರೋಗ್ಯ ವಿಚಾರಣೆಗೆ ಬಂದ ವೇಳೆ ಈ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿ ತುರ್ತುವಾಹನ ಸಮಸ್ಯೆಯ ಬಗ್ಗೆ ರೋಗಿಗಳು ಕಣ್ಣೀರಿಟ್ಟ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ. ರೋಗಿಗಳ ದೂರಿನ ಅನ್ವಯ ಸ್ವತಃ ತಾವೇ ರಾಮಕ್ಕನ ಮಾರುವೇಷ ಹಾಕಿಕೊಂಡು ೧೦೮ಕ್ಕೆ ತಮ್ಮ ಮೊಬೈಲ್‌ನಿಂದಲೇ ತಹಶೀಲ್ದಾರ್ ನಾಹೀದಾ ಕರೆ ಮಾಡಿರುವ ಘಟನೆ ನಡೆದಿದೆ.೧೦೮ಕ್ಕೆ ರಾಮಕ್ಕನ ವೇಷದಲ್ಲಿ ತಹಶೀಲ್ದಾರ್ ಕರೆ..ತಹಶೀಲ್ದಾರ್ ನಾಹೀದಾ ಶನಿವಾರ ಸಂಜೆ ೫ಗಂಟೆಗೆ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬೇಟಿಕೋಡ್ತಾರೇ. ರೋಗಿಗಳ ದೂರಿನ ಅನ್ವಯ ಸಂಜೆ ೫ಗಂಟೆ ೦೨ನಿಮಿಷಕ್ಕೆ ೧೦೮ಕ್ಕೆ ರಾಮಕ್ಕನ ಹೆಸರಿನಲ್ಲಿ ವಡ್ಡಗೆರೆ ಕ್ರಾಸ್ ಬಳಿ ಅಪಘಾತ ಆಗಿದೆ ಎಂಬ ಮಾಹಿತಿ ನೀಡ್ತಾರೇ.. ೨ನಿಮಿಷ ೧೦೮ಗ್ರಾಹಕ ಸೇವಾಕೇಂದ್ರದ ಸಿಬ್ಬಂದಿ ಮಾಹಿತಿ ಪಡಿತಾರೇ. ನಂತರ ಕರೆಯು ಆಂಬ್ಯುಲೇನ್ಸ್ ಸಿಬ್ಬಂದಿಗೆ ವರ್ಗಾವಣೆ ಆಗುತ್ತೇ. ಆಂಬ್ಯುಲೇನ್ಸ್ ಸಿಬ್ಬಂದಿ ಉಮಾದೇವಿಯ ಜೊತೆ ೮ನಿಮಿಷ ತಹಶೀಲ್ದಾರ್ ಮಾತನಾಡುತ್ತಾರೆ. ಒಟ್ಟು ೧೦ನಿಮಿಷ ದೂರವಾಣಿ ಕರೆಯಲ್ಲಿಯೇ ಕಾಲಕಳೆದು ೧ಗಂಟೆ ತಡವಾಗಿ ಬರ್ತಿವಿ ಕಾಯಿರಿ ಅಥವಾ ಖಾಸಗಿ ವಾಹನದ ಮೂಲಕ ಆಸ್ಪತ್ರೆಗೆ ರವಾನಿಸಿ ಎಂಬ ಉಢಾಪೆಯ ಉತ್ತರ ಸಿಬ್ಬಂದಿ ನೀಡ್ತಾರೇ.ತೋವಿನಕೆರೆಯಿಂದ ಕೊರಟಗೆರೆ ಪಟ್ಟಣಕ್ಕೆ ತುರ್ತುವಾಹನ ೫೬ನಿಮಿಷದ ನಂತರ ತಡವಾಗಿ ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬರುತ್ತದೆ. ಸಂಜೆ ೫ಗಂಟೆ ೦೨ನಿಮಿಷಕ್ಕೆ ೧೦೮ಕ್ಕೆ ಕರೆ ಮಾಡಿದ್ರೇ ೫ಗಂಟೆ ೫೮ನಿಮಿಷಕ್ಕೆ ಸ್ಥಳಕ್ಕೆ ಬರುತ್ತದೆ. ಸ್ವೀಂಗ್ ಆಪರೇಷನ್/ಮ್ಯಾಕ್ ಡ್ರೀಲ್ ಪ್ರಯೋಗ ಮಾಡುವ ಮೂಲಕ ತಹಶೀಲ್ದಾರ್ ನಾಹೀದಾ ೧೦೮ಸೇವೆಯ ಅವ್ಯವಸ್ಥೆಯ ಬಗ್ಗೆ ಹೊರಗಡೆ ತರುವಂತಹ ಪ್ರಯತ್ನ ಮಾಡಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ.ಅನಗತ್ಯ ಚರ್ಚೆ ಮಾಡ್ತಾರೇ ೧೦೮ ಸಿಬ್ಬಂದಿ..ತುರ್ತುಸೇವೆಗಾಗಿ ಜನರು ೧೦೮ಕ್ಕೆ ಕರೆಮಾಡಿದರೇ ಸ್ವೀಚ್‌ಆಪ್ ಬರೋದು, ಬ್ಯುಸಿ ಬರೋದು ಸರ್ವೇ ಸಾಮಾನ್ಯ ಆಗಿದೆ. ಇನ್ನೂ ಕರೆ ಕನೇಕ್ಟ್ ಆದರೇ ೧೦೮ಗ್ರಾಹಕ ಸಿಬ್ಬಂದಿ ೨ನಿಮಿಷ ಮಾಹಿತಿ ಪಡಿತಾರೇ ನಂತರ ೧೦೮ಸಿಬ್ಬಂದಿಗೆ ದೂರವಾಣಿ ಕರೆ ವರ್ಗಾವಣೆ ಆಗುತ್ತೇ. ಗ್ರಾಹಕ ಸೇವಾ ಸಿಬ್ಬಂದಿ ಮತ್ತು ಆಂಬ್ಯುಲೇನ್ಸ್ ಸಿಬ್ಬಂದಿ ಇಬ್ಬರು ಅನಗತ್ಯ ಚರ್ಚೆಗೆ ಇಳಿದು ಪ್ರಶ್ನೆಗಳ ಸುರಿಮಳೆಯನ್ನು ಕೇಳ್ತಾರೇ. ಮತ್ತೇ ಕೊನೆಗೆ ೧ಗಂಟೆ ಆಗುತ್ತೇ ಕಾಯ್ತೀರಾ ಅಥವಾ ಖಾಸಗಿ ವಾಹನದಲ್ಲಿ ಹೋಗ್ತೀರಾ ಎಂಬ ಪ್ರಶ್ನೆಯನ್ನು ಕೇಳುವುದು ಸಾಮಾನ್ಯವಾಗಿದೆ.