ಕಲ್ಯಾಣ ಕರ್ನಾಟಕ ವಿಷಯ ಸರ್ಕಾರ‌ ಮಲತಾಯಿ ಧೋರಣೆ ಮಾಡುತ್ತಿದೆ:ಈಶ್ವರ ಖಂಡ್ರೆ ಆರೋಪ

ಕಲ್ಯಾಣ ಕರ್ನಾಟಕ ವಿಷಯ ಸರ್ಕಾರ‌ ಮಲತಾಯಿ ಧೋರಣೆ ಮಾಡುತ್ತಿದೆ  ಎಂದು ಆರೋಪಿಸಿದ್ದಾರೆ…ಕಲ್ಯಾಣ ಕರ್ನಾಟಕದ ಕಾಂಗ್ರೆಸ್ ಶಾಸಕರ ಸಭೆ ಬಳಿಕ ಮಾತನಾಡಿದ ಅವರು,ಸಿಎಂ ಕಳೆದ ಬಾರಿ ಅಧಿವೇಶನದಲ್ಲಿ ಹೇಳಿದ್ದರು.10 ದಿನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡ್ತೇನೆ ಎಂದು ಹೇಳಿದ್ರು.ಮೂರು ತಿಂಗಳು ಕಳೆದ್ರು ಮಂಡಳಿ ರಚನೆ ಆಗಿಲ್ಲ.ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕಕ್ಕಾಗಿ 1500 ಕೋಟಿ ಘೋಷಣೆಯಾಗಿದೆ.ಇಲ್ಲಿಯವರೆಗೆ 330 ಕೋಟಿ‌ ಮಾತ್ರ ಖರ್ಚಾಗಿದೆ.ಒಂದೇ ಒಂದು ನೀರಾವರಿ ಯೋಜನೆ, ರಸ್ತೆ ಆಗಿಲ್ಲ.ಎರಡನೇ ದರ್ಜೆ ರೀತಿಯಲ್ಲಿ ನೋಡಲಾಗುತ್ತಿದೆ.ಆದ್ದರಿಂದ ಹೈದರಾಬಾದ್ ಕರ್ನಾಟಕ ಶಾಸಕರು ಸೇರಿ ಚರ್ಚೆ ಮಾಡಿದ್ದೇವೆ.ನಾಳೆ ನಿಳುವಳಿ ಸೂಚನೆ ನೀಡುವ ಬಗ್ಗೆ ಮಾತಾಡಿದ್ದೇವೆ.ಈ ಭಾಗದ ಬಗ್ಗೆ ಚರ್ಚೆ ಆಗಬೇಕು ಎಂದು ಬೆಳಗಾವಿಯಲ್ಲಿ ಅಧಿವೇಶನ ಮಾಡಲಾಗುತ್ತದೆ.ಆದ್ರೆ ಅಧಿವೇಶನದಲ್ಲಿ ಬರೀ ಶೂನ್ಯವಾಗಿದೆ ವಿಪಕ್ಷದವರನ್ನು ಕೆಣಕಿ, ಸದನ ನಡೆಯದ ರೀತಿಯಲ್ಲಿ ಮಾಡುವುದು ಅವರ ಹುನ್ನಾರವಾಗಿದೆ.ತರಾತುರಿಯಲ್ಲಿ ಬಿಲ್ ಪಾಸ್ ಮಾಡಲು ಮುಂದಾಗಿದ್ದಾರೆ.ಕಾಟಚಾರಕ್ಕೆ ಅಧಿವೇಶನ ನಡೆಸಲಾಗುತ್ತಿದೆ ಎಂದರು…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಪಘಾತಕ್ಕೆ ಸಿಲುಕಿದ ತಮ್ಮ ಆಪ್ತ ಸ್ನೇಹಿತರೊಬ್ಬರ ಜೀವ ಉಳಿಸಿದ ಸಂಚಾರಿ ಪೇದೆಯೊಬ್ಬರಿಗೆ ಧನ್ಯವಾದ ತಿಳಿಸಿದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ 

Tue Dec 21 , 2021
ಅಪಘಾತಕ್ಕೆ ಸಿಲುಕಿ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದ ತಮ್ಮ ಆಪ್ತ ಸ್ನೇಹಿತರೊಬ್ಬರ ಜೀವ ಉಳಿಸಿದ ಸಂಚಾರಿ ಪೇದೆಯೊಬ್ಬರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ ಧನ್ಯವಾದದ ಸಂದೇಶ ಕಳುಹಿಸಿದ್ದಾರೆ.ಇಂಥ ಜನರಿಂದಾಗಿಯೇ ಜಗತ್ತು ಇಷ್ಟು ಸುಂದರವಾಗಿದೆ,” ಎಂದು ಸಚಿನ್ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.ಡಿಸೆಂಬರ್‌ 17ರಂದು ಸಚಿನ್ ಮಾಡಿದ್ದ ಟ್ವೀಟ್‌ ಅನ್ನು ಮುಂಬಯಿ ಪೊಲೀಸ್ ತನ್ನ ಹ್ಯಾಂಡಲ್‌ನಲ್ಲಿ ಶೇರ್‌ ಮಾಡಿಕೊಂಡಿದೆ. ಕೆಲ ದಿನಗಳ ಹಿಂದೆ, ಆಪ್ತ ಸ್ನೇಹಿತರೊಬ್ಬರು ಅಪಘಾತಕ್ಕೀಡಾಗಿದ್ದರು. ದೇವರ ದಯೆಯಿಂದ ಅವರೀಗ ಚೆನ್ನಾಗಿದ್ದಾರೆ. ಆದರೆ, […]

Advertisement

Wordpress Social Share Plugin powered by Ultimatelysocial