ಭಾರತವನ್ನು ಎಲ್ಲಿ ವಿಭಜಿಸಿದ್ದೀರೋ ಅಲ್ಲೇ ಭಾರತ್ ಜೋಡೋ ಮಾಡಿ

ಇವತ್ತು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶಿಸಿಸಿದೆ. ಈ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಭಾರತವನ್ನು ಎಲ್ಲಿ ವಿಭಜನೆ ಮಾಡಿದ್ದರೋ ಅಲ್ಲಿ ಭಾರತ್ ಜೋಡೋ ಮಾಡಿ ಎಂದು ಟೀಕೆ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ, ‘ಪಾಕ್ ಆಕ್ರಮಿತ ಕಾಶ್ಮೀರ ಯಾರ ಕೊಡುಗೆ? ಹಿಮಾಲಯದ ನೆಲದಲ್ಲಿ ಒಂದು ಹುಲ್ಲು ಕಡ್ಡಿಯೂ ಬೆಳೆಯುವುದಿಲ್ಲ ಎಂದು ನೆಹರು ಹೇಳಿದ್ದರು. ಹಾಗಾಗಿ ಹಿಮಾಲಯವನ್ನು ಬಿಟ್ಟುಕೊಡಲಾಯಿತು. ತೀನ್ ಭಿಗಾದಲ್ಲಿ ಭಾರತ ಜೋಡೋ ಮಾಡಿ. ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಭಾರತ ಜೋಡೋ ಮಾಡಿ. ರಾಹುಲ್ ಗಾಂಧಿ ಭಾರತದಲ್ಲಿ ಭಾರತ್ ಜೋಡೋ ಮಾಡುವ ಅಗತ್ಯವಿಲ್ಲ’ ಎಂದು ವ್ಯಂಗ್ಯವಾಡಿದರು.ಪಾಕಿಸ್ತಾನ , ಚೀನಾ, ಬಾಂಗ್ಲಾ ಗಡಿಯಲ್ಲಿ ನಿಮ್ಮ ಯಾತ್ರೆ ಮಾಡಿ ಎಂದ ಸಚಿವೆ, ಪಾಕಿಸ್ತಾನ ಜಿಂದಾಬಾದ್ ಅಂದವರ ಜೊತೆ ಯಾತ್ರೆ ಮಾಡುತ್ತಾ ಇದ್ದೀರಿ. ಭಾರತ್ ಜೋಡೋ ಮಾಡ್ತಾ ಇದ್ದೀರಾ ? ಭಾರತ್ ತೋಡೋ ಮಾಡ್ತಾ ಇದ್ದೀರಾ? ಸ್ಪಷ್ಟಪಡಿಸಿ ಎಂದು ಹೇಳಿದ್ದಾರೆ.ಅತ್ತ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಕೂಡ, ಕಾಂಗ್ರೆಸ್ ಭಾರತ್ ಜೋಡೋ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾರತ ಜೋಡಿಸುವುದನ್ನ ಬಿಜೆಪಿ ನೋಡಿ ಕಾಂಗ್ರೆಸ್ ಕಲಿಯಲಿ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು. ಈ ಬಗ್ಗೆ ಮಾತಾಡಿದ ಅವರು, ವಾಜಪೇಯಿ ಕಾಲದಲ್ಲಿ ಸುವರ್ಣ ಚತುಷ್ಪಥ ಹೆದ್ದಾರಿ ನಿರ್ಮಾಣವಾಯ್ತು. ಮೋದಿ ಕಾಲದಲ್ಲಿ ದೇಶದಲ್ಲಿ ರಸ್ತೆ, ವಿಮಾನ, ರೈಲು ಸಂಪರ್ಕ ಆಗ್ತಿದೆ. ಭಾರತವನ್ನು ಜೋಡಿಸುವುದಕ್ಕೆ ನಡಿಗೆ ಪ್ರಾರಂಭಿಸಿರುವವರು ‘ಭಾರತ ತೋಡೋ’ ತಂಡದ ಸಹವಾಸವನ್ನು ಬಿಡಲಿ ಎಂದರು.
‘ದಸರಾ ಹೊಸ್ತಿಲಲ್ಲಿ ರಾಹುಲ್ ಗಾಂಧಿ ಮೈಸೂರಿಗೆ ಬರುತ್ತಿದ್ದು, ನೀವು ಬರುವ ನಂಜನಗೂಡು ಹೆದ್ದಾರಿ ಮೋದಿ ಕಾಲದಲ್ಲಿ ನಿರ್ಮಾಣವಾಗಿದ್ದು. ಹಾಗೆಯೇ ಬರುವಾಗ ಮೈಸೂರು ಏರ್ಪೋರ್ಟ್ ನೋಡಿಕೊಂಡು ಬನ್ನಿ. ಮೈಸೂರು – ಬೆಂಗಳೂರು ಹೆದ್ದಾರಿ ಸಾಕಷ್ಟು ಅಭಿವೃದ್ಧಿ ಆಗಿದ್ದು, ಮೋದಿ ಸರ್ಕಾರ ಹೇಗೆ ಭಾರತವನ್ನು ಜೋಡಿಸಿದೆ ಎಂಬುದನ್ನು ನೋಡಿಕೊಂಡು ಹೋಗಿ ಎಂದರು.ಮುಂದಿನ ಐದು ವರ್ಷಗಳ ಬಳಿಕ ಮತ್ತೊಂದು ಯಾತ್ರೆ ಕೈಗೊಳ್ಳಿ. ಆಗ ದೆಹಲಿ ಅಥವಾ ಇಟಲಿಯಿಂದ ನೇರ ಮೈಸೂರಿಗೆ ಬಂದು ಲ್ಯಾಂಡ್ ಆಗಬಹುದು. ಅಂಥ ವ್ಯವಸ್ಥೆಯು ಸಾಧ್ಯವಾಗಲಿದೆ. ಇನ್ನು ಕಾಂಗ್ರೆಸ್ ಗೆ 25 ವರ್ಷ ಭವಿಷ್ಯವಿಲ್ಲ, ಅಲ್ಲಿವರೆಗೆ ಬಿಜೆಪಿ ಸರ್ಕಾರ ಇರುತ್ತೆ. ಮತ ಪ್ರಚಾರಕ ಪಾದ್ರಿಯನ್ನು ಭೇಟಿ ಮಾಡಿ ಆರಂಭವಾದ ಪಾದಯಾತ್ರೆ ಇದು. ಜೀಸಸ್ ಒಬ್ಬನೇ ದೇವರು ಎನ್ನುವವನನ್ನ ನೀವು ಕೇರಳದಲ್ಲಿ ಭೇಟಿ ಮಾಡಿದ್ದು, ಇದರಿಂದ ನಿಮ್ಮ ಉದ್ದೇಶ ಏನು ಎಂಬುದು ಗೊತ್ತಾಗಿದೆ. ಪಾದ್ರಿಯನ್ನು ಬದಿಗಿಟ್ಟು ಚಾಮುಂಡಿಗೆ ನಮಸ್ಕರಿಸಿ‌, ನಾಡಹಬ್ಬ ದಸರಾದಲ್ಲಿ ಭಾಗಿಯಾಗಿ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮೆದುಳು ತಿನ್ನುವ ಅಮೀಬಾ ಬಗ್ಗೆ ಗೊತ್ತಾ?

