ಚೀನಾದ ದಾಳಿಗೆ : ಭಾರತ ಪ್ರತಿದಾಳಿ ಸಜ್ಜಾದ ಸೈನಿಕರು

ಭಾರತ ಹಾಗೂ ಚೀನಾ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಕೂಡಾ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಭಾರತ ಈಗ ಚೀನಾದ ಗಡಿಯಲ್ಲಿ ಭಾರತದ ಬ್ರಹ್ಮಾಸ್ತ್ರ ಎಂದೇ ಕರೆಯಲ್ಪಡುವ ಬೋಫೋರ್ಸ್‌ ಗನ್‌ಗಳನ್ನ ನಿಯೋಜಿಸಿದೆ.

ಭಾರತೀಯ ಸೈನಿಕರು ಚೀನಾದ ಕಡೆಯಿಂದ ಯಾವುದೇ ಬೆದರಿಕೆಯನ್ನು ಎದುರಿಸಲು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತವಾಂಗ್ ಸೆಕ್ಟರ್‌ನಲ್ಲಿ ಡ್ರಿಲ್ ಕಾರ್ಯಾಚರಣೆಗಿಳಿದಿದ್ದು ಅದರ ಪ್ರದರ್ಶನ ನಡೆಸಿದರು.

ಭಾರತೀಯ ಸೈನಿಕರು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತವಾಂಗ್ ಸೆಕ್ಟರ್‌ನಲ್ಲಿ ಶತ್ರು ಟ್ಯಾಂಕ್‌ಗಳನ್ನು ನಾಶಮಾಡಲು ಯುದ್ಧ ಕವಾಯತು ಪ್ರದರ್ಶಿಸಿದರು.

ಭಾರತೀಯ ಸೇನೆಯ ಸೈನಿಕರು ಅರುಣಾಚಲ ಪ್ರದೇಶದ ಪೂರ್ವ ವಲಯದ ಒರಟಾದ ಹವಾಮಾನ ಪರಿಸ್ಥಿತಿಗಳು ಮತ್ತು ಭೂಪ್ರದೇಶಗಳಲ್ಲಿ ಆಕ್ರಮಣಕಾರಿ ತರಬೇತಿ, ತೀವ್ರ ವ್ಯಾಯಾಮ, ಕಸರತ್ತು ಮತ್ತು ಏಕಾಗ್ರತೆಗಾಗಿ ಧ್ಯಾನದ ಮೊರೆ ಹೋಗುತ್ತಿದ್ದಾರೆ, ಅವರಿಗೆ ಅಲ್ಲಿ ಕಠಿಣ ತರಬೇತಿ ನೀಡಲಾಗುತ್ತಿದೆ.

ಸದಾ ಒಂದಿಲ್ಲೊಂದು ಕಾರಣವನ್ನಿಟ್ಟುಕೊಂಡು ಭಾರತದೊಂದಿಗೆ ಅರುಣಾಚಲ ಪ್ರದೇಶದ ಗಡಿಯಲ್ಲಿ ಕ್ಯಾತೆ ತೆಗೆಯುವ ಚೀನಾಗೆ ತಿರುಗೇಟು ನೀಡಲು ಭಾರತೀಯ ಸೇನೆ ಸಜ್ಜಾಗಿದೆ. ಅಲ್ಲಿನ ಗಡಿ ಪ್ರದೇಶದ ಉದ್ದಕ್ಕೂ ಇದೀಗ ಬೋಫೋರ್ಸ್​ ಫಿರಂಗಿ ನಿಯೋಜಿಸಿದೆ.

ಅರುಣಾಚಲ ಪ್ರದೇಶ ಗಡಿಗೆ ಹೊಂದಿಕೊಂಡಿರುವ ಎಲ್​ಎಸಿ(ಗಡಿ ರೇಖೆಯಲ್ಲಿ ಚೀನಾ ಯೋಧರ ಚಟುವಟಿಕೆ ಹೆಚ್ಚಾಗಿರುವ ಬೆನ್ನಲ್ಲೇ ಭಾರತ ಈ ನಿರ್ಧಾರ ಕೈಗೊಂಡಿದೆ. ಬೋಫೋರ್ಸ್​ ಫಿರಂಗಿ ನಿಯೋಜನೆ ಮಾಡಿ ಹೆಚ್ಚಿನ ಕಣ್ಗಾವಲು ಇಟ್ಟಿದೆ.

ಕಳೆದ ಕೆಲ ದಿನಗಳ ಹಿಂದೆ ಭಾರತದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡುವುದಕ್ಕೂ ಚೀನಾ ವಿರೋಧ ವ್ಯಕ್ತಪಡಿಸಿತ್ತು. ಇದಾದ ಬಳಿಕ ಗಡಿಯಲ್ಲಿ ಭಾರತ ಹೆಚ್ಚಿನ ಯೋಧರ ನಿಯೋಜನೆ ಮಾಡಿದೆ. ಜೊತೆಗೆ ಯಾವುದೇ ರೀತಿಯ ದುಷ್ಕೃತ್ಯ ಎದುರಿಸಲು ತಯಾರಾಗಿದೆ.

ಕಳೆದ ವರ್ಷ ಭಾರತೀಯ ಹಾಗೂ ಚೀನಾ ಯೋಧರ ನಡುವೆ ಗಾಲ್ವಾನ್​ ವ್ಯಾಲಿಯಲ್ಲಿ ಘರ್ಷಣೆ ಉಂಟಾಗಿತ್ತು. ಇದಾದ ಬಳಿಕ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಯಾವುದೇ ರೀತಿಯ ದಾಳಿ ಕೂಡ ಎದುರಿಸಲು ಭಾರತೀಯ ಸೇನೆ ಇದೀಗ ಸನ್ನದ್ಧಗೊಂಡಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ಭಾರತೀಯ ಸೇನೆ ಗಡಿಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಧರ ಜಮಾವಣೆ ಸಹ ಮಾಡಿದೆ.

ಪೂರ್ವ ಲಡಾಕ್‌ನಲ್ಲಿ ಚೀನಾ ಸೇನೆ ಜಮಾವಣೆ: ಪೂರ್ವ ಲಡಾಕ್‌ನಲ್ಲಿ ಚೀನಾ ಸೇನಾ ಜಮಾವಣೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಭಾರತದೊಂದಿಗೆ ಮತ್ತೊಮ್ಮೆ ಕ್ಯಾತೆ ತೆಗೆಯಲು ವೇದಿಕೆ ಸಿದ್ಧಪಡಿಸುತ್ತಿದೆ.

ಅದರಲ್ಲೂ ಮುಂಚೂಣಿ ನೆಲೆಗಳಲ್ಲಿ ನೆರೆ ದೇಶದ ಸೈನಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಉಭಯ ದೇಶಗಳ ನಡುವೆ ಮತ್ತೊಂದು ಗಡಿ ಸಂಘರ್ಷದ ಆತಂಕಕ್ಕೆ ದಾರಿ ಮಾಡಿದೆ

ಗಡಿಯಲ್ಲಿ ಭದ್ರತೆ ಪರಿಶೀಲನೆಗೆ ಲಡಾಕ್‌ಗೆ ಭೇಟಿ ನೀಡಿದ ಭೂಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ. ನರಾವಣೆ ಅವರೇ ಸ್ವತಃ ಚೀನಾದ ಸೇನಾ ಜಮಾವಣೆ ಹೆಚ್ಚಳ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಪೂರ್ವ ಲಡಾಕ್‌ನ ಗಲ್ವಾನ್‌ ಕಣಿವೆಯಲ್ಲಿ ನಡೆದ ಸಂಘರ್ಷದ ಬಳಿಕ ಉಭಯ ದೇಶಗಳು ಸೇನೆ ಹಿಂತೆಗೆತಕ್ಕೆ ಹಲವು ಸುತ್ತಿನ ಸಭೆಗಳಲ್ಲಿ ಸಮ್ಮತಿ ಸೂಚಿಸಿದ್ದರೂ ಚೀನಾ ಮತ್ತೆ ಮಾತು ತಪ್ಪುವ ಮೂಲಕ ಹಳೆ ಚಾಳಿ ಮುಂದುವರಿಸಿದೆ.

”ಪೂರ್ವ ಲಡಾಕ್‌ ಮತ್ತು ಉತ್ತರ ಭಾಗದಲ್ಲಿ ಬಹುತೇಕ ಪೂರ್ವ ಕಮಾಂಡ್‌ವರೆಗೆ ಚೀನಾದ ಸೈನಿಕ ನಿಯೋಜನೆ ಗಣನೀಯವಾಗಿ ಹೆಚ್ಚಿದೆ. ಅದರಲ್ಲೂ ಮುಂಚೂಣಿ ನೆಲೆಗಳಲ್ಲಿ ಸೇನೆಯ ಹೆಚ್ಚಳವು ಗಂಭೀರ ವಿಚಾರ,” ಎಂದು ಅವರು ಹೇಳಿದ್ದಾರೆ.

ಭಾರತದ ವಿರುದ್ಧ ಷಡ್ಯಂತ್ರ ರೂಪಿಸಲು ಪಾಕ್‌ ಜತೆ ಚೀನಾ ಕೈಜೋಡಿಸಿದ್ದು, ಚೀನಾದ ಸೇನೆಯಲ್ಲಿ ಪಾಕಿಸ್ತಾನದ ಲೆಫ್ಟಿನೆಂಟ್‌ ಕರ್ನಲ್‌ಗಳನ್ನು ನೇಮಿಸಿಕೊಳ್ಳಲಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಅದರಲ್ಲೂ ಭಾರತ – ಚೀನಾ ಗಡಿ ಕಾವಲಿಗೆ ನಿಯೋಜನೆಗೊಂಡಿರುವ ‘ವೆಸ್ಟರ್ನ್‌ ಥಿಯೇಟರ್‌ ಕಮಾಂಡ್‌’ಗೆ ಈ ಅಧಿಕಾರಿಗಳನ್ನು ನೇಮಿಸಿರುವುದು ಭಾರತದ ಕಳವಳಕ್ಕೆ ಕಾರಣವಾಗಿದೆ.

 

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೌಲಿಂಗ್‌ನಲ್ಲೂ ಮಿಂಚಿದ ವಿರಾಟ್ ಕೊಹ್ಲಿ

Thu Oct 21 , 2021
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯ ದುಬೈನಲ್ಲಿ ನಡೆಯಿತು.‌ ಈ ಪಂದ್ಯದಲ್ಲಿ ಭಾರತವನ್ನ ರೋಹಿತ್ ಶರ್ಮಾ ಮುನ್ನಡೆಸಿದ್ದು, ತಂಡದಲ್ಲಿ ಕೇವಲ ಐದು ಬೌಲರ್‌ ಗಳಿದ್ದರು. 6 ನೇ ಬೌಲರ್ ಆಗಿ ಯಾರು ಕಣಕ್ಕಿಳಿಯಬಹುದೆಂಬ ಕುತೂಹಲ ಇದ್ದು, 7 ನೇ ಓವರ್‌ ವೇಳೆ ರೋಹಿತ್‌ ಶರ್ಮಾ ಅವರು ಬೌಲಿಂಗನ್ನ ವಿರಾಟ್‌ ಕೊಹ್ಲಿ ಅವರಿಗೆ ನೀಡಿ ಅಚ್ಚರಿ ಮೂಡಿಸಿದರು. ಗ್ಲೆನ್‌ ಮ್ಯಾಕ್ಸವೆಲ್‌ ಹಾಗು ಸ್ಟೀವ್‌ ಸ್ಮಿತ್‌ ಅವರಿಗೆ ಬೌಲಿಂಗ್‌ ಮಾಡಿದ […]

Advertisement

Wordpress Social Share Plugin powered by Ultimatelysocial