ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ : ಕೊರೊನಾದಿಂದ ತತ್ತರಿಸಿದ ಜನತೆಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಈ ಯೋಜನೆಯಡಿ ೩೧,೨೩೫ ಕೋಟಿ ರೂಪಾಯಿಯನ್ನು ಸುಮಾರು ೩೩ ಕೋಟಿ ಬಡವರ ಖಾತೆಗೆ ಜಮೆಮಾಡಲಾಗಿದೆ. ಈ ಕುರಿತಂತೆ ಕೇಂದ್ರದ ಹಣಕಾಸು ಇಲಾಖೆ ಮಾಹಿತಿ ನೀಡಿದ್ದು,ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ನೀಡಲಾಗಿರುವ ೩೧,೨೩೫ ಕೋಟಿ ರೂಪಾಯಿ ಪ್ಯಾಕೇಜ್ ಪೈಕಿ ೨೦.೦೫ ಕೋಟಿ ಜನಧನ್ ಮಹಿಳಾ ಖಾತೆದಾರರಿಗೆ ೧೦ ಸಾವಿರದ ೦೨೫ ಕೋಟಿ ರೂಪಾಯಿಯನ್ನು ಜಮೆ ಮಾಡಲಾಗಿದೆ. ಇನ್ನು ೨.೮೨ ಕೋಟಿ ಮಂದಿ ಹಿರಿಯ ನಾಗರಿಕರು, ವಿಧವೆಯರು, ವಿಕಲಚೇತನರ ಖಾತೆಗಳಿಗೆ ೧೪೦೫ ಕೋಟಿ ರೂ. ವಿತರಿಸಲಾಗಿದೆ. ಇದರೊಂದಿಗೆ ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಮೊದಲ ಕಂತಿನಲ್ಲಿ ೧೬,೧೪೬ ಕೋಟಿ ರೂಪಾಯಿಯನ್ನು ಸುಮಾರು ೮ ಕೋಟಿ ರೈತರ ಖಾತೆಗೆ ವರ್ಗಾಯಿಸಲಾಗಿದೆ. ಹಾಗೂ ೧೦.೬ ಲಕ್ಷ ನೌಕರರಿಗೆ ಅನುಕೂಲವಾಗಲೆಂದು ೧೬೨ ಕೋಟಿ ರೂಪಾಯಿಯನ್ನು ಇಪಿಎಫ್ ಗಾಗಿ ವಿತರಣೆ ಮಾಡಿದೆ ಎಂದು ವಿತ್ತ ಸಚಿವಾಲಯ ಮಾಹಿತಿ ನೀಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೊರೊನಾ ನಡುವೆಯು ಟ್ರಾಫಿಕ್ ಜಾಮ್

Thu Apr 23 , 2020
ಕೊರೊನಾ ಲಾಕ್  ಡೌನ್  ಹಿನ್ನೆಲೆಯಲ್ಲಿ ಸದಾ ಗಿಜಿಗುಡುತ್ತಿದ್ದ ಕಾವೇರಿ ಜಂಕ್ಷನ್ ಸಂಪೂರ್ಣ ಸ್ತಬ್ಧವಾಗಿತ್ತು. ರಸ್ತೆಗಳು  ಖಾಲಿಯಾಗಿದ್ದವು. ಆದರೆ ಇಂದು  ಮತ್ತೆ ಬೆಂಗಳೂರು ನಗರ ಮತ್ತೆ ತನ್ನ ವಾಸ್ತವ ಸ್ಥಿತಿಗೆ ಮರಳಿದಂತಾಗಿದೆ. ಸರ್ಕಾರ ಕೆಲ ಕಂಡಿಷನ್ ಹಾಕಿ ಐಟಿ ಕಂಪನಿಗಳನ್ನು ತೆರಯಲು ಅವಕಾಶ ನೀಡಿದೆ. ಹೀಗಾಗಿ ಐಟಿ ಉದ್ಯೋಗಿಗಳಿಗೆ  ಹೆಚ್ಚಾಗಿ ಪಾಸ್ ನೀಡಿರುವ ಹಿನ್ನೆಲೆ  ವಾಹನಗಳು ರೋಡಿಗಿಳಿದಿವೆ. ಕಾವೇರಿ ಜಂಕ್ಷನ್ ಬಳಿ ಟ್ರಾಫಿಕ್  ಜಾಮ್ ಆಗಿದ್ದು, ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ  […]

Advertisement

Wordpress Social Share Plugin powered by Ultimatelysocial