Thu Dec 29 , 2022
ಇತ್ತೀಚಿಗಷ್ಟೇ 50 ರ ಪ್ರಾಯದ ಸೌತ್ ಕೋರಿಯಾದ ವ್ಯಕ್ತಿಯೊಬ್ಬ ಬ್ರೈನ್ ಇಟಿಂಗ್ ಅಮೀಬಾದಿಂದುಂಟಾದ ವಿಪರೀತವಾದ ಲಕ್ಷಣಗಳಿಂದ ನರಳಿ ಮೃತಪಟ್ಟಿರುವಂತಹ ಸುದ್ದಿಯನ್ನು ಕೋರಿಯನ್ ಟೈಮ್ಸ್ ಎಂಬ ಮಾಧ್ಯಮವು ವರದಿ ಮಾಡಿದ್ದನ್ನು ನೋಡಿದ್ದೇವೆ. ಹಾಗಾದರೆ, ಈ ಭಯಾನಕ ಮೆದುಳು ತಿನ್ನುವಂತಹ ಅಮೀಬಾದಿಂದ ಉಂಟಾಗುವ ಲಕ್ಷಣಗಳ ಬಗ್ಗೆ ತಿಳಿಯೋಣ. ಇತ್ತೀಚಿಗಷ್ಟೇ 50 ರ ಪ್ರಾಯದ ಸೌತ್ ಕೋರಿಯಾದ ವ್ಯಕ್ತಿಯೊಬ್ಬರು ನೇಗ್ಲೇರಿಯಾ ಫೌಲೆರಿ ಎಂಬ ಅಮೀಬಾದಂತಹ ಜೀವಿಯಿಂದ ಮೃತಪಟ್ಟಿರುವುದಾಗಿ ಕೋರಿಯನ್ ಟೈಮ್ಸ್ ವರದಿ  ಮಾಡಿದೆ. ಇದನ್ನು […]

Advertisement

Wordpress Social Share Plugin powered by Ultimatelysocial