ನಟ ರಿಷಬ್ ಶೆಟ್ಟಿ ‘ಕಾಂತಾರ’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ.

ನಿರ್ದೇಶಕ- ನಟ ರಿಷಬ್ ಶೆಟ್ಟಿ ‘ಕಾಂತಾರ’ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಇದೀಗ ‘ಕಾಂತಾರ’ ಪ್ರೀಕ್ವೆಲ್ ಮಾಡೋಕೆ ಮುಂದಾಗಿದ್ದಾರೆ. ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದಿಂದ ಪತ್ರಕರ್ತರ ಜೊತೆ ನಡೆದ ಮುಖಾಮುಖಿ ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಮಾತನಾಡಿದ್ದರು.

ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಕಾಂತಾರ’ ಸಿನಿಮಾ ವಿವಾದ, ಟೀಕೆ, ಸಕ್ಸಸ್ ಎಲ್ಲದರ ಬಗೆಗೂ ಮಾಧ್ಯಮಗಳ ಪ್ರಶ್ನೆಗೆ ರಿಷಬ್ ಶೆಟ್ಟಿ ಉತ್ತರಿಸಿದರು. ಒಂದಷ್ಟು ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸದೇ ನುಣುಚಿಕೊಂಡರು. ‘ಕಾಂತಾರ’ ಸಿನಿಮಾ 400 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದ್ದು ಗೊತ್ತೇಯಿದೆ. ನಿರ್ಮಾಪಕರು ಬಂದ ಲಾಭದಲ್ಲಿ ಸಾಕಷ್ಟು ಹಣವನ್ನು ಮತ್ತೆ ಚಿತ್ರತಂಡಕ್ಕೆ ನೀಡಿದ್ದಾರೆ ಎಂದು ರಿಷಬ್ ಶೆಟ್ಟಿ ವಿವರಿಸಿದರು.

ಮೊದಲು ಕನ್ನಡದಲ್ಲಿ ಬಿಡುಗಡೆಯಾಗಿದ್ದ ಸಿನಿಮಾ ನೋಡ ನೋಡುತ್ತಲೇ ಬೇರೆ ಭಾಷೆಗಳಿಗೆ ಡಬ್ ಆಗಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿತ್ತು. ಥಿಯೇಟರ್‌ಗಳಲ್ಲಿ ಮಾತ್ರವಲ್ಲ ಓಟಿಟಿ, ಟಿವಿ ಎಲ್ಲಾ ಕಡೆ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ.

ವಿಜಿ ಅಣ್ಣನ ದೊಡ್ಡಗುಣ

“ಕಾಂತಾರ ಸಕ್ಸಸ್‌ನಿಂದ ಬಂದ ಹಣದಲ್ಲಿ ಇಡೀ ತಂಡಕ್ಕೆ ಮತ್ತೊಮ್ಮೆ ಇನ್ನೊಂದು ರೌಂಡ್ ಪೇಮೆಂಟ್ ಮಾಡ್ಕೊಂಡು ಬಂದಿದ್ದಾರೆ. ಅದು ಹೊಂಬಾಳೆಯ ಗ್ರೇಟ್‌ನೆಸ್. ನನ್ನ ಸೌಂಡ್ ಡಿಸೈನರ್ ಒಬ್ಬರು ಹೇಳಿದರು, ಅವರ 25 ವರ್ಷಗಳ ಸಿನಿಮಾ ಕರಿಯರ್‌ನಲ್ಲಿ ಮೊದಲ ಬಾರಿಗೆ ನಿರ್ಮಾಪಕರೊಬ್ಬರು ಸಿನಿಮಾ ಗೆದ್ದಮೇಲೆ ಮತ್ತೆ ತಂತ್ರಜ್ಞರಿಗೆ, ಕಲಾವಿದರಿಗೆ ಹಣ ಕೊಟ್ಟಿರೋದು ಅಂದರು. ಅದು ವಿಜಿ ಅಣ್ಣನ ದೊಡ್ಡಗುಣ.

ಸಂಭಾವನೆ ಎಷ್ಟು ಹೆಚ್ಚಾಯ್ತು?

‘ಕಾಂತಾರ’ ಚಿತ್ರವನ್ನು ನಿರ್ದೇಶನ ಮಾಡುವುದರ ಜೊತೆಗೆ ರಿಷಬ್ ನಟಿಸಿದ್ದರು. ಅಂದಾಜು 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ ನೂರಾರು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಹಾಗಾಗಿ ಸಹಜವಾಗಿಯೇ ರಿಷಬ್ ಸಂಭಾವನೆ ಹೆಚ್ಚಾಗಿದೆ. ಹೊಂಬಾಳೆ ಸಂಸ್ಥೆ ಇಡೀ ತಂಡಕ್ಕೆ ನೀಡಿದಂತೆ ರಿಷಬ್‌ಗೂ ಮತ್ತಷ್ಟು ಹಣ ಕೊಟ್ಟಿದ್ದಾರೆ. ‘ಕಾಂತಾರ’ ನಂತರ ನಿಮ್ಮ ಸಂಭಾವನೆ ಎಷ್ಟು? ಎಷ್ಟು ಹೆಚ್ಚಾಗಿದೆ ಎನ್ನುವ ಪ್ರಶ್ನೆ ಎದುರಾಯಿತು? ಇದಕ್ಕೆ ಉತ್ತರ ಹೇಳದೇ ರಿಷಬ್ ನುಣುಚಿಕೊಂಡರು. ಪಾಸ್ ಎಂದು ಹೇಳಿ ಸುಮ್ಮನಾದರು.

