ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ!

ವದೆಹಲಿ, ಮಾರ್ಚ್. 01 : ಇಂದಿನಿಂದ ಜಾರಿಗೆ ಬರುವಂತೆ ಗೃಹ ಬಳಕೆಯ ಅನಿಲದ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದೆ. 14.2 ಕೆಜಿ ಗೃಹ ಬಳಕೆಯ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ನ ಬೆಲೆ 50 ರೂಪಾಯಿಗೆ ಏರಿಕೆಯಾಗಿದೆ.

ಮಾರ್ಚ್ ಒಂದರಿಂದ ಹೊಸ ದರ ಜಾರಿಗೆ ಬರಲಿದ್ದು, ಇತ್ತೀಚಿನ ಪರಿಷ್ಕರಣೆಯೊಂದಿಗೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದಿನಿಂದ ಗೃಹಬಳಕೆಯ ಸಿಲಿಂಡರ್ ಪ್ರತಿ ಸಿಲಿಂಡರ್‌ಗೆ 1,103 ರೂಪಾಯಿ ವೆಚ್ಚವಾಗಲಿದೆ.

ಅಲ್ಲದೆ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 350.50 ರೂಪಾಯಿ ಹೆಚ್ಚಿಸಲಾಗಿದೆ. ಈ ಹೆಚ್ಚಳದೊಂದಿಗೆ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ 2,119.50 ರೂಪಾಯಿ ಆಗಲಿದೆ.

ದೆಹಲಿಯಲ್ಲಿ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಹೊಸ ಪರಿಷ್ಕೃತ ಬೆಲೆ ಇಂದಿನಿಂದ 1,053 ರೂಪಾಯಿಯ ಬದಲಿಗೆ 1, 103 ರೂಪಾಯಿ ಆಗಲಿದೆ. ಮುಂಬೈನಲ್ಲಿ ಈ ಸಿಲಿಂಡರ್ ಬೆಲೆ 1,052.50 ರೂ. ಬದಲಿಗೆ 1,102.5 ರೂಪಾಯಿಗೆ ಮಾರಾಟ ಮಾಡಲಾಗುತ್ತದೆ. ಕೋಲ್ಕತ್ತಾದಲ್ಲಿ 1, 079 ರೂಪಾಯಿ ಬದಲು 1,129 ರೂಪಾಯಿ ಹಾಗೂ ಚೆನ್ನೈನಲ್ಲಿ 1, 068.50 ರೂಪಾಯಿ ಬದಲಿಗೆ 1,118.5 ರೂಪಾಯಿಯಷ್ಟು ದುಬಾರಿಯಾಗಿದೆ. ಹೊಸ ದರಗಳು ಇಂದಿನಿಂದ ಜಾರಿಗೆ ಬರಲಿವೆ.

ಇಂದಿನಿಂದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯೂ ಹೆಚ್ಚಳವಾಗಿದ್ದು, ದೆಹಲಿಯಲ್ಲಿ ರೂ.1,769 ಬದಲಿಗೆ ರೂ.2, 119.5ಕ್ಕೆ ದೊರೆಯಲಿದೆ. ಕೋಲ್ಕತ್ತಾದಲ್ಲಿ 1,870 ರೂಪಾಯಿ ಇದ್ದದ್ದು ಈಗ 2,221.5 ರೂಪಾಯಿ ಆಗಿದೆ. ಮುಂಬೈನಲ್ಲಿ ಇದರ ಬೆಲೆ ಪ್ರಸ್ತುತ 1,721 ಯಿಂದ 2,071.50 ರೂಪಾಯಿಗೆ ಏರಿಕೆಯಾಗಿದೆ. ಚೆನ್ನೈನಲ್ಲಿ 1,917 ರೂಪಾಯಿಗೆ ಸಿಗುತ್ತಿದ್ದ ಸಿಲಿಂಡರ್ ಈಗ 2,268ಕ್ಕೆ ಏರಿಕೆಯಾಗಿದೆ.

ಸ್ಥಳೀಯ ತೆರಿಗೆಗಳನ್ನು ಅವಲಂಬಿಸಿ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಗಳು ಒಂದು ರಾಜ್ಯದಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಇಂಧನ ಚಿಲ್ಲರೆ ವ್ಯಾಪಾರಿಗಳು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ತಿಂಗಳ ಆರಂಭದಲ್ಲಿ ಪರಿಷ್ಕರಿಸುತ್ತಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ದೇಶೀಯ ಎಲ್‌ಪಿಜಿ ಬೆಲೆಗಳ ಮೇಲೆ ಪರಿಣಾಮ ಬೀರುತ್ತವೆ.

