ಲಾಕ್‌ಡೌನ್‌ನಿಂದಾಗಿ ಕಳೆದೆರಡು ತಿಂಗಳಿನಿAದ ಚಿತ್ರೋದ್ಯಮ ಸ್ಥಗೀತಗೊಂಡಿದ್ದು, ಧಾರಾವಾಹಿಗಳ ಶೂಟಿಂಗ್ ಸಂಪೂರ್ಣ ಬಂದಾಗಿದ್ದು, ಸೀರಿಯಲ್ ಪ್ರೀಯರಿಗೆ ಬೇಸರವಾಗಿತ್ತು. ಆದ್ರೆ ಈಗ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಂತಾಗಿದೆ ಸದ್ಯದಲ್ಲೆ ಸೀರಿಯಲ್‌ಗಳು ಪ್ರಾರಂಭವಾಗಲಿವೆ. ಕೊರೊನಾ ಭೀತಿಯಿಂದ ಬಂದ್ ಆಗಿದ್ದ ಧಾರಾವಾಹಿಗಳ ಚಿತ್ರೀಕರಣ ಇಂದಿನಿAದ ಶುರುವಾಗಿದ್ದು, ಅಂದಾಜು ೧೨೦ಧಾರಾವಾಹಿಗಳಿದ್ದು, ಟೆಲಿವಿಷನ್ ಅಸೋಷಿಯೇಷನ್, ಗೈಡ್ ಲ್ಯನ್ಸ್ ಪ್ರಕಾರ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ಮಾಡಲು ಸೂಚನೆ ನೀಡಿದೆ. ೨೦ಕ್ಕಿಂತ ಅಧಿಕ ತಂತ್ರಜ್ಞರು ಸೇರದಂತೆ ಎಚ್ಚರಿಕೆ ವಹಿಸಬೇಕು. ಮೇಕಪ್ ವಸ್ತುಗಳನ್ನು ಕಲಾವಿದರೇ ತರುವಂತೆ ಹೊಸ ರೂಲ್ಸ್ ಮಾಡಲಾಗಿದೆ. ಚಿತ್ರೀಕರಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಇನ್ಶುರೆನ್ಸ್ ಮಾಡಲು ಪ್ಲಾನ್ ರೂಪಿಸಲಾಗಿದ್ದು, ಜೂ. ೧ರಿಂದ ಹೊಸ ಎಪಿಸೋಡ್‌ಗಳು ಟೆಲಿಕಾಸ್ಟ್ ಆಗಲಿವೆ.
ಇಂದಿನಿAದ ಸೀರಿಯಲ್ ಶೂಟಿಂಗ್ ಪ್ರಾರಂಭ

Please follow and like us: