ಪ್ರತಿ ವರ್ಷ ಜಾತ್ರೆಯ ವೇಳೆ ಗಂಗಾಹೊಂಡದಿಂದ ಬಿಂದಿಗೆಗಳನ್ನ ತುಂಬಿಕೊಂಡು ಅವುಗಳಿಗೆ ಮಳೆಗಳ ಹೆಸರು ಬರೆದು ಪೂಜೆ ಸಲ್ಲಿಸುತ್ತಾರೆ.

ಪ್ರಸಕ್ತ ವರ್ಷ ಮುಂಗಾರಿನ ರೋಹುಣಿ, ಪುಷ್ಯಾ, ಪುನರ್ವಸು, ಹಾಗೂ ಹಿಂಗಾರಿನ ಸ್ವಾತಿ, ಚಿತ್ತಿ ಮಳೆಗಳು ಪೂರ್ಣವಾಗಿ ಸುರಿಯಲಿವೆ. ಹೌದು, ಬಾಗಲಕೋಟೆ ತಾಲೂಕಿನ ಕೃಷಿಕರ ಮಠ ಖ್ಯಾತಿಯ ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರೆಯ ಅಂಗವಾಗಿ ನಿನ್ನೆ ರಾತ್ರಿ ನಡೆದ ಕಡುಬಿನ ಕಾಳಗ(ಮಳೆ ಬೆಳೆ ಸೂಚನೆ) ದಲ್ಲಿ ಈ ಸೂಚನೆ ಸಿಕ್ಕಿದೆ. ಪ್ರತಿ ವರ್ಷ ಜಾತ್ರೆಯ ವೇಳೆ ಗಂಗಾಹೊಂಡದಿಂದ ಬಿಂದಿಗೆಗಳನ್ನ ತುಂಬಿಕೊಂಡು ಅವುಗಳಿಗೆ ಮಳೆಗಳ ಹೆಸರು ಬರೆದು ಪೂಜೆ ಸಲ್ಲಿಸುತ್ತಾರೆ. ಬಿಂದಿಗೆಗಳು ಬಸಿಯುವಿಕೆ ಆಧರಿಸಿ ಮಳೆ ಮಳೆ ಸೂಚನೆ ಹೊರಬೀಳುತ್ತದೆ.ಮಳೆ ಬೆಳೆ ಸೂಚನೆ ಕೇಳಲು ಸುತ್ತಮುತ್ತಲಿನ ಸಾವಿರಾರು ರೈತರು ತಡರಾತ್ರಿ ವರೆಗೂ ಕಾಯ್ದಿರುತ್ತಾರೆ.‌ನಿನ್ನೆ ರಾತ್ರಿ ನಡೆದ ಕಡುಬಿನ ಕಾಳಗದಲ್ಲಿ ಶ್ರೀಮಠದ ಮಠಾಧೀಶರಾದ ಮೇಘರಾಜ ಸ್ವಾಮೀಜಿ, ಹುಚ್ಚಪ್ಪ ಶಿರೂರ, ಮಳೆಯಪ್ಪ ಮಾಸ್ತರ ತೆಗ್ಗಿ, ರಾಮಣ್ಣ ಗಣಿ, ಅರ್ಚಕರಾದ ಸಂಜು ಪತ್ತಾರ, ಗಂಗಾಧರ ಪತ್ತಾರ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಮಹೊಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೊಯ್ಸಳ ಟೈಟಲ್ ಟ್ರ್ಯಾಕ್ ಬಿಡುಗಡೆ.

Thu Mar 2 , 2023
  ಡಾಲಿ ಧನಂಜಯ ನಾಯಕರಾಗಿ ಅಭಿನಯಿಸಿರುವ “ಹೊಯ್ಸಳ” ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿದೆ‌‌. ನಕಾಶ್ ಅಜೀಜ್  ಮಾಸ್ ಸಾಂಗೆ ಧ್ವನಿಯಾಗಿದ್ದಾರೆ. ಸಂತೋಷ್ ಆನಂದರಾಮ್ ಹಾಡು ಬರೆದಿದ್ದಾರೆ.  ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರ ಮಾರ್ಚ್ 30, ಶ್ರೀರಾಮನವಮಿ ಶುಭದಿನದಂದು ತೆರೆಗೆ ಬರಲಿದೆ.ಕಾರ್ತೀಕ್ ಗೌಡ ಹಾಗೂ ಯೋಗಿ ಜಿ ರಾಜ್ ನಿರ್ಮಿಸಿದ್ದಾರೆ. ವಿಜಯ್ ನಾಗೇಂದ್ರ ನಿರ್ದೇಶನದ ಚಿತ್ರದಲ್ಲಿ ಧನಂಜಯ, ಜಯದೇವ ಹೊಯ್ಸಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial