ಒಂದು ಗುಂಪು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಲು ಸಾಧ್ಯವಿಲ್ಲ

ಹೊಸದಿಲ್ಲಿ: ಒಂದು ಗುಂಪಿನ ‘ಅಪರಾಧ’ಕ್ಕೆ ಇಡೀ ಸಮುದಾಯವನ್ನು ಹೊಣೆಯಾಗಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ದೆಹಲಿಯಲ್ಲಿ ತಬ್ಲೀಗಿ ಜಮಾತ್  ವಿಚಾರವಾಗಿ ಮಾತನಾಡಿದ ಅವರು, ‘ಆ ಸಂಘಟನೆ ಏನೇ ಮಾಡಿರಬಹುದು, ಕ್ರಿಮಿನಲ್ ನಿರ್ಲಕ್ಷ್ಯ ಅಥವಾ ಅಪರಾಧ, ಹೆಚ್ಚಿನ ಮುಸ್ಲಿಮರು ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ ಹಾಗೂ ಖಂಡಿಸಿದ್ದಾರೆ ಮತ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಒಂದು ಗುಂಪು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಲು ಸಾಧ್ಯವಿಲ್ಲ”. ಇಂತಹ ಚಿಂತನೆ ಭಾರತೀಯ ಸಂಸ್ಕೃತಿಯ ಭಾಗವಾಗಿದೆ. ‘ಮುಸ್ಲಿಮರನ್ನು ಟಾರ್ಗೆಟ್ ಮಾಡುತ್ತಿರುವವರು ಕೆಲವೇ ಕೆಲವು ಪ್ರತ್ಯೇಕಿತ ವ್ಯಕ್ತಿಗಳಾಗಿದ್ದು ಇವರು ತಪ್ಪು ಮಾಹಿತಿಗಳನ್ನು ಹರಡುತ್ತಿದ್ದಾರೆ. ಇಂತಹ ಶಕ್ತಿಗಳ ವಿರುದ್ಧ ನಾವು ಜತೆಯಾಗಬೇಕಿದೆ ಹಾಗೂ ಅವುಗಳನ್ನು ದೂರಗೊಳಿಸಬೇಕಿದೆ” ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

೧೦,೦೦೦ ಜೋಡಿ ಪಾದರಕ್ಷೆ ನೀಡಿದ ಪ್ರಿಯಾಂಕ

Thu Apr 23 , 2020
ಕೊರೊನಾ ವಿರುದ್ಧ ಹೋರಾಡುತ್ತಿರುವವರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಸಹಾಯ ಮಾಡುತ್ತಾ, ಅವರ ಕೆಲಸವನ್ನು ಹುರಿದುಂಬಿಸುತ್ತಾ ಬಂದಿರುವ ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಈಗ ೧೦,೦೦೦ ಆರೋಗ್ಯ ಕಾರ್ಯಕರ್ತರಿಗೆ ಪಾದರಕ್ಷೆ ನೀಡುವ ಮೂಲಕ ಮತ್ತೆ ಅವರನ್ನು ಬೆಂಬಲಿಸುತ್ತಿದ್ದಾರೆ. ಹರಿಯಾಣ, ಕೇರಳ, ಮಹಾರಾಷ್ಟ್ರ ಮತ್ತು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಆರೋಗ್ಯ ಕಾರ್ಯಕರ್ತರಿಗೆ ಶೂಸ್‌ಗಳನ್ನ ದೇಣಿಗೆಯಾಗಿ ನೀಡಿದ್ದಾರೆ. ಒಟ್ಟು ೧೦,೦೦೦ ಜೋಡಿ ಪಾದರಕ್ಷೆಯನ್ನು ನೀಡಿದ್ದು, ಈ ಬಗ್ಗೆ ತಮ್ಮ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. […]

Advertisement

Wordpress Social Share Plugin powered by Ultimatelysocial