೫ತುರ್ತುವಾಹನ ಇದ್ರೂ ನಿರ್ವಹಣೆ ಇಲ್ಲ..ಕೊರಟಗೆರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತುರ್ತುವಾಹನ, ನಗುಮಗು, ೧೦೮ತುರ್ತುವಾಹನ ಇದೆ. ತೋವಿನಕೆರೆ ಮತ್ತು ಕೋಳಾಲದಲ್ಲಿ ತಲಾ ಒಂದು ೧೦೮ವಾಹನ ಸೌಲಭ್ಯವಿದೆ. ನಿರ್ವಹಣೆ ವಿಫಲವಾಗಿ ತುರ್ತುವೇಳೆ ೧೦೮ವಾಹನ ಕೆಲಸ ಮಾಡುವುದೇ ಇಲ್ಲ. ಆಸ್ಪತ್ರೆಯ ಮುಖ್ಯಾಧಿಕಾರಿ ಅಥವಾ ಟಿಹೆಚ್‌ಓ ಆಂಬ್ಯುಲೇನ್ಸ್ ಸಿಬ್ಬಂದಿಗಳಿಗೆ ಸಮಸ್ಯೆಯ ಬಗ್ಗೆ ಪ್ರಶ್ನಿಸುವ ಹಾಗೇ ಇಲ್ಲ. ಸಿಬ್ಬಂದಿಗಳ ನಿರ್ಲಕ್ಷದಿಂದ ಗ್ರಾಮೀಣ ಪ್ರದೇಶದ ಬಡಜನರಿಗೆ ಪ್ರಾಣಸಂಕಟ ಎದುರಾಗಿದೆ.೧೦೮ಮೇಲೆ ಆರೋಪಗಳ ಸುರಿಮಳೆ..ಅಪಘಾತ ಆದಾಗ, ಹೆರಿಗೆಯ ವೇಳೆ, ಸರ್ಜರಿ ತುರ್ತುವೇಳೆ, ರಾತ್ರಿ ಪಾಳೇಯದಲ್ಲಿ ತುರ್ತುವಾಹನ ಸೀಗೋದೇ ಅಪರೂಪ.. ೧೦೮ವಾಹನ ಎಲ್ಲಿ ನಿಂತಿರುತ್ತೇ ಅದರ ಜವಾಬ್ದಾರಿ ಯಾರದ್ದು ನಿರ್ವಹಣೆ ಮಾಡೋರು ಯಾರು ಎಂಬುದೇ ಯಕ್ಷಪ್ರಶ್ನೆ ಆಗಿದೆ. ಬಡಜನರಿಗೆ ಆರೋಗ್ಯ ಸೇವೆ ಸಲ್ಲಿಸುವ ೧೦೮ವಾಹನಗಳು ಪೇಟ್ರೋಲ್ ಬಂಕ್ ಮುಂಭಾಗ, ಡಾಬಾಗಳ ಮುಂದೆ ಅಥವಾ ರಾಜ್ಯ ಹೆದ್ದಾರಿಯಲ್ಲಿ ನಿಂತಿರುತ್ತೇ ಎಂಬುದೇ ಸ್ಥಳೀಯರ ಆರೋಪವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾಂಡೌಸ್ ಸೈಕ್ಲೋನ್‌ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರ ಶಾಲಾ-ಕಾಲೇಜಿಗೆ ಒಂದು ದಿನ ರಜೆ!

Mon Dec 12 , 2022
  ಚಿಕ್ಕಬಳ್ಳಾಪುರ,ಡಿಸೆಂಬರ್ 12: ಮ್ಯಾಂದೊಸ್‌ ಸೈಕ್ಲೋನ್‌ ಪರಿಣಾಮ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆ ಸೋಮವಾರ ಒಂದು ದಿನದ ಮಟ್ಟಿಗೆ ಶಾಲಾ – ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್‌.ಎಂ.ನಾಗರಾಜ್‌ ತಿಳಿಸಿದ್ದಾರೆ.ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿ ಮ್ಯಾಂದೊಸ್‌ ಚಂಡಮಾರುತದ ರೂಪ ತಳೆದಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಆಂಧ್ರ ಪ್ರದೇಶದಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ. ಈ ಚಂಡಮಾರುತದ ಪರಿಣಾಮ ಕರ್ನಾಟಕದ ಮೇಲೂ ಬೀರಿದ್ದು, ರಾಜ್ಯದ ಕೆಲವು ಜಿಲ್ಲೆಗಳಲ್ಲಿ […]

Advertisement

Wordpress Social Share Plugin powered by Ultimatelysocial