ಮೆದುಳು ತಿನ್ನುವ ಅಮೀಬಾ ಬಗ್ಗೆ ಗೊತ್ತಾ?

ಇತ್ತೀಚಿಗಷ್ಟೇ 50 ರ ಪ್ರಾಯದ ಸೌತ್ ಕೋರಿಯಾದ ವ್ಯಕ್ತಿಯೊಬ್ಬ ಬ್ರೈನ್ ಇಟಿಂಗ್ ಅಮೀಬಾದಿಂದುಂಟಾದ ವಿಪರೀತವಾದ ಲಕ್ಷಣಗಳಿಂದ ನರಳಿ ಮೃತಪಟ್ಟಿರುವಂತಹ ಸುದ್ದಿಯನ್ನು ಕೋರಿಯನ್ ಟೈಮ್ಸ್ ಎಂಬ ಮಾಧ್ಯಮವು ವರದಿ ಮಾಡಿದ್ದನ್ನು ನೋಡಿದ್ದೇವೆ. ಹಾಗಾದರೆ, ಈ ಭಯಾನಕ ಮೆದುಳು ತಿನ್ನುವಂತಹ ಅಮೀಬಾದಿಂದ ಉಂಟಾಗುವ ಲಕ್ಷಣಗಳ ಬಗ್ಗೆ ತಿಳಿಯೋಣ. ಇತ್ತೀಚಿಗಷ್ಟೇ 50 ರ ಪ್ರಾಯದ ಸೌತ್ ಕೋರಿಯಾದ ವ್ಯಕ್ತಿಯೊಬ್ಬರು ನೇಗ್ಲೇರಿಯಾ ಫೌಲೆರಿ ಎಂಬ ಅಮೀಬಾದಂತಹ ಜೀವಿಯಿಂದ ಮೃತಪಟ್ಟಿರುವುದಾಗಿ ಕೋರಿಯನ್ ಟೈಮ್ಸ್ ವರದಿ  ಮಾಡಿದೆ. ಇದನ್ನು ಬ್ರೈನ್ ಇಟಿಂಗ್ ಅಮೀಬಾ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.ಕೋರಿಯಾ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಏಜನ್ಸಿ  ಉಲ್ಲೇಖಿಸಿರುವಂತೆ ಮೃತ ವ್ಯಕ್ತಿಯು ದಕ್ಷಿಣ ಕೋರಿಯಾಗೆ ಪ್ರವೇಶಿಸುವ ಮುಂಚೆ ನಾಲ್ಕು ತಿಂಗಳ ಕಾಲ ಥೈಲ್ಯಾಂಡಿನಲ್ಲಿ ಇದ್ದರೆಂದು ಹೇಳಲಾಗಿದೆ. ಡಿಸೆಂಬರ್ 21ರಂದು ವ್ಯಕ್ತಿಯು ಮೃತ ಪಟ್ಟಿರುವುದಾಗಿ ವರದಿಯಾಗಿದೆ.ನೇಗ್ಲೇರಿಯಾ ಫೌಲೆರಿ ಎಂಬುದು ಒಂದು ಬಗೆಯ ಅಮೀಬಾ ಜೀವಿಯಾಗಿದ್ದು ಸಾಮಾನ್ಯವಾಗಿ ಕೊಳಗಳು, ನದಿಗಳು, ಕೆರೆಗಳಂತಹ ತಾಜಾ ನೀರಿನ ಪ್ರದೇಶ ಹಾಗೂ ಮಣ್ಣಿನಲ್ಲಿಯೂ ಸಹ ಕಂಡುಬರುತ್ತವೆಈ ಜೀವಿಗಳಿಂದ ಕಲುಷಿತವಾದ ನೀರು, ಮನುಷ್ಯನ ಮೂಗಿನಲ್ಲಿ ಸೇರಿಕೊಂಡಾಗ, ಮನುಷ್ಯ ಇದರಿಂದ ಸೋಂಕಿಗೆ ಒಳಗಾಗುತ್ತಾನೆ ಹಾಗೂ ಇದು ಮೆದುಳಿಗೆ ಹಾನಿ ಉಂಟು ಮಾಡುತ್ತದೆ. ಈ ಸ್ಥಿತಿಯನ್ನು ಪ್ರೈಮರಿ ಅಮೀಬಿಕ್ ಮೆನಿಂಗೋಎನ್ಸೆಫಾಲಿಟಿಸ್ (PAM) ಎಂದು ಕರೆಯಲಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮತ್ತೊಂದು IAS ಕಪಲ್, ಪ್ರೀತಿ ಅರಳಲು ಹಾಟ್ ಸ್ಪಾಟ್ ಆಯ್ತಾ ಮಸ್ಸೂರಿ!

Thu Dec 29 , 2022
  ಕಷ್ಟುಪಟ್ಟು ಓದಿ ಯುಪಿಎಸ್ ಸಿ ಪ್ರಿಲಿಮ್ಸ್- ಮುಖ್ಯ ಪರೀಕ್ಷೆಗಳನ್ನು ಬರೆದು, ಸಂದರ್ಶನದಲ್ಲಿ ಸ್ಕೋರ್ ಮಾಡಿದ ಬಳಿಕವಷ್ಟೇ IAS, IPS ಅಧಿಕಾರಿಗಳಾಗಲು ಸಾಧ್ಯ. ಮುಂದಿನ ನಿಲ್ದಾಣವೇ ಮಸ್ಸೂರಿ. ಇಲ್ಲಿಯೇ ಎಲ್ಲಾ ಯುಪಿಎಸ್ ಸಿ ಸಾಧಕರಿಗೆ ತರಬೇತಿ ನೀಡಲಾಗುತ್ತದೆ. ಮಸ್ಸೂರಿ ಟ್ರೈನಿಂಗ್ ಕ್ಯಾಂಪ್, ಸುಂದರ ಸ್ಥಳ ಮಾತ್ರವಲ್ಲ ಅನೇಕ IAS ಅಧಿಕಾರಿಗಳ ಪ್ರೇಮ ಕಥೆಯ ಆರಂಭಿಕ ಸ್ಪಾಟ್ ಅಂತಲೂ ಹೇಳಬಹುದು.ಯುಪಿಎಸ್ ಸಿ ಯಶಸ್ಸಿನ ನಂತರ ಹಾಗೂ ಭಾರತದಾದ್ಯಂತ ವಿವಿಧೆಡೆ ಪೋಸ್ಟಿಂಗ್ ಆಗುವ […]

Advertisement

Wordpress Social Share Plugin powered by Ultimatelysocial