ಬೌಲಿಂಗ್‌ನಲ್ಲೂ ಮಿಂಚಿದ ವಿರಾಟ್ ಕೊಹ್ಲಿ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ20 ವಿಶ್ವಕಪ್‌ನ ಅಭ್ಯಾಸ ಪಂದ್ಯ ದುಬೈನಲ್ಲಿ ನಡೆಯಿತು.‌ ಈ ಪಂದ್ಯದಲ್ಲಿ ಭಾರತವನ್ನ ರೋಹಿತ್ ಶರ್ಮಾ ಮುನ್ನಡೆಸಿದ್ದು, ತಂಡದಲ್ಲಿ ಕೇವಲ ಐದು ಬೌಲರ್‌ ಗಳಿದ್ದರು. 6 ನೇ ಬೌಲರ್ ಆಗಿ ಯಾರು ಕಣಕ್ಕಿಳಿಯಬಹುದೆಂಬ ಕುತೂಹಲ ಇದ್ದು, 7 ನೇ ಓವರ್‌ ವೇಳೆ ರೋಹಿತ್‌ ಶರ್ಮಾ ಅವರು ಬೌಲಿಂಗನ್ನ ವಿರಾಟ್‌ ಕೊಹ್ಲಿ ಅವರಿಗೆ ನೀಡಿ ಅಚ್ಚರಿ ಮೂಡಿಸಿದರು. ಗ್ಲೆನ್‌ ಮ್ಯಾಕ್ಸವೆಲ್‌ ಹಾಗು ಸ್ಟೀವ್‌ ಸ್ಮಿತ್‌ ಅವರಿಗೆ ಬೌಲಿಂಗ್‌ ಮಾಡಿದ ಕೊಹ್ಲಿ 2 ಓವರ್‌ನಲ್ಲಿ ಕೇವಲ 12 ರನ್‌ ನೀಡುವ ಮೂಲಕ ಬೌಲಿಂಗ್‌ನಲ್ಲೂ ಮಿಂಚಿದರು.

ವಿರಾಟ್ ಕೊಹ್ಲಿ ಈ ಮುಂಚೆಯೂ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಬೌಲಿಂಗ್‌ ಮಾಡಿದ್ದು, ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ತಲಾ 4 ವಿಕೆಟ್ ಪಡೆದಿದ್ದಾರೆ. ಹಾಗೆಯೇ ಕೊಹ್ಲಿ ಪ್ರಥಮ ದರ್ಜೆ ಕ್ರಿಕೆಟ್​ನಲ್ಲೂ ಕೊಹ್ಲಿ ಬೌಲಿಂಗ್ ಮಾಡಿದ್ದು, ಈ ವೇಳೆ 7 ವಿಕೆಟ್ ಪಡೆದಿದ್ದಾರೆ.

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯಇಲಾಖೆ ಸ್ಪಷ್ಟನೆ : ಜಾಗತಿಕ ತಾಪಮಾನದಿಂದ ಆರೋಗ್ಯ ಸಮಸ್ಯೆ ಹೆಚ್ಚಳ...!

Thu Oct 21 , 2021
‌ವಾಷಿಂಗ್ಟನ್‌: ಹವಾಮಾನ ಬದಲಾವಣೆಯಿಂದಾಗಿ ಆರೋಗ್ಯ ಸಮಸ್ಯೆಗಳು ತೀವ್ರಗೊಳ್ಳುತ್ತಿವೆ ಎಂದು ಬುಧವಾರ ಪ್ರಕಟವಾದ ಎರಡು ಅಧ್ಯಯನ ವರದಿಗಳಿಂದ ತಿಳಿದುಬಂದಿದೆ. ವೈದ್ಯಕೀಯ ಜರ್ನಲ್‌ ಲ್ಯಾನ್ಸೆಟ್‌ ಪ್ರಕಟಿಸಿರುವ ವಾರ್ಷಿಕ ವರದಿಯಲ್ಲಿ ಜಾಗತಿಕ ತಾಪಮಾನ ಏರಿಕೆಯಿಂದ ಉಂಟಾಗಿರುವ 44 ಜಾಗತಿಕ ಆರೋಗ್ಯ ಸೂಚಕಗಳನ್ನು ಉಲ್ಲೇಖಿಸಿದೆ. ಇದರಲ್ಲಿ ತಾಪಮಾನ ಏರಿಕೆಯಿಂದ ಸಂಭವಿಸುವ ಸಾವು, ಸಾಂಕ್ರಾಮಿಕ ರೋಗಗಳು ಮತ್ತು ಹಸಿವಿನಂತಹ ಅಂಶಗಳು ಸೇರಿವೆ. ಈ ಎಲ್ಲವೂ ಕಠಿಣ ಸವಾಲುಗಳನ್ನು ಒಡ್ಡುತ್ತಿದೆ ಎಂದು ಲ್ಯಾನ್ಸೆಟ್ ಕೌಂಟ್‌ಡೌನ್ ಯೋಜನಾ ಸಂಶೋಧನಾ ನಿರ್ದೇಶಕಿ, ಜೀವರಸಾಯನ […]

Advertisement

Wordpress Social Share Plugin powered by Ultimatelysocial