ಪ್ರತಿ ಕುಟುಂಬವು ಒಂದು ವರ್ಷದಲ್ಲಿ ಸಬ್ಸಿಡಿ ದರದಲ್ಲಿ ತಲಾ 14.2 ಕೆಜಿಯ 12 ಸಿಲಿಂಡರ್‌ಗಳಿಗೆ ಅರ್ಹವಾಗಿದೆ. ಅದರಾಚೆಗೆ, ಗ್ರಾಹಕರು ಎಲ್‌ಪಿಜಿ ಸಿಲಿಂಡರ್‌ಗಳ ಹೆಚ್ಚುವರಿ ಖರೀದಿಗೆ ಮಾರುಕಟ್ಟೆ ಬೆಲೆಯನ್ನು ನೀಡಬೇಕಾಗುತ್ತದೆ. ಪಹಲ್ (ಎಲ್‌ಪಿಜಿ ನೇರ ಲಾಭ ವರ್ಗಾವಣೆ) ಯೋಜನೆಯಡಿ, ಗ್ರಾಹಕರು ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯುತ್ತಾರೆ. ಈ ಸಬ್ಸಿಡಿಯು ವಿದೇಶಿ ವಿನಿಮಯ ದರಗಳು, ಕಚ್ಚಾ ತೈಲ ಬೆಲೆಗಳಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ದರವನ್ನು ಕೊನೆಯ ಬಾರಿಗೆ 2022 ರಲ್ಲಿ ಪರಿಷ್ಕರಿಸಲಾಗಿತ್ತು. ಕಳೆದ ವರ್ಷ ನಾಲ್ಕು ಬಾರಿ ಸಿಲಿಂಡರ್ ಬೆಲೆ ಹೆಚ್ಚಿಸಲಾಗಿತ್ತು. ಮಾರ್ಚ್‌ನಲ್ಲಿ 50 ರೂಪಾಯಿ, ಜುಲೈನಲ್ಲಿ 50 ರೂಪಾಯಿ, ಮೇ ತಿಂಗಳಲ್ಲಿ ಒಮ್ಮೆ 50 ರೂ. ಮತ್ತೊಮ್ಮೆ 3.50 ರೂಪಾಯಿ ಏರಿಕೆ ಮಾಡಲಾಗಿತ್ತು.

2023 ರಲ್ಲಿ, ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು ಜನವರಿ 1 ರಂದು 25 ರೂಪಾಯಿ ಹೆಚ್ಚಿಸಲಾಯಿತು, ದೆಹಲಿಯಲ್ಲಿ 1,768 ರೂಪಾಯಿಯಿತ್ತಿ, ಈ ವರ್ಷದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇದು ಎರಡನೇ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಮಂಗಳವಾರ 2% ರಷ್ಟು ಏರಿಕೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏರ್‌ಟೆಲ್ ಮೊಬೈಲ್ ಗ್ರಾಹಕರಿಗೆ ಬಿಗ್‌ ಶಾಕ್‌:

Wed Mar 1 , 2023
ಬಾರ್ಸಿಲೋನಾ: ಭಾರ್ತಿ ಏರ್‌ಟೆಲ್ ಈ ವರ್ಷ ಎಲ್ಲಾ ಯೋಜನೆಗಳಲ್ಲಿ ಮೊಬೈಲ್ ಫೋನ್ ಕರೆ ಮತ್ತು ಡೇಟಾ ದರಗಳನ್ನು ಹೆಚ್ಚಿಸಲು ನೋಡುತ್ತಿದೆ ಎಂದು ಟೆಲಿಕಾಂ ಸಂಸ್ಥೆಯ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಇಲ್ಲಿ ಹೇಳಿದ್ದಾರೆ. ಕಂಪನಿಯು ಕಳೆದ ತಿಂಗಳು ತನ್ನ ಕನಿಷ್ಠ ರೀಚಾರ್ಜ್‌ನ ಬೆಲೆಯನ್ನು ಅಥವಾ 28 ದಿನಗಳ ಮೊಬೈಲ್ ಫೋನ್ ಸೇವಾ ಯೋಜನೆಗೆ ಪ್ರವೇಶ ಮಟ್ಟವನ್ನು ಸುಮಾರು 57 ಪ್ರತಿಶತದಷ್ಟು ಹೆಚ್ಚಿಸಿದೆ. ಟೆ ಲಿಕಾಂ ವ್ಯವಹಾರದಲ್ಲಿ ಬಂಡವಾಳದ ಮೇಲಿನ ಆದಾಯವು […]

Advertisement

Wordpress Social Share Plugin powered by Ultimatelysocial