ಹೆಂಡ್ತಿದು ಈಗ್ಲೂ ಅದೇ ಕಂಪ್ಲೇಟ್

ಸಿನಿಮಾ ಸಕ್ಸಸ್ ನಂತರ ನಿಮ್ಮ ಪತ್ನಿ ನಿಮ್ಮನ್ನು ನೋಡುವ ರೀತಿ ಬದಲಾಗಿದ್ಯಾ? ಎಂದರೆ “ಖಂಡಿತ ಇಲ್ಲ. ಸೇಮ್ ಇದೆ. ಕಾಂತಾರ ಸಿನಿಮಾಗೂ ಮೊದಲು ಟೈಂ ಕೊಡುತ್ತಿರಲಿಲ್ಲ. ಈಗಲೂ ಕೊಡಲ್ಲ, ನೆಕ್ಸ್ಟ್ ಸಿನಿಮಾ ಬಗ್ಗೆ ಯೋಚನೆ ಮಾಡ್ತಿದ್ದಾನೆ. ಇವ್ನು ಫ್ಯೂಚರ್‌ನಲ್ಲೂ ಟೈಂ ಕೊಡಲ್ಲ ಅಂತ ಹಂಗೆ ನೋಡುತ್ತಿದ್ದಾಳೆ” ಎಂದರು. ರಿಷಬ್ ಪತ್ನಿ ಪ್ರಗತಿ ಕೂಡ ‘ಕಾಂತಾರ’ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದರು.

ಮೂರ್‌ಜನ ಈಗ ಬಂದವರು

ಕಳೆದ 10 ವರ್ಷಗಳಲ್ಲಿ ಶೆಟ್ಟರ ಸಿನಿಮಾಗಳಲ್ಲಿ ಕಂಟೆಂಟ್‌ ಕಾಣ್ತಿದೆ. ಸಕ್ಸಸ್ ರೇಟ್ ಜಾಸ್ತಿ ಇದೆ. ಸ್ಟಾರ್‌ಡಮ್ ವರ್ಸಸ್ ಕಂಟೆಂಡ್ ಕ್ಲ್ಯಾಶ್ ಬಗ್ಗೆ ಹೇಳಿ ಎಂದಿದ್ದಕ್ಕೆ “ನೀವು ಹೇಳುವಂತಹ ಮೂರು ಜನ, 90 ವರ್ಷ ತಲುಪುತ್ತಿರುವ ಚಿತ್ರರಂಗಕ್ಕೆ ಈಗ ಬಂದವರು. ಮೂರ್ನಾಲ್ಕು ಸಿನಿಮಾಗಳಿಂದ ಇವರನ್ನು ಅಳಿಯಲು ಸಾಧ್ಯವಿಲ್ಲ. ಅಣ್ಣಾವ್ರು, ಜಿ. ವಿ ಅಯ್ಯರ್, ಪುಟ್ಟಣ್ಣ, ವಿಷ್ಣು, ಅಂಬಿ, ಉಪೇಂದ್ರ, ರವಿಚಂದ್ರನ್‌ ಇರಬಹುದು. ರವಿ ಸರ್‌ಗಿಂತ ಪ್ಯಾನ್ ಇಂಡಿಯಾ ಸಿನಿಮಾ ಮಾಡೋರು ಬೇಕಾ? ಎರಡ್ಮೂರು ಸಿನಿಮಾ ಹಿಟ್ ಆದ ಕೂಡಲೇ ಇಂತಹ ಯೋಚನೆ ಬರುತ್ತೆ. ಎಲ್ಲಾ ಬ್ಯಾಲೆನ್ಸ್ ಆಗಬೇಕು. ಸ್ಟಾರ್‌ಗಳ ಸಿನಿಮಾ ಕಂಟೆಟ್ ಸಿನಿಮಾ ಎಲ್ಲವೂ ಹಿಟ್ ಆಗಬೇಕು. ಶಂಕರ್‌ನಾಗ್ ಸರ್ ಎರಡೂ ತರಹದ ಸಿನಿಮಾಗಳನ್ನು ಮಾಡಿದ್ದರು. ಸ್ಟಾರ್‌ಗಳ ಸಿನಿಮಾಗಳ ಜೊತೆಗೆ ಕಂಟೆಂಟ್ ಸಿನಿಮಾ ಸಿನಿಮಾ ಕೂಡ ಮುಖ್ಯ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಧಾನಿ ಮೋದಿ ಅದಾನಿ ಏಜೆಂಟ್ ಖರ್ಗೆ ಕಿಡಿ.

Sat Feb 11 , 2023
ಪ್ರಧಾನಿ ನರೇಂದ್ರ ಮೋದಿ ಅವರು ಗೌತಮ್ ಅದಾನಿ ಏಜೆಂಟ್ ಆಗಿ ಹಲವು ದೇಶಗಳಲ್ಲಿ ಗುತ್ತಿಗೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಕಿಡಿಕಾರಿದ್ದಾರೆ.ಪ್ರಧಾನಿ ಮೋದಿ ಅವರ ಹೆಸರನ್ನು ತೆಗೆದುಕೊಳ್ಳುತ್ತಿಲ್ಲ ಮತ್ತು ನಮ್ಮ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಿಲ್ಲ.ಪ್ರಧಾನಿ ತಮ್ಮ ಸ್ನೇಹಿತ ಅದಾನಿಗೆ ಕರುಣೆ ತೋರಿದ್ದಾರೆ ಎಂದು ಹೇಳಿದ್ದಾರೆ.ಎಐಸಿಸಿ ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಎಲ್ ಐಸಿ ಯ ಹಣವನ್ನು ಅದಾನಿ ಕಂಪನಿಯಲ್ಲಿ ಹೂಡಿಕೆ ಮಾಡಲಾಗಿದೆ ಎಂದ ಖರ್ಗೆ ಅವರು […]

Advertisement

Wordpress Social Share Plugin powered by Ultimatelysocial