ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಕೊರೋನಾ ಸೋಂಕಿತರ ಪತ್ತೆಗಾಗಿ ಪರೀಕ್ಷೆ ಕೂಡ ಅಷ್ಟೇ ತ್ವರಿತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಇದುವರೆಗೆ ಒಂದು ಲಕ್ಷ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಸಚಿವ ಸುಧಕಾರ್ ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿರುವ 60 ಲ್ಯಾಬ್ ಗಳಿಂದ 10 ಸಾವಿರ ಪರೀಕ್ಷೆಯನ್ನು ಪ್ರತಿ ದಿನ ನಡೆಸುವ ಸಾಮರ್ಥ್ಯ ಬರಲಿದೆ.
ಕರ್ನಾಟಕ 1 ಲಕ್ಷ ಕೊರೋನಾ ಪರೀಕ್ಷೆಯನ್ನು ಮುಗಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲಾಗಿದೆ. ಈ ಮೂಲಕ ಕೊರೋನಾ ಸೋಂಕು ಪತ್ತೆ ಕಾರ್ಯಕ್ಕಾಗಿ ಭರದಿಂದ ಸಾಗಿದೆ. ರಾಜ್ಯದಲ್ಲಿ 60 ಕೊರೋನಾ ಪತ್ತೆ ಪರೀಕ್ಷಾ ಕೇಂದ್ರಗಳು ಈ ತಿಂಗಳ ಅಂತ್ಯಕ್ಕೆ ಆರಂಭವಾಗಲಿವೆ. ಹೀಗಾಗಿ ಈ ತಿಂಗಳ ಅಂತ್ಯಕ್ಕೆ ಪ್ರತಿದಿನ ರಾಜ್ಯದಲ್ಲಿ 10 ಸಾವಿರ ಕೊರೋನಾ ಪರೀಕ್ಷೆ ಮಾಡುವಂತ ಸಾಮರ್ಥ ಹೆಚ್ಚಲಿದೆ. ಹೊಸ ದಾಖಲೆಯನ್ನು ರಾಜ್ಯ ಸರ್ಕಾರ ನಿರ್ಮಿಸಲಿದೆ ಎಂದು ಹೇಳಿದ್ದಾರೆ.
ವರದಿ:ಪೊಲಿಟಿಕಲ್ ಬ್ಯೂರೋ ಸ್ಪೀಡ್