ದೇವದುರ್ಗ: ಲಾಕ್ ಡೌನ್ ಮದ್ಯೆಯೂ ಸಾಗಿದ ಟಿಪ್ಪರ ಮತ್ತು ಟ್ಯಾಕ್ಟರ್ ಗಳು ಅಕ್ರಮ ಮರಳು ಮಾಫಿಯಾ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದರು ಸಹ ಪೊಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿಕೊಳಿತುಕೊಂಡಿದ್ದಾರೆ. ಭಾನುವಾರ ಯಾವ ಇಲಾಖೆಯಲ್ಲಿ ರಾಜಸ್ವ ಪಾವತಿಸಿ ಮರಳು ಸಾಗಣೆಕೆಗೆ ಅವಕಾಶ ನೀಡುತ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.ಅದರೆ, ಜಾಲಹಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಮರಳು ತುಂಬಿದ ಟಿಪ್ಪರ್ ಒಂದು ಮರಳು ಸಾಗಿಸುತ್ತಿರುವ ದೃಶ್ಯ ಕಂಡುಬಂದಿದೆ. ಬ್ಯಾರಿಕೇಡ್ ನಿರ್ಮಿಸಿ ಪೋಲಿಸ್ ಗಸ್ತು ಮದ್ಯೆಯೂ ಮರಳು ತುಂಬಿದ ಟಿಪ್ಪರುಗಳು ರಾಜಾರೋಷವಾಗಿ ಓಡಾಡುತ್ತಿರುವುದಕ್ಕೆ ರಾಜಕೀಯ ಕೃಪಾಶ್ರಯದೊಂದಿಗೆ ಪೋಲಿಸ್ ಸರ್ಪಗಾಲು ಕೂಡ ಸಾಥ್ ಇರುವುದಾಗಿ ಜನ ಮಾತಾಡಿಕೊಳ್ಳುವಂತಾಗಿದೆ. ಅಕ್ರಮ ಮರಳು ತುಂಬಿದ ಟಿಪ್ಪರ್ ಗಳ ಓಡಾಟದಿಂದ ಈ ಹಿಂದೆ ಸಾಕಷ್ಟು ಅಪಘಾತಗಳು ಸಂಭವಿಸಿದ್ದು,ರಸ್ತೆಯ ಮೇಲೆ ಜನ ನಡೆದಾಡಲು ಹಿಂದೇಟು ಹಾಕುವಂತಾಗಿದೆ.ಅಕ್ರಮ ಮರಳು ಮಾಫಿಯಾ ತಡೆಯಬೇಕಾದ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿರುವುದಂತು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.
ಆಕ್ರಮ ಮರಳು ಮಾಫಿಯಾ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲ

Please follow and like us: