ವಾಷಿಂಗ್ಟನ್: ವಿಶ್ವದ ಅತ್ಯಂತ ದೊಡ್ಡ ಬ್ಯಾಟರಿಚಾಲಿತ ಎಲೆಕ್ಟ್ರಿಕ್ ವಾಣಿಜ್ಯ ವಿಮಾನ ಗುರುವಾರ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿತು. ಇದು ವಿದ್ಯುತ್ ಚಾಲಿತ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ ಎಂದು ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ಸೆಸ್ನಾ ಗ್ರಾಂಡ್ ಕ್ಯಾರವಾನ್ 208ಬಿ ಹೆಸರಿನ ಈ ಆಲ್ ಎಲೆಕ್ಟ್ರಿಕ್ ವಿಮಾನವನ್ನು ಎಲೆಕ್ಟ್ರಿಕ್ ಏವಿಯೇಷನ್ ಕಂಪನಿ ‘ಮ್ಯಾಗ್ನಿಎಕ್ಸ್’ ಹಾಗೂ ಏರೋಸ್ಪೇಸ್ ಟೆಸ್ಟಿಂಗ್ ಸಂಸ್ಥೆ ‘ಏರೋಟೆಕ್’ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ.ವಾಷಿಂಗ್ಟನ್‌ನ ಮೊಸೆಸ್ ಲೇಕ್ ಬಳಿಯ ಗ್ರಾಂಟ್ ಕಂಟ್ರಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಪರೀಕ್ಷಾರ್ಥ ಹಾರಾಟ ನಡೆಸಲಾಯಿತು. 750 ಹಾರ್ಸ್ ಪವರ್ (560 ಕಿಲೋ ವ್ಯಾಟ್) ಹಾಗೂ ಮ್ಯಾಗ್ನಿ500 ಪ್ರೊಪ್ಯುಲೇಷನ್ ತಳ್ಳುವಿಕೆ ಶಕ್ತಿ ಹೊಂದಿರುವ ವಿಮಾನದಲ್ಲಿ9 ಮಂದಿ ಹಾರಾಟ ನಡೆಸಿದರು.
ಎಲೆಕ್ಟ್ರಿಕ್ ವಿಮಾನ ಹಾರಾಟ ಯಶಸ್ವಿ….

Please follow and like us: