ಸ್ಟಾರ್ ನಟರ ಬರ್ತಡೆ ಅಂದ್ರೆನೆ ಅಭಿಮಾನಿಗಳಿಗೆ ಹುಚ್ಚು. ಒಂದು ತಿಂಗಳ ಮುಂಚಿತವಾಗಿಯೆ ತಮ್ಮ ನೆಚ್ಚಿನ ನಟನಿಗೆ ಏನ ಸ್ಪೇಷಲ್ ಗಿಫ್ಟ್ ಕೋಡೊದು ಅಂತ ಯೋಚನೆ ಮಾಡ್ತರ‍್ತಾರೆ. ಆದ್ರೆ ಕಿಚ್ಚನ ಅಭಿಮಾನಿಗಳು ೧೦೦ದಿನಗಳ ಮುಂಚಿತವಾಗಿಯೆ ೨೦೨೦ಕ್ಕೆ ಕಿಚ್ಚೋತ್ಸವ ಸೆಲೆಬ್ರೆಷನ್‌ಗೆ ರೆಡಿಯಾಗ್ತಿದಾರೆ. ಈ ಹಬ್ಬಕ್ಕೆ ನಟ ನಿರೂಪ್ ಭಂಡಾರಿ ಸುದೀಪ್ ಜನ್ಮದಿನದ ಅಂಗವಾಗಿ ವಿನ್ಯಾಸಗೊಳಿಸಿರುವ ಕಿಚ್ಚೋತ್ಸವ ವಿಶೇಷ ಸಿಡಿಪಿಯನ್ನ ೧೦೦ಡೆಸ್ ಕಿಚ್ಚೋತ್ಸವ ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ಟ್ವೀಟ್‌ರ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಟ್ವೀಟ್ ೨೪ಗಂಟೆಯಲ್ಲಿ ೧.೫ಮಿಲಿಯನ್‌ಗೂ ಹೆಚ್ಚು ಹ್ಯಾಷ್ ಟ್ಯಾಗ್ ಮಾಡಿ ದಾಖಲೆ ಬರೆದಿದೆ. ಸದ್ಯ ಸುದೀಪ್ ಹಾಗೂ ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್ ಚಿತ್ರಕ್ಕಾಗಿ ಭರ್ಜರಿ ಕಸರತ್ತು ನಡೆಸಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದು, ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ಶ್ರದ್ಧಾ ಶ್ರೀನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಕಿಚ್ಚೋತ್ಸವಕ್ಕೆ ಭರ್ಜರಿ ಸಿದ್ಧತೆ

Please follow and like us: