ನವದೆಹಲಿ: ನಮ್ಮ ದೇಶದ ಹೆಸರನ್ನು ಇಂಡಿಯಾ ಬದಲಿಗೆ ಭಾರತ ಎಂದು ಬದಲಾವಣೆ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಸುಪ್ರೀಕೋರ್ಟ್ ಇಂದು ವಜಾಗೊಳಿಸಿದೆ.ಇಂಡಿಯಾಗೆ ಭಾರತ ಎಂಬ ಮತ್ತೊಂದು ಹೆಸರು ಇದೆಯೆಂದು ಭಾರತೀಯ ಸಂವಿಧಾನದಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿರುವುದರಿಂದ ನ್ಯಾಯಾಲಯದ ಮುಂದೆ ಈ ವಿಷಯವನ್ನು ತರುವ ಅಗತ್ಯವಿಲ್ಲ ಎಂದು ಹೇಳಿ ಸರ್ವೋಚ್ಛ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತು. ಭವ್ಯ ಸಂಸ್ಕøತಿ ಹೊಂದಿರುವ ನಮ್ಮ ದೇಶಕ್ಕೆ ಇಂಡಿಯಾ ಎಂಬ ಪರಕೀಯ ಪದದ ಬದಲು ಭಾರತ ಎಂಬ ಸ್ವದೇಶಿ ಹೆಸರನ್ನು ಬದಲಾಯಿಸುವುದು ಸೂಕ್ತ ಎಂದು ಅರ್ಜಿದಾರರ ಪರ ವಕೀಲ ಅಸ್ಟಿನ್ ಬೈಶ್ ಸುಪ್ರೀಂಕೋರ್ಟ್ ಅನ್ನು ಕೋರಿದ್ದರು.
ಇಂಡಿಯಾ ಹೆಸರು ಬದಲಾವಣೆಗೆ ನೀಡಿದ್ದ ಅರ್ಜಿ ವಜಾ

Please follow and like us: