ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಹಾಡು

ಐ ಫಾರ್ ಇಂಡಿಯಾಗೆ ಶಾರೂಖ್ ಖಾನ್ ಮೊದಲ ಬಾರಿಗೆ ಹಾಡು ಹಾಡಿದ್ದು, ಕ್ವಾರಂಟೈನ್ ಹಿನ್ನೆಲೆ ಸಬ್ ಠೀಕ್ ಹೋ ಜಾಯೇಗಾ ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡಿನಲ್ಲಿ ಶಾರೂಖ್ ಖಾನ್ ಅವರ ಪುತ್ರ ಅಬ್ರಾಮ್ ಕೂಡ ನಟಿಸಿದ್ದಾರೆ. ಶಾರೂಖ್ ಖಾನ್ ಸ್ವತಃ ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಶಾರೂಖ್ ಖಾನ್ ಹಾಡಿರುವ ಹಾಡು ಎರಡು ನಿಮಿಷ ಮೂವತ್ತು ಸೆಕೆಂಡ್ ಗಳಿದೆ. ಲಾಕ್ ಡೌನ್ ಕ್ವಾರಂಟೈನ್ ಬಗ್ಗೆಯೂ ಮಾತನಾಡಿದ್ದು, ತಾವು ಲಾಕ್ ಡೌನ್ ವೇಳೆ ಫ್ಯಾನ್ ನೋಡಿಕೊಂಡು ಮೊಟ್ಟೆ ಮೊದಲೋ ಕೋಳಿ ಮೊದಲೋ ಎಂದು ಆಲೋಚಿಸುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಸ್ವತಃ ಹಾಸ್ಯ ಮಾಡಿಕೊಂಡಿರುವ ಶಾರೂಕ್ ಖಾನ್ ಈಗಿನ ಪರಿಸ್ಥಿತಿ ಎಷ್ಟು ಕೆಟ್ಟದಿದೆ ನೋಡಿ ಎಸ್ ಆರ್ ಕೆ ಕೂಡ ಹಾಡುಗಾರನಾಗಿದ್ದಾರೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹಾವನ್ನ ಕಚ್ಚಿ ತಿಂದಿದ್ದ ವ್ಯಕ್ತಿ ಬಂಧನ..!

Wed May 6 , 2020
ನಿನ್ನೆ ಕುಡಿದ ಮತ್ತಿನಲ್ಲಿ ಹಾವನ್ನು ಕಚ್ಚಿ ಸಾಯಿಸಿದ ವ್ಯಕ್ತಿಯನ್ನ  ಇಂದು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಹಾವನ್ನು ಕಚ್ಚಿ ತಿನ್ನುತ್ತಿದ್ದ ವಿಡಿಯೋ ಭಾರೀ ವೈರಲ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ ಆತನನ್ನು  ಬಂಧಿಸಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ವ್ಯಕ್ತಿಯನ್ನ ಬಂಧಿಸುವಲ್ಲಿ ವನೋಧಯ ಸಂಸ್ಥೆಯ ಕಾರ್ಯಕರ್ತರ ಸಹಾಯದೊಂದಿಗೆ ವ್ಯಕ್ತಿಯನ್ನು ಬಂಧಿಸುವಲ್ಲಿ ಅರಣ್ಯ  ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial