ಹಿಜಾಬ್‌-ಕೇಸರಿ ವಿವಾದಕ್ಕೆ ಕಾಲೇಜುಗಳಿಗೆ ʼರಜೆ ಘೋಷಣೆʼ ,ಹಲವೆಡೆ ಲಾಠಿ ಚಾರ್ಚ್‌,ಶಾಲಾ ಬಸ್‌ ಮೇಲೂ ಕಲ್ಲು ತೂರಟ.

ಇಂದು ಉಡುಪಿ ಜಿಲ್ಲೆಯ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ವಿದ್ಯಾರ್ಥಿನಿಗಳು ಕೇಸರಿ ಶಾಲು ಜೊತೆಗೆ, ಕೇಸರಿ ಪೇಟ ಧರಿಸಿ ಬಂದು ಪ್ರತಿಭಟನೆ ನಡೆಸಿದರು. ಒಂದೇ ಮಾತರಂ, ಜೈ ಶ್ರೀರಾಂ ಘೋಷಣೆ ಕೂಡ ಕೂಗಿದರು. ವಿದ್ಯಾರ್ಥಿಗಳ ಪ್ರತಿಭಟನೆಯಿಂದಾಗಿ ಪ್ರಾಂಶುಪಾಲರು ಮುಂದಿನ ಆದೇಶದವರೆಗೆ ಕಾಲೇಜಿಗೆ ರಜೆಯನ್ನು ಘೋಷಿಸಿ, ವಿದ್ಯಾರ್ಥಿಗಳನ್ನು ಮನಗೆ ಹೋಗುವಂತೆ ಸೂಚಿಸಿದರು.ಇತ್ತ ಶಿವಮೊಗ್ಗದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದು, ಹಿಜಾಬ್ ಗೆ ವಿರೋಧ ವ್ಯಕ್ತ ಪಡಿಸಿದರು. ಹಿಜಾಬ್ ಧರಿಸಿ ಬಂದಂತ ವಿದ್ಯಾರ್ಥಿನಿಯರು, ಈ ಹಿಂದಿನಿಂದಲೂ ನಾವು ಧರಿಸಿಕೊಂಡು ಬರ್ತಾ ಇದ್ದೇವೆ. ಈಗೇನು ಹೊಸದೇನಲ್ಲ. ಅವರು ಧರಿಸ್ತಾ ಇರೋ ಕೇಸರಿ ಶಾಲೇ ಹೊಸದು ಅಂತ ಕಿಡಿಕಾರಿದರು. ಹಿಜಾಬ್ ವರ್ಸಸ್ ಕೇಸರಿ ಶಾಲು ವಿವಾದ ತಾರಕಕ್ಕೇರಿ ಕಾಲೇಜಿನ ಆವರಣದಲ್ಲಿನ ಧ್ವಜ ಸ್ತಂಬಕ್ಕೆ ಕೇಸರಿ ಭಾವುಟವನ್ನು ಹಾರಿಸಿದಾಗ, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಲಾಠಿ ಚಾರ್ಜ್ ಕೂಡ ನಡೆಸುವಂತೆ ಆಯ್ತು. ಈ ವೇಳೆ ವಿದ್ಯಾರ್ಥಿಗಳು ಕಲ್ಲು ತೂರಾಟ ನಡೆಸಿದ ಘಟನೆಯೂ ನಡೆದಿದೆ.ಬಾಗಲಕೋಟೆಯ ಸಂಗಮೇಶ್ವರ ಕಾಲೇಜಿನಲ್ಲಿ ಹಿಜಾಬ್ ವಿರೋಧಿಸಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಕಾಲೇಜಿನಲ್ಲಿ ಅವಕಾಶ ನೀಡದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಾಂಶುಪಾಲರ ನಡುವೆ ವಾಗ್ವಾದ ಕೂಡ ನಡೆದಿದೆ. ಈ ವೇಳೆ ತಾರಕ್ಕೇರಿದ ಕಾರಣ ಕಲ್ಲು ತೂರಾಟ ನಡೆದಿರೋದಾಗಿ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಕಾಲೇಜಿನಲ್ಲಿ ಡಿಸಿ ಮೊಕ್ಕಾಂ ಹೂಡಿ, ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಜೊತೆಗೆ ಕಾಲೇಜಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಣೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PUNJAB:ಮರಳು ಗಣಿಗಾರಿಕೆಗಾಗಿ ಪಂಜಾಬ್ ಸಿಎಂ ಚನ್ನಿ ಸೋದರಳಿಯ 10 ಕೋಟಿ ರೂ.;

Tue Feb 8 , 2022
  ‘ಶೋಧನಾ ಕಾರ್ಯಾಚರಣೆಯ ಸಂದರ್ಭದಲ್ಲಿ, ಕುದ್ರತ್‌ದೀಪ್ ಸಿಂಗ್, ಭೂಪಿಂದರ್ ಸಿಂಗ್, ಸಂತೋಖ್ ಸಿಂಗ್ (ಭೂಪಿಂದರ್ ಸಿಂಗ್ ಅವರ ತಂದೆ) ಮತ್ತು ಸಂದೀಪ್ ಕುಮಾರ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ರೂ. 10 ಕೋಟಿ ಭೂಪಿಂದರ್ ಸಿಂಗ್ S/o ಸಂತೋಖ್ ಸಿಂಗ್ ಅವರಿಗೆ ಸೇರಿತ್ತು. ಇದಲ್ಲದೆ, ಭೂಪಿಂದರ್ ಸಿಂಗ್ ಅವರು ಮರಳು ಗಣಿಗಾರಿಕೆ ಕಾರ್ಯಾಚರಣೆ ಮತ್ತು ಅಧಿಕಾರಿಗಳ ವರ್ಗಾವಣೆ/ಪೋಸ್ಟಿಂಗ್‌ಗೆ ಬದಲಾಗಿ ವಶಪಡಿಸಿಕೊಂಡ ಹಣವನ್ನು ಸ್ವೀಕರಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಇಡಿ ಸೋಮವಾರ […]

Advertisement

Wordpress Social Share Plugin powered by Ultimatelysocial