ಅಮೆರಿಕ: ಉತ್ತರ ಕೊರಿಯಾದ ಕ್ರೂರಿ ದೊರೆ ಕಿಮ್ ಜಾಂಗ್ ಉನ್ ಆನಾರೋಗ್ಯ ಹಿನ್ನಲೆ ಕಿಮ್ ಕ್ಷೇಮವಾಗಿದ್ದಾರೆ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ..ಈ ಟ್ರಂಪ್ ಹೇಳಿಕೆ ಎಲ್ಲಾ ಊಹಾಪೋಹಕ್ಕೆ ತೆರೆ ಎಳೆದಂತಾಗಿದೆ. ಅವರ ಆರೋಗ್ಯದ ಬಗ್ಗೆ ನನಗೆ ತುಂಬಾ ಒಳ್ಳೆಯ ಮಾಹಿತಿ ಇದೆ. ಆದರೆ ಅದರ ಬಗ್ಗೆ ನಾನು ಈಗ ಮಾತನಾಡಲು ಸಾಧ್ಯವಿಲ್ಲ ಆತನಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸುವೆ ಅಷ್ಟೇ, ಎಂದು ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ರು.
ಕಿಮ್ ಜಾಂಗ್ ಉನ್ ಸಾವನ್ನಪ್ಪಿದ್ದಾರೆ ಎಂದು ನಾನಾ ವದಂತಿ ಎಲ್ಲೆಡೆ ಹಬ್ಬಿವೆ. ಮಾಧ್ಯಮಗಳು ಅವರು ಸತ್ತಿದ್ದಾರೆ ಎಂಬ ಸುದ್ದಿಯನ್ನು ಬಿತ್ತರಿಸುತ್ತಿವೆ. ಈ ಊಹಾಪೋಹಗಳ ಮದ್ಯೆ ಟ್ರಂಪ್ ಅದೆಲ್ಲದಕ್ಕೂ ಬ್ರೇಕ್ ಹಾಕಿದ್ದಾರೆ.
ಕಿಮ್ ಜಾಂಗ್ ಉನ್ ಕ್ಷೇಮ: ಅಮೇರಿಕಾ ಅಧ್ಯಕ್ಷ ಟ್ರಂಪ್
Please follow